ನಮ್ಮ ಭೂಮಂಡಲದಲ್ಲಿ ನಮಗೆ ತಿಳಿದಿರದ ಅದೆಷ್ಟು ಜಾಗಗಳಿವೆ. ಇನ್ನೂ ಅದೆಷ್ಟು ಜಾಗಗಳು ನಿಗೂಢವಾಗಿಯೇ ಉಳಿದು ಕೊಂಡಿವೆ. ಕೆಲವು ಜಾಗಗಳನ್ನು ಗೂಗಲ್ ಮ್ಯಾಪ್ ನಲ್ಲಿ ಹುಡುಕಿದವರು ಇದ್ದಾರೆ ಅದರ ಕೆಲವೊಂದು ಸೀಕ್ರೆಟ್ ಜಾಗಗಳನ್ನು ಗೂಗಲ್ ಮ್ಯಾಪ್ ಜನರಿಂದ ಮುಚ್ಚಿಟ್ಟಿದೆ. ಈ ಲೇಖನದ ಮೂಲಕ ಗೂಗಲ್ ಮ್ಯಾಪ್ ಜನರಿಂದ ಮುಚ್ಚಿಟ್ಟ ಕೆಲವು ಸೀಕ್ರೆಟ್ ಗಳ ಬಗ್ಗೆ ತಿಳಿದುಕೊಳ್ಳೋಣ.

2001ರಲ್ಲಿ ಗೂಗಲ್ ಮ್ಯಾಪ್ ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಪರಿಚಯವಾಯಿತು. ಸ್ಯಾಟಲೈಟ್ಟ್ ತೆಗೆದ ಮ್ಯಾಪಿನ ಮೂಲಕ ಜಗತ್ತಿನ ಇಂಚಿಂಚು ಭಾಗವನ್ನು ಕುಳಿತಲ್ಲಿಯೇ ನಾವು ನೋಡಬಹುದು. ಹಿಂದಿನ ಕಾಲದಲ್ಲಿ ಸಹ ದೂರ ಪ್ರಯಾಣ ಮಾಡಲು ಕಾಲದಾಗ ಮ್ಯಾಪ್ಗಳು ಇಷ್ಟೊಂದು ಅಭಿವೃದ್ಧಿ ಹೊಂದಿರಲಿಲ್ಲ. ಹಿಂದೆ ನಾವೇ ಕುಳಿತಲ್ಲಿ ಮ್ಯಾಪ್ ಗಳನ್ನು ಬಳಸಿಕೊಂಡು ದಾರಿ ಹುಡುಕುತ್ತ ಮುಂದೆ ಹೋಗಬೇಕಿತ್ತು ಆದರೆ ಇಂದು ಹಾಗಲ್ಲ ನಾವು ಹೋಗಬೇಕಾದ ಬಾರಿಯನ್ನು ಗೂಗಲ್ ಮ್ಯಾಪ್ ನಮಗೆ ಸರಿಯಾಗಿ ತಿಳಿಸುತ್ತದೆ. ಹೀಗೆ ಈ ಮ್ಯಾಪ್ ಮೂಲಕ ಸಾಕಷ್ಟು ಜನರು ಹೊಸ ಹೊಸ ನಿಗೂಢ ಜನರನ್ನು ಹುಡುಕಿದ್ದಾರೆ. ಯುಎಸ್ ಹೈಪರ್ ಸೋನಿಕ್ ಎಸ್ಆರ್ 72 ಪ್ಲೇನ್. ಪಾರ್ಕಿಂಗ್ ಸೈಟ್ನಲ್ಲಿ ವಾಹನಗಳು ನಿಂತಿರುವುದು ಸಾಮಾನ್ಯವೇ ಆದರೆ ಹೇಗೆ ಒಬ್ಬ ವ್ಯಕ್ತಿಗೆ ಪಾರ್ಕಿನಲ್ಲಿ ಹುಡುಕುತ್ತಿರುವಾಗ ಕಂಡಿದ್ದೇ ಬೇರೆ. ಅಲ್ಲೊಂದು ವಿಚಿತ್ರವಾದ ವಾಹನ ಕಂಡಿದ್ದು ಇದೊಂದು ಏಲಿಯನ್ಸ್ ನ UF ರೀತಿಯಲ್ಲಿ ಕಂಡಿತ್ತು. ಆಶ್ಚರ್ಯದಿಂದ ವ್ಯಕ್ತಿ ಮತ್ತು ಜೂಮ್ ಮಾಡಿ ನೋಡಿದಾಗ ನಿಜಸಂಗತಿ ಬಯಲಾಗುತ್ತದೆ. ಅದು ಅಮೆರಿಕಾದ ಸೀಕ್ರೆಟ್ ಗುಧಾಚಾರದ ವಿಮಾನ ಆಗಿತ್ತು.

ಸೀಕ್ರೆಟ್ ಚೈನೀಸ್ ಶಿಪ್: ಸೌತ್ ಚೀನಾ ಸಮುದ್ರದಲ್ಲಿ ಒಂದು ವಿಚಿತ್ರ ಲೈಟುಗಳು ಗೋಚರಿಸುತ್ತಿದ್ದು ಒಂದು ಕ್ಷಣ ನೋಡಿದವರಿಗೆ ಯಾವುದೇ ಯುದ್ಧನೌಕೆ ಬೆಂಕಿಯಿಂದ ಹೊತ್ತಿ ಉರಿಯುವಂತೆ ಕಾಣಿಸುತ್ತಿತ್ತು ಇನ್ನೊಂದು ಕಡೆಯಿಂದ ನೋಡಿದರೆ ಯುದ್ಧ ನೌಕೆಯಿಂದ ಮಿಸೈಲ್ ಗಳು ಹೊರ ಹೋಮ್ಮುವ ರೀತಿ ಗೋಚರಿಸುತ್ತಿತ್ತು. ಅಕ್ಕಪಕ್ಕದಲ್ಲಿ ಬಂಗಾರದ ಬಣ್ಣದಿಂದ ಕಂಗೊಳಿಸುವ ವಸ್ತುಗಳಿದ್ದವು.ಕೆಲವರು ಇದನ್ನು ಚೀನಾದ ಸೀಕ್ರೆಟ್ ಹಡಗು ಎಂದು ಹೇಳುತ್ತಾರೆ ಆದರೆ ಇದು ಏನು ಎನ್ನುವುದು ಇದುವರೆಗೆ ಯಾರಿಗೂ ತಿಳಿಯದ ಸತ್ಯ.

ಮೂರುರವಾ ಐಲ್ಯಾಂಡ್ ಫ್ರೆಂಚ್ ಪೋಲೈನೆಸಿಯ ಇದು ಸೌಥ್ ಫೇಸಿಪಿಕ್ ನಲ್ಲಿರುವ ಪುಟ್ಟದೊಂದು ದ್ವೀಪ. ಆದರೆ ನಾವಿದನ್ನು ಗೂಗಲ್ ಮ್ಯಾಪ್ ನಲ್ಲಿ ಜೂಮ್ ಮಾಡಿ ನೋಡಿದಾಗ ಇದು ಬ್ಲರ್ ಆಗಿ ಕಾಣಿಸುತ್ತದೆ. ಇದಕ್ಕೆ ಕಾರಣವೂ ಕೂಡ ಇದೆ. ಈ ಪ್ರದೇಶವನ್ನು ಗೂಗಲ್ ಮ್ಯಾಪ್ ಜಗತ್ತಿನಿಂದ ಮುಚ್ಚಿಡುತ್ತದೆ ಇಲ್ಲಿ ನ್ಯೂಕ್ಲಿಯರ್ ಪ್ಲಾಂಟ್ ಗಳು ಇವೆ ಎಂದು ಹೇಳಲಾಗುತ್ತದೆ. ಈ ಪುಟ್ಟ ದ್ವೀಪದಲ್ಲಿ 1966 ರಿಂದ 1990 ರವರೆಗೆ ದ್ವಿಪದಲ್ಲೀ ನ್ಯೂಕ್ಲಿಯರ್ ಮಾಡಲಾಗುತ್ತಿತ್ತಂತೆ. ಇಲ್ಲಿ 181 ಬಾರಿ ನ್ಯೂಕ್ಲಿಯರ್ ಟೆಸ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತದೆ.

ಡೇಸರ್ಟ್ ಬ್ರೇತ್:ಈ ಗೂಗಲ್ ಮ್ಯಾಪ್ ನಲ್ಲಿ ನೋಡಿದಾಗ ಯಾವುದೇ ಏಲಿಯನ್ ಗಳು ಈ ಚಿತ್ರವನ್ನು ಮರುಭೂಮಿಯ ಮೇಲೆ ಬಿಡಿಸಿದ್ದಾರೆ ಎನ್ನುವ ರೀತಿ ಕಂಡುಬರುತ್ತದೆ. ಆದರೆ ಇದು ಅಂತದೇನು ಆಗಿರದೆ ಸಹರಾ ಮರುಭೂಮಿ ಯಲ್ಲಿ ನಡೆದ ಒಂದು ಆರ್ಟ್ ವರ್ಕ್ ಆಗಿದೆ. 1 ಟೀಮ್ ಇಂಥದ್ದೊಂದು ಆರ್ಟನ್ನು ಸಹಾರ ಮರುಭೂಮಿಯಲ್ಲಿ ಬಿಡಿಸಿತ್ತು.

ಏರ್ಪ್ಲೇನ್ ಭೋನಿಯಾರ್ಡ್ ಟುಕ್ಸನ್:ಇದೊಂದು ಹಳೆ ಏರೋಪ್ಲೇನ್ ಗಳನ್ನು ಸಂಗ್ರಹಿಸಿಟ್ಟ ಸ್ಥಳ. ಗೂಗಲ್ ಮ್ಯಾಪ್ ನಲ್ಲಿ ಏನಾದರೂ ನೀವು ಈ ಸ್ಥಳಗಳನ್ನು ನೋಡಿದರೆ ಅಡ್ಡ ಉದ್ದ ಸಾಲುಗಳಲ್ಲಿ ಏರೋಪ್ಲೇನ್ ಗಳ ನಿಂತಿರುವುದು ನೋಡುವುದಕ್ಕೆ ಸುಂದರವಾಗಿ ಕಾಣಿಸುತ್ತದೆ.

ಜನ್ನೆಟ್ ಐಲ್ಯಾಂಡ್ ರಷ್ಯಾ: ಗೂಗಲ್ ಮ್ಯಾಪ್ ನಲ್ಲಿ ಈ ಪ್ರದೇಶವನ್ನು ಕಪ್ಪು ಬಣ್ಣದಿಂದ ಮುಚ್ಚಿಡಲಾಗಿದೆ. ಸೈಬೀರಿಯ ಸಮುದ್ರದಲ್ಲಿರುವ ಈ ದ್ವೀಪ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ಆವೃತವಾಗಿದೆ. ಆದರೆ ಯಾಕೆ ಇದನ್ನು ಕಪ್ಪು ಬಣ್ಣದಿಂದ ಹಣದ ಮುಚ್ಚಿಡಲಾಗಿದೆ ಎನ್ನುವುದು ಯಾರಿಗೂ ತಿಳಿದಿರದ ಸತ್ಯ.

ಸ್ಯಾಂಡಿ ಐಲ್ಯಾಂಡ್ಸ್: ಫ್ರೆಂಚ್ ಟೆರಿಟರಿಗೇ ಸೇರಿದ ಈ ದ್ವೀಪವನ್ನು ಶತಮಾನಗಳ ಹಿಂದೆ ಪತ್ತೆಹಚ್ಚಲಾಗಿತ್ತು. ಕ್ಯಾಪ್ಟನ್ ಗೂಗ್ ಎಂಬಾತ 1972 ರಲ್ಲಿ ಈ ದ್ವೀಪವನ್ನು ಪತ್ತೆಹಚ್ಚಿದ. 2001 ರವರೆಗೆ ಈ ಪ್ರದೇಶವನ್ನು ಗೂಗಲ್ ಮ್ಯಾಪ್ ನಲ್ಲಿ ತೋರಿಸಲಾಗುತ್ತಿತ್ತು ಆದರೆ ಈಗ ಕಾಣೆ ಮಾಡಲಾಗಿದೆ. ಆದರೆ ಯಾಕೆ ಅನ್ನೋದು ಯಾರಿಗೂ ತಿಳಿಯದ ವಿಷಯ.

ಮರ್ಡರ್ ಕಾಟ್ ಆನ್ ಗೂಗಲ್ ಅರ್ಥ್ ಏಪ್ರಿಲ್ 2003ರಲ್ಲಿ ಗೂಗಲ್ ಸ್ಯಾಟಲೈಟ್ ನೆದರ್ ಲ್ಯಾಂಡ್ ನ ಕೆಲವೊಂದು ಫೋಟೋಗಳನ್ನು ತನ್ನ ಡಾಟಾ ಬೇಸ್ ಗಾಗಿ ತೆಗೆದುಕೊಂಡಿತ್ತು. ಈ ಫೋಟೋವನ್ನು ತೆಗೆದುಕೊಳ್ಳುವಾಗ ಅಲ್ಮೇರ್ ಪ್ರದೇಶದಲ್ಲಿ ಒಂದು ದೊಡ್ಡ ಸಾಕ್ಷಿ ಸಿಗುತ್ತದೆ. ಒಬ್ಬ ವ್ಯಕ್ತಿಯನ್ನು ಕೊಂದೂ ನದಿಯಲ್ಲಿ ಬಿಸಾಕುವ ತರ ಕಾಣಿಸುತ್ತಿತ್ತು. ಈ ಜಾಗದಲ್ಲಿ ರಕ್ತ ಹರಿದಂತೆ ಕಾಣಿಸುತ್ತಿತ್ತು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಬಯಲಾದ ಸತ್ಯ ಅಲ್ಲಿ ಒಬ್ಬ ವ್ಯಕ್ತಿ ತನ್ನ ನಾಯಿಯನ್ನು ಹಿಡಿದುಕೊಂಡು ನಿಂತಿದ್ದ ಅಷ್ಟೇ. ಅದಕ್ಕಾಗಿ ಹೇಳೋದು ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡಬೇಕು ಎಂದು. ಆ ನಾಯಿ ನೀರಿಗೆ ಇಳಿದು ಅತ್ತಿಂದಿತ್ತ ಓಡಾಡುತ್ತಿದ್ದು, ಮೇಲಿನಿಂದ ನೋಡಿದಾಗ ರಕ್ತದಂತೆ ಕಾಣಿಸುತ್ತಿತ್ತು ಅಷ್ಟೇ.

ದ ಜೀಸಸ್ ಕ್ರಿಸ್ಟ್: ಹಂಗೇರಿಯಲ್ಲಿ ಹಬ್ಬ ಗೂಗಲ್ ಮ್ಯಾಪ್ ನಲ್ಲಿ ಒಂದು ಪ್ರದೇಶವನ್ನು ಹುಡುಕುತ್ತಿರುತ್ತಾನೆ. ಆ ಸಂದರ್ಭದಲ್ಲಿ ಒಂದು ಆಕಾರ ಆತನ ಕಣ್ಣಿಗೆ ಬೀಳುತ್ತದೆ. ಅದು ಕ್ರಿಸ್ತನ ಪ್ರತಿಮೆಯಂತೆ ಗೋಚರಿಸುತ್ತಿತ್ತು.

ದ ಬ್ಯಾಡ್ ಲ್ಯಾಂಡ್ಸ್ ಗಾರ್ಡಿಯನ್ ಆಲ್ಬರ್ದಾ ಕೆನಡಾದಲ್ಲಿರುವ ಈ ಪ್ರದೇಶವನ್ನು 2006ರಲ್ಲಿ ಗೂಗಲ್ ಮ್ಯಾಪ್ ಮೂಲಕ ಪತ್ತೆ ಹಚ್ಚಲಾಯಿತು. ಮ್ಯಾಪ್ನಲ್ಲಿ ನೋಡಿದಾಗ ಈ ಪ್ರದೇಶ ತುಂಬಾನೇ ವಿಚಿತ್ರ ಆಕಾರದಲ್ಲಿ ಕಾಣಿಸುತ್ತಿತ್ತು. ಇದರಲ್ಲಿ ಒಬ್ಬ ಮನುಷ್ಯ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಿರುವಂತೆ ಗೋಚರಿಸುತ್ತದೆ. ಅಷ್ಟಕ್ಕೂ ಇಲ್ಲಿ ಕಿವಿ ಆಕಾರದಲ್ಲಿ ಕಾಣಿಸುವ ಚಿತ್ರ ಅದೊಂದು ತೈಲ ಬಾವಿ. ಇಯರ್ ಫೋನ್ ಅಂತೆ ಕಾಣುವ ರಚನೆ ರಚನೆ ತೈಲ ಬಾವಿಗೆ ಹೋಗುವ ದಾರಿ. ಎಲ್ಲಾ ಸ್ಥಳಗಳು ಗೂಗಲ್ ಮ್ಯಾಪಿನ ಕೆಲವೊಂದಿಷ್ಟು ವಿಚಿತ್ರ ಸ್ಥಳಗಳಾಗಿವೆ.

By

Leave a Reply

Your email address will not be published. Required fields are marked *