ಕೆಲವರಿಗೆ ದೂರದ ಪ್ರಯಾಣ ಮಾಡುವಾಗ ವಾಂತಿ ಉಂಟಾಗುತ್ತದೆ. ಇದರಿಂದ ಜೊತೆಗೆ ಇರುವವರಿಗೂ ಕೂಡ ಅಸಹ್ಯ ಅನಿಸುತ್ತದೆ. ಹಾಗಾಗಿ ಕೆಲವರು ದೂರದ ಪ್ರಯಾಣವನ್ನು ಮಾಡಲು ಇಷ್ಟಪಡುವುದಿಲ್ಲ. ಕೆಲವರು ಮಾತ್ರೆಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೂ ಕೆಲವರಿಗೆ ಅದು ಕೆಲಸವನ್ನು ಮಾಡುವುದಿಲ್ಲ. ಆದ್ದರಿಂದ ನಾವು ಇಲ್ಲಿ ಪ್ರಯಾಣಮಾಡುವಾಗ ವಾಂತಿ ಆಗುವವರಿಗೆ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮನುಷ್ಯನ ಮೆದುಳಿನಲ್ಲಿ ವಾಮೆಟಿಕ್ ಸೆಂಟರ್ ಎನ್ನುವ ಭಾಗವಿರುತ್ತದೆ. ಇದಕ್ಕೆ ದೂರದ ಪ್ರಯಾಣ ಮಾಡುತ್ತಿದ್ದೇವೆ ಎನ್ನುವ ಸಂದೇಶವನ್ನು ನೀಡಬಾರದು. ಕೆಲವರಿಗೆ ಬಸ್ಸು ಹತ್ತಿದಾಗ ವಾಂತಿ ಉಂಟಾಗುತ್ತದೆ. ಹಾಗೆಯೇ ಕೆಲವರಿಗೆ ಕಾರಿನಲ್ಲಿ ಕುಳಿತಾಗಲೂ ವಾಂತಿ ಉಂಟಾಗುತ್ತದೆ. ಅಂತಹವರು ಯಾವುದೇ ವಾಹನಗಳಲ್ಲಿ ಕುಡಿದರು ಮೊದಲು ನಿದ್ದೆ ಮಾಡಬೇಕು.
ಆಗ ಮೆದುಳಿಗೆ ಪ್ರಯಾಣದ ಸಂದೇಶ ಇರುವುದಿಲ್ಲ. ಹಾಗಾಗಿ ವಾಂತಿ ಆಗುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಇಳಿಯುವ ಜಾಗ ಬಂದಾಗ ಎಬ್ಬಿಸಿ ಎಂದು ಹೇಳಬೇಕು. ಆಗ ಮಧ್ಯ ಎಚ್ಚರ ಆಗುವುದಿಲ್ಲ. ಹಾಗೆಯೇ ಪ್ರಯಾಣ ಮಾಡುವಾಗ ಕೆಂಪು ಅಡಿಕೆಯ ಚೂರನ್ನು ಇಟ್ಟುಕೊಂಡು ಹೋಗಬೇಕು. ಇದನ್ನು ಬಾಯಲ್ಲಿಟ್ಟುಕೊಂಡು ರಸವನ್ನು ನುಂಗುತ್ತಾ ಇದ್ದರೆ ವಾಂತಿ ಆಗುವುದಿಲ್ಲ. ಇದು ಒಳ್ಳೆಯ ಪರಿಣಾಮ ಬೀರುತ್ತದೆ.
ಹಾಗೆಯೇ ಮನೆಯಲ್ಲಿ ಏಲಕ್ಕಿಯನ್ನು ಇಟ್ಟುಕೊಳ್ಳುವುದರಿಂದ ವಾಂತಿ ಆಗುವುದಿಲ್ಲ. ಕೆಲವರು ಈ ವಿಧಾನವನ್ನು ಸಹ ಅನುಸರಿಸುತ್ತಾರೆ. ಹಾಗೆಯೇ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಸಹ ವಾಂತಿ ಉಂಟಾಗುವುದಿಲ್ಲ. ಆದ್ದರಿಂದ ಎಲ್ಲಾದರೂ ದೂರ ಹೋಗುವಾಗ ಏನಾದರೂ ಮುನ್ನೆಚ್ಚರಿಕಾ ಕ್ರಮವನ್ನು ಅನುಸರಿಸುವುದು ಒಳ್ಳೆಯದು. ಇದರಿಂದ ಜೊತೆ ಇರುವವರಿಗೆ ಸಹ ಏನೂ ತೊಂದರೆ ಆಗುವುದಿಲ್ಲ.