ನಿಮ್ಮಲ್ಲಿ ಕಪ್ಪು ದ್ರಾಕ್ಷಿ ಇದ್ರೆ, ವೈನ್ ಹೇಗೆ ಮಾಡೋದು ಅಂತ ನಾವು ಹೇಳ್ತಿವಿ ನೋಡಿ

0 35

ದ್ರಾಕ್ಷಾರಸ ಈಗಿನ ಕಾಲದಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲರೂ ಸೇವಿಸುವಂತಹ ಒಂದು ವೈನ್ ಆಗಿದೆ. ಅಂದರೆ ವೈನ್ ಅನ್ನು ಮಿತವಾಗಿ ಸೇವಿಸುವುದರಿಂದ ಬ್ಲಡ್ ಪ್ರಶರ್ ಮತ್ತು ಇಮ್ಯೂನಿಟಿ ಸಿಸ್ಟಮ್ ಅನ್ನು ಹೆಚ್ಚಿಸುತ್ತದೆ. ವೈನ್ ನಮ್ಮ ಚರ್ಮಕ್ಕೆ ಮತ್ತು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಯಾಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಪವರ್ ಇರುತ್ತದೆ. ಇದು ಸ್ಟ್ರೋಕ್ ಲಕ್ಷಣಗಳಿದ್ದರೆ ಕಡಿಮೆ ಮಾಡುತ್ತದೆ. ತುಂಬಾ ಒಳ್ಳೆಯ ಗುಣಗಳನ್ನು ಹೊಂದಿರುವ ಆಲ್ಕೋಹಾಲ್ ಎಂದರೆ ಅದು ದ್ರಾಕ್ಷರಸ. ಇದನ್ನು ಮನೆಯಲ್ಲಿಯೇ ತಯಾರಿಸುವ ವಿಧಾನವನ್ನು ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಎರಡು ಕೆಜಿ ಕಪ್ಪು ದ್ರಾಕ್ಷಿಯನ್ನು ತೆಗೆದುಕೊಂಡು ಅದನ್ನು ಉಪ್ಪಿನ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ನೆನೆಸಿಡಬೇಕು. ಕಾರಣ ಹುಣ್ಣಿಗೆ ಹೊಡೆದಿರುವ ಔಷಧಗಳ ಸಿಂಪಡಣೆ ಮಾಡಿರುವ ಕಾರಣ ಅದನ್ನು ಹೋಗಲಾಡಿಸಲು ಇದನ್ನು ಮಾಡಬೇಕು. ನಂತರ ಈ ಹಣ್ಣುಗಳನ್ನು ಬಿಡಿಸಿ ಬೇರೆ ನೀರಿಗೆ ಹಾಕಿ ತೊಳೆಯಬೇಕು. ನಂತರ ಆ ಹಣ್ಣುಗಳನ್ನು ಒಂದು ಪಾತ್ರೆಗೆ ಹಾಕಿ ಸರಿಯಾಗಿ ಗಿವಿಚಬೇಕು. ನಂತರ ಅದನ್ನು ವೈನ್ ತಯಾರಿಸುವ ಜಾರಿಗೆ ಹಾಕಿಕೊಳ್ಳಬೇಕು. ವೈನ್ ತಯಾರಿಸಲು ಪಿಂಗಾಣಿ ಜಾರಿ ಅಥವಾ ಗ್ಲಾಸ್ ಜಾರಿಯನ್ನು ಬಳಸುವುದು ಉತ್ತಮ. ಎರಡು ಕೆಜಿ ದ್ರಾಕ್ಷಿಗೆ ಒಂದುವರೆ ಕೆಜಿ ಸಕ್ಕರೆಯನ್ನು ಹಾಕಿ ಬೆರೆಸಬೇಕು.

ಹುದುಗುವಿಕೆ ಗೆ ಸಹಕಾರಿಯಾಗಲು ಅಥವಾ ಹುಳಿ ಬರಲು ಎರಡು ಚಮಚದಷ್ಟು ರಾಗಿ, ಹಾಗೆ ಎರಡು ಚಮಚದಷ್ಟು ಅಕ್ಕಿಯನ್ನು ಹಾಕಿಕೊಳ್ಳಬೇಕು. ಹಾಗೆ ಎರಡು ಚಮಚ ಹಳೆಯ ವೈನ್ ಅನ್ನು ಸೇರಿಸಬೇಕು. ನಂತರ ಈ ಮಿಶ್ರಣಕ್ಕೆ ಎರಡು ಲೀಟರ್ ನೀರನ್ನು ಸೇರಿಸಬೇಕು. ಕಾದಾರಿದ ನೀರು ಅಥವಾ ಫಿಲ್ಟರ್ ನೀರನ್ನು ಬಳಸುವುದು ಉತ್ತಮ. ಇವೆಲ್ಲವನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಇದರ ಮುಚ್ಚಳವನ್ನು ಸರಿಯಾಗಿ ಬಿಗಿಯಾಗಿ ಹಾಕಬೇಕು. ಗಾಳಿಯಾಡದ ರೀತಿ ಸರಿಯಾಗಿ ಮೇಲಿಂದ ಬಟ್ಟೆಯನ್ನು ಮುಚ್ಚಿ ಬಳ್ಳಿಯಿಂದ ಕಟ್ಟಬೇಕು.

ಎರಡು ದಿನಗಳಿಗೊಮ್ಮೆ ಇದನ್ನು ಬಿಚ್ಚಿ ಸರಿಯಾಗಿ ಮಿಕ್ಸ್ ಮಾಡಬೇಕು. ಹೀಗೆ 28 ದಿನಗಳ ಕಾಲ ಇದನ್ನು ಮಾಡಬೇಕು. ಹೀಗೆ 28 ದಿನಗಳ ಕಾಲದ ನಂತರ ಇದನ್ನು ತೆಗೆದು ಬಿಳಿಯ ವಸ್ತ್ರದಲ್ಲಿ ಫಿಲ್ಟರ್ ಮಾಡಬೇಕು. ಪ್ರತಿದಿನ 1 ಲೋಟ ರೆಡ್ ವೈನ್ ಕುಡಿಯುವುದರಿಂದ ನಮ್ಮ ಚರ್ಮಕ್ಕೆ, ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಈ ರೆಡ್ ವೈನ್ ಅನ್ನು ಮನೆಯಲ್ಲಿ ತಯಾರಿಸಿದ ಫೇಸ್ ಕ್ರೀಮ್ ಜೊತೆ ಸೇರಿಸಿ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ವೈನ್ ಹಳೆಯದಾದಷ್ಟು ಹುಳಿ ಅಂಶ ಹೆಚ್ಚುತ್ತದೆ. ಇದಕ್ಕೆ ಬೇಕಾದಲ್ಲಿ ಸಕ್ಕರೆ ಅಥವಾ ನೀರನ್ನು ಸೇರಿಸಿಕೊಳ್ಳಬಹುದು. ಹೀಗೆ ಮನೆಯಲ್ಲಿಯೇ ಇದನ್ನು ತಯಾರಿಸಿ ಸೇವಿಸುವುದು ಉತ್ತಮ.

Leave A Reply

Your email address will not be published.