Tomoto Price Hike: ಹೌದು ಕೆಲವು ತಿಂಗಳಿಂದ ಮಾರುಕಟ್ಟೆಯಲ್ಲಿ ಟೊಮೊಟೋದ್ದೆ ಸುದ್ದಿ, ಬೆಲೆ ಏರಿಕೆ ಯಿಂದ ರೈತರಿಗೆ ಲಾಭ ಅಗಿದಂತೂ ನಿಜ ಆದ್ರೆ, ಗ್ರಾಹಕರಿಗೆ ಸಂಕಷ್ಟ ಆಗಿದೆ. ಹೌದು ಟೊಮೊಟೊ ಬೆಲೆ (tomoto price) 100 ರೂಪಾಯಿಗಿಂತ ಮೇಲೆ ಇದೆ. ಇದಕ್ಕೆ ಕಾರಣವೇನು ಅನ್ನೋದನ್ನ ಮುಂದೆ ನೋಡೋಣ ಜೊತೆಗೆ ಮತ್ತೆ ಟೊಮೊಟೊ ಬೆಲೆ ಏರಿಕೆ ಆಗುತ್ತಾ ಅನ್ನೋದನ್ನ ಕೂಡ ಮುಂದೆ ವಿವರಿಸಲಾಗಿದೆ ನೋಡಿ.
ಕೆಲವು ತಿಂಗಳ ಹಿಂದೆ ಅಂದರೆ, ಏಪ್ರಿಲ್-ಮೇ ತಿಂಗಳಲ್ಲಿ ಬೇಸಿಗೆಯಿಂದ ಬೆಳೆ ಹಾನಿಯಾಗಿದ್ದ ಪರಿಣಾಮ ಟೊಮೊಟೊ ಬೆಲೆ ಏರಿಕೆಯಾಗಿತ್ತು. ಇದೀಗ ಅತಿಯಾದ ಮಳೆಯಿಂದ ಟೊಮೇಟೊ ಬೆಳೆಗೆ ಭಾರಿ ಹೊಡೆತ ಬಿದಿದ್ದು, ರೈತರಿಗೆ ನಷ್ಟ ಆಗುತ್ತಿದೆ. ಹೀಗಾಗಿ ಅತಿಯಾದ ಮಳೆಯಿಂದ ಕಟಾವಿಗೆ ಬಂದ ಬಳೆ ನಾಶವಾಗುತ್ತಿದ್ದು, ಇದರಿಂದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ
ಹೌದು ನಮ್ಮ ರಾಜ್ಯದಲ್ಲಿ ಅತಿ ಹೆಚ್ಚಾಗಿ ಟೊಮೊಟೊ ಬೆಳೆಯುವ ಜಿಲ್ಲೆ ಅಂದ್ರೆ ಅದು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಸರಿ ಸುಮಾರು 81,000 ಹೆಕ್ಟೇರ್ ಭೂಮಿಯಲ್ಲಿ ರೈತರು ಟೊಮೇಟೋ ಬೆಳೆಯುತ್ತಾರೆ. ಆದ್ರೆ ಇದೀಗ ಬಿಡದೆ ಕಾಡುತ್ತಿರುವ ಮಳೆ ಪ್ರಭಾವ ಅಂದರೆ ನಿರಂತರ ಮಳೆ ಆಗುತ್ತಿರುವ ಪರಿಣಾಮ ಮುಂದಿನ ತಿಂಗಳು ಆಗಸ್ಟ್ ನಲ್ಲಿ ಟೊಮೊಟೊ ಬೆಲೆ ಮತ್ತಷ್ಟು ಏರಿಕೆ ಆಗುತ್ತೆ ಅನ್ನೋದು ಕೃಷಿ ಅಧಿಕಾರ ಮಾತಾಗಿದೆ.
ಈಗಲೇ ಬೆಲೆ ಏರಿಕೆಯಿಂದ ಜನರು ಟೊಮೊಟೊ ಕೊಳ್ಳೋದು ಕಡಿಮೆಯಾಗಿದೆ ಅಡುಗೆಮನೆಯಲ್ಲಿ ಟೊಮೊಟೊ ಕಾಣಿಸೋದೆ ಅಪರೂಪ ಇನ್ನು ಬೆಲೆ ಜಾಸ್ತಿ ಆದ್ರೆ ನಿಜಕ್ಕೂ ಗ್ರಾಹಕರಿಗೆ ಸಂಕಷ್ಟ ಅಲ್ಲವೇ. ಇದನ್ನೂ ಓದಿ LIC Kanyadan: ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ನಿಮಗೆ ಗುಡ್ ನ್ಯೂಸ್, ಮದುವೆ ಶಿಕ್ಷಣಕ್ಕೆ ಸರ್ಕಾರವೇ ಕೊಡುತ್ತೆ ಹಣ