Ultimate magazine theme for WordPress.

ಟಾಯ್ಲೆಟ್ ಹೋಗೋಕೆ ಈ ಬೆರಳೇ ಯಾಕೆ? ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವು

0 0

ನಮ್ಮ ಸುತ್ತಮುತ್ತಲಿನ ಹಾಗೂ ಜಗತ್ತಿನ ಕೆಲವು ವಿಸ್ಮಯಕಾರಿ ವಿಷಯಗಳನ್ನು ತಿಳಿದುಕೊಳ್ಳಬೇಕು. ಉದಾಹರಣೆಗೆ ಜಗತ್ತಿನ ಏಕೈಕ ಬಿಸಿ ನೀರಿನ ನದಿ ಎಲ್ಲಿದೆ, ವಾಷ್ ಬೇಸಿನ್ ಅಥವಾ ಟಾಯ್ಲೆಟ್ ಬೇಸಿನ್ ಒಂದೆ ಶೇಪ್ ಏಕೆ ಇರುತ್ತದೆ, ಆನೆ ಸಗಣಿಯಿಂದ ಪೇಪರ್ ತಯಾರಿಸುವುದು ಎಲ್ಲಿ, ನಾವು ಜಾಸ್ತಿ ಸಮಯ ನೀರಿನಲ್ಲಿ ಇದ್ದರೆ ನಮ್ಮ ಕೈ ಕಾಲು ಬೆರಳುಗಳು ಮುದುಡಿಕೊಳ್ಳುವುದು ಏಕೆ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪೆರು ದೇಶದ ಸೆಂಟ್ರಲ್ ಅಮೆಜಾನ್ ಕಾಡುಗಳಲ್ಲಿ ಶಾನೆ ಟೆಂಪಿಶ್ಕಾ ಎಂಬ ನದಿ ಇದೆ. ಈ ನದಿಯ ನೀರು ಯಾವಾಗಲೂ ಸುಡುತ್ತಿರುತ್ತದೆ. ಭೂಮಿಯ ಗರ್ಭದಲ್ಲಿರುವ ಬಿಸಿಯಿಂದ ಈ ನದಿಯ ನೀರು ಕುದಿಯುತ್ತಿರುತ್ತದೆ. ಈ ನದಿ ಪ್ರಪಂಚದ ಏಕೈಕ ಬಿಸಿ ನೀರಿನ ನದಿಯಾಗಿದೆ. ನಾವು ಬಳಸುವ ವಾಷ್ ಬೇಸಿನ್ ಅಥವಾ ಟಾಯ್ಲೆಟ್ ಬೇಸಿನ್ ಒಂದೆ ಶೇಪ್ ನಲ್ಲಿ ಇರುತ್ತದೆ. ಇದನ್ನು ಫಿಟ್ ಮಾಡಿದ ನಂತರ ಇದರಲ್ಲಿ ನೀರು ಯಾವಾಗಲೂ ಡಿಫಾಲ್ಟ್ ಆಗಿ ಸ್ಟೋರ್ ಆಗಿರುತ್ತದೆ. ನೀರು ಸೆಪ್ಟಿಕ್ ಟ್ಯಾಂಕ್ ಮತ್ತು ವಾಷ್ ಬೇಸಿನ್ ನಡುವೆ ಬಾಗಿಲ ರೀತಿಯಲ್ಲಿ ಇರುತ್ತದೆ ಅಂದರೆ ಸೆಫ್ಟಿಕ್ ಟ್ಯಾಂಕ್ ನಿಂದ ಸ್ಮೆಲ್ ಬೇಸಿನ್ ಇರುವ ರೂಮ್ ನಲ್ಲಿ ಹರಡದಂತೆ ನೀರು ಸ್ಟೋರ್ ಆಗುವಂತೆ ಬೇಸಿನ್ ರಚನೆ ಮಾಡಿರುತ್ತಾರೆ. ವಾಷ್ ಬೇಸಿನ್ ನಲ್ಲಿ ಅಮೂಲ್ಯವಾದ ವಸ್ತುಗಳು ಬಿದ್ದರೆ ಅದು ಸೆಫ್ಟಿಕ್ ಟ್ಯಾಂಕ್ ಗೆ ಹೋಗದಂತೆ ತಡೆಯಲು ಈ ರೀತಿ ರಚನೆ ಮಾಡಿರುತ್ತಾರೆ. ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಮನುಷ್ಯರು ಸೌತ್ ಸೂಡಾನ್ ನಲ್ಲಿದ್ದಾರೆ. ಈ ದೇಶದಲ್ಲಿ ಡಿಂಕಾ ಟ್ರೈಬ್ ಎಂಬ ಆದಿವಾಸಿಗಳು 6 ಅಡಿಗಿಂತ ಎತ್ತರ ಇರುತ್ತಾರೆ. ಅವರು ಅಲ್ಲಿಯ ವಾತಾವರಣದಿಂದ ಎತ್ತರವಾಗಿ ಬೆಳೆಯುತ್ತಾರೆ. ಆಸ್ಟ್ರೇಲಿಯಾದಲ್ಲಿರುವ ಬಹಳಷ್ಟು ಜನರು ಶಾರ್ಟ್ ಕಟ್ ಆಗಿ ಮಾತನಾಡುತ್ತಾರೆ. ಉದಾಹರಣೆಗೆ ಆಫ್ಟರ್ನೂನ್ ಗೆ ಆರ್ವೊ, ಅವಕಾಡೋ ಗೆ ಆವೋ ಎಂದು ಹೇಳುತ್ತಾರೆ. ನಾವು ಬಳಸುವ ಸೆಲ್ಫಿ ಪದ ಬಂದಿದ್ದು ಇವರಿಂದಲೆ. ಜಪಾನಿನ ಟುಕ್ರೋ ಯೋಷಿಡಾ ಎಂಬ ವ್ಯಕ್ತಿ ಗುಲಾಬಿ ಹೂವುಗಳನ್ನು ಬಂಗಾರದಲ್ಲಿ ಅದ್ದಿ ಲವರ್ಸ್ ಗೆ ಮಾರುತ್ತಿದ್ದ. ಹೀಗೆ ಗೋಲ್ಡ್ ರೋಸ್ ಗಳನ್ನು ಮಾರುವ ಮೂಲಕ ಕೋಟ್ಯಾಂತರ ರೂಪಾಯಿ ಹಣವನ್ನು ಸಂಪಾದಿಸುತ್ತಾನೆ. ಪೋನನ್ನು ಟಚ್ ಮಾಡದೆ ಬೆರಳಿಗೆ ಹಾಕಿಕೊಂಡಿರುವ ರಿಂಗ್ ನಿಂದ ಕಂಟ್ರೋಲ್ ಮಾಡುವ ಮಷೀನ್ ಅನ್ನು ಕಂಡುಹಿಡಿದಿದ್ದಾನೆ. ಇವನಿಗೆ ಇಂಗ್ಲೀಷ್ ಮಾತನಾಡಲು ಬರುತ್ತಿರಲಿಲ್ಲ ಆದ್ದರಿಂದ ಟ್ರಾನ್ಸಲೇಟರ್ ಕಂಡುಹಿಡಿಯುತ್ತಾನೆ, ಇದು ನಮ್ಮ ಹತ್ತಿರ ಇದ್ದರೆ ಯಾವ ಭಾಷೆಯಲ್ಲಿ ಬೇಕಾದರೂ ಮಾತನಾಡಬಹುದು. ಇದಕ್ಕೆ ಇಂಟರ್ನೆಟ್ ಅಥವಾ ಯಾವುದೇ ಆಪ್ ಅವಶ್ಯಕತೆ ಇಲ್ಲ ಯಾವುದೇ ಭಾಷೆಗೆ ಬೇಕಾದರೂ ಟ್ರಾನ್ಸ್ಲೇಟ್ ಮಾಡುತ್ತದೆ. ಶ್ರೀಲಂಕಾದಲ್ಲಿ ಆನೆಯ ಸಗಣಿಯಿಂದ ಪೇಪರ್ ತಯಾರಿಸುತ್ತಾರೆ. ಆನೆಗಳು ಸಸ್ಯಹಾರಿ ಆಗಿರುವುದರಿಂದ ಅವರ ಸಗಣಿಯಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಆನೆಯ ಸಗಣಿಯನ್ನು ಒಣಗಿಸಿ ಪುಡಿಮಾಡಿ ಅದನ್ನು ಕಂಪ್ರೆಸ್ ಮಾಡಿ ಪೇಪರ್ ತಯಾರಿಸುತ್ತಾರೆ. ಈ ಪೇಪರ್ ನಿಂದ ತಯಾರಿಸಿದ ಬುಕ್ಸ್ ಗಳನ್ನು 30 ದೇಶಗಳಿಗೆ ಮಾರಲಾಗುತ್ತದೆ.

ನಾವು ಒಂದು ವಸ್ತುವನ್ನು ಒಯ್ಯುವಾಗ ನೆಲದಲ್ಲಿರುವ ಭಾರಕ್ಕಿಂತ, ನೀರಿನಲ್ಲಿ ಇದ್ದಾಗ ಭಾರ ಕಡಿಮೆ ಇರುತ್ತದೆ. ಉದಾಹರಣೆಗೆ ಬಾವಿಯಿಂದ ಕೊಡದಲ್ಲಿ ನೀರು ಎತ್ತುವಾಗ ಅದು ನೀರಿನಲ್ಲಿದ್ದಾಗ ಕಡಿಮೆ ಭಾರವೆನಿಸುವುದಿಲ್ಲ ಅದೇ ಹೊರಗೆ ತಂದಾಗ ಹೆಚ್ಚು ಭಾರವಾಗಿರುತ್ತದೆ. ಗ್ರ್ಯಾವಿಟಿ ನಮ್ಮನ್ನು ಯಾವಾಗಲೂ ಕೆಳಕ್ಕೆ ಎಳೆಯುತ್ತಿರುತ್ತದೆ. ಇದು ನೀರಿನಲ್ಲಿಯೂ ಇರುತ್ತದೆ. ಒಂದು ವಸ್ತುವನ್ನು ನೀರಿನಲ್ಲಿ ಹಾಕಿದಾಗ ಗ್ರ್ಯಾವಿಟಿ ಕೆಳಮುಖವಾಗಿ ಎಳೆದರೆ ನೀರು ತನ್ನ ಮೇಲ್ಮುಖ ಒತ್ತಡವನ್ನು ವಸ್ತುವಿನ ಮೇಲೆ ಹಾಕುತ್ತದೆ ಆದ್ದರಿಂದ ಆ ವಸ್ತು ನೀರಿನಲ್ಲಿದ್ದಾಗ ಕಡಿಮೆ ಭಾರವೆನಿಸುತ್ತದೆ. ಅದೇ ವಸ್ತು ಹೊರಗೆ ಬಂದಾಗ ತನ್ನ ಮೊದಲಿನ ಭಾರವನ್ನು ಪಡೆಯುತ್ತದೆ. ನೇಪಾಳದಲ್ಲಿರುವ ದುರ್ಗೆ ಕಾಮಿ ಎಂಬ ವ್ಯಕ್ತಿ 2016ರಲ್ಲಿ ಅಂದರೆ ಅವರ 70ನೇ ವರ್ಷದಲ್ಲಿ SSLC ಪಾಸ್ ಮಾಡುತ್ತಾರೆ. ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಬಡತನದ ಕಾರಣದಿಂದ ಮತ್ತು ಹತ್ತಿರ ಶಾಲೆ ಇಲ್ಲದಿರುವ ಕಾರಣ ಓದಲು ಆಗಲಿಲ್ಲ ಆದರೆ ಓದಲೇಬೇಕೆಂಬ ಹಠದಿಂದ 70ನೇ ವಯಸ್ಸಿನಲ್ಲಿ ಶಾಲೆಗೆ ಸೇರಿ ಎಸ್ಎಸ್ಎಲ್ ಸಿ ಪಾಸ್ ಮಾಡುತ್ತಾರೆ. ನೀರಿನಲ್ಲಿ ಜಾಸ್ತಿ ಹೊತ್ತು ಇದ್ದಾಗ ನಮ್ಮ ಕೈಕಾಲು ಬೆರಳು ಮುದುಡಿದಂತಾಗುತ್ತದೆ. ನಮ್ಮ ಕೈಕಾಲು ಬೆರಳಿನ ಚರ್ಮ ಕೂದಲು ಇಲ್ಲದೆ ಮೃದುವಾಗಿರುತ್ತದೆ ಇದನ್ನು ಗ್ಲಾಬರಸ್ ಎಂದು ಕರೆಯುತ್ತಾರೆ. ಜಾಸ್ತಿ ಹೊತ್ತು ನಮ್ಮ ಕೈಬೆರಳುಗಳು ನೀರಿನಲ್ಲಿದ್ದಾಗ ಮೆದುಳು ಒಂದು ಮೆಸೇಜ್ ಕಳುಹಿಸುತ್ತದೆ ಇದರಿಂದ ಮುದುಡುತ್ತದೆ. ನೀರಿನಲ್ಲಿ ಸಿಗುವ ಯಾವುದೇ ವಸ್ತುಗಳನ್ನು ಹಿಡಿದುಕೊಳ್ಳಲು ಗ್ರಿಪ್ ಸಿಗಲಿ ಎಂದು ಹೀಗೆ ಆಗುತ್ತದೆ. ಸ್ಕೂಲಿನಲ್ಲಿ ಇರುವಾಗ ಮಕ್ಕಳು ವಾಷ್ ರೂಮ್ ಗೆ ಹೋಗಬೇಕೆಂದರೆ ಕೈಯನ್ನು ಮಡಚಿ ಕಿರುಬೆರಳನ್ನು ತೋರಿಸುತ್ತಾರೆ. ಈ ರೀತಿಯ ಮುದ್ರೆ ನೀರಿನ ಸಂಕೇತವಾಗಿದೆ ಮತ್ತು ಈ ರೀತಿಯ ಸಂಕೇತವು ಮೂತ್ರಾಶಯ ಯೂರಿನ್ ನಿಂದ ಭರ್ತಿಯಾಗಿದೆ ಎಂಬ ಅರ್ಥವನ್ನು ಸೂಚಿಸುತ್ತದೆ ಆದ್ದರಿಂದ ಇದೇ ರೂಢಿಯಲ್ಲಿ ಬಂದಿದೆ.

Leave A Reply

Your email address will not be published.