Today Horoscope: ಕಟಕ ರಾಶಿಯವರ ಪಾಲಿಗೆ ಮೇ ತಿಂಗಳಲ್ಲಿ ಆಗಲಿದೆ ದೊಡ್ಡ ಬದಲಾವಣೆ

0 7

Today Horoscope on Cancer sign Kannada Prediction: ಕಟಕ ರಾಶಿಯವರ 2023 ಮೇ ತಿಂಗಳಲ್ಲಿ ಬರುವಂತಹ ಮಾಸಫಲವನ್ನು ಇಲ್ಲಿ ನಾವು ತಿಳಿಯೋಣ. ಉದ್ಯೋಗ ವ್ಯಾಪಾರ ಆರೋಗ್ಯ ಮನಶಾಂತಿ ಇತ್ಯಾದಿ ವಿಚಾರಗಳಲ್ಲಿ ಕಟಕ (Cancer sign) ರಾಶಿಯವರಿಗೆ ಇರುವ ಶುಭ ಹಾಗು ಅಶುಭ ಫಲಗಳನ್ನು ಇಲ್ಲಿ ನಾವು ತಿಳಿದುಕೊಳ್ಳಬಹುದಾಗಿದೆ.

ಕಟಕ (Cancer sign) ರಾಶಿಯ ಜನ್ಮ ನಕ್ಷತ್ರಗಳು, ನಕ್ಷತ್ರಗಳು, ಪುನರ್ವಸು ನಕ್ಷತ್ರದ ನಾಲ್ಕನೇ ಚರಣಗಳು, ಪುಷ್ಪ ನಕ್ಷತ್ರದ ನಾಲ್ಕು ಚರಣಗಳು, ಆಶ್ಲೇಷ ನಕ್ಷತ್ರದ ನಾಲ್ಕು ಚರಣಗಳು ಈ ರಾಶಿಯಲ್ಲಿ ಸೇರಿರುತ್ತವೆ. ಕಟಕ ರಾಶಿಯವರ ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ಆಗಿರುತ್ತದೆ ಮತ್ತು ಅದೃಷ್ಟ ದೇವರು ಮಹಾಶಿವ. ಇನ್ನು ಕಟಕ ರಾಶಿಯವರ ಮಿತ್ರ ರಾಶಿ ಎಂದರೆ ವೃಶ್ಚಿಕ ಮೀನಾ (Meena Rashi) ಮತ್ತು ತುಲಾ ರಾಶಿಯಾಗಿದ್ದು, ಶತ್ರು ರಾಶಿ ಮೇಷ, ಸಿಂಹ, ಧನಸ್ಸು ಮತ್ತು ಮಿಥುನ ರಾಶಿಯಾಗಿದೆ.

ವಿಶೇಷವಾಗಿ ಕಟಕ ಕಟಕ (Cancer sign) ರಾಶಿಯವರು ಭಾವಜೀವಿಗಳಾಗಿರುತ್ತಾರೆ ಬಡವರಿಗೆ ಏನೋ ಒಂದು ಸಮಸ್ಯೆ ಆಗುತ್ತಿದೆ ಎಂದಾದ ಇವರ ಕರುಳು ಮಿಡಿಯುತ್ತದೆ. ಅವರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕೆಂಬ ಮನಸ್ಥಿತಿಯನ್ನ ಇವರು ಹೊಂದಿರುತ್ತಾರೆ. ಇದೇ ರೀತಿ ಕಟಕ ರಾಶಿಯವರಲ್ಲಿ ಬಹಳಷ್ಟು ಉತ್ತಮವಾಗಿರುವಂತಹ ಹವ್ಯಾಸಗಳು ಇರುತ್ತವೆ. ಮೇ ತಿಂಗಳ 2,13 ,15 ,23,29 ನೇ ತಾರೀಕು ಕಟಕ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುವಂತಹ ದಿನಗಳಾಗಿವೆ. ಈ ತಿಂಗಳಲ್ಲಿ ಕಟಕ (Cancer sign) ರಾಶಿಯವರ ಮನಸ್ಸಿನಲ್ಲಿ ಹೊಸ ಹೊಸ ಯೋಜನೆಗಳು ಮೂಡಿಬರುತ್ತದೆ ಹೊಸ ಅನ್ವೇಷಣೆಗೆ ಇದು ದಾರಿ ಮಾಡಿಕೊಡುತ್ತದೆ.

ಕಟಕ ರಾಶಿಯವರು ಮಾಡುವಂತಹ ವ್ಯಾಪಾರ ವ್ಯವಹಾರ ಕೃಷಿ ಹಾಗೂ ವಿದ್ಯಾಭ್ಯಾಸ ಇತ್ಯಾದಿ ಯಾವುದೇ ಕಾರ್ಯಗಳಲ್ಲಿ ಹೊಸತನವನ್ನು ಕಾಣಲಿದ್ದೀರಿ ಎಲ್ಲವನ್ನು ಚುರುಕುತನದಿಂದ ನಿಭಾಯಿಸಲು ಸಾಮರ್ಥ್ಯವನ್ನು ಹೊಂದಿರುತ್ತೀರಿ. ನೀವು ಮಾಡಿದಂತಹ ಕೆಲಸಗಳಿಗೆ ಒಳ್ಳೆಯ ಗೌರವ ಒಳ್ಳೆಯ ಸ್ಥಾನಮಾನವನ್ನು ಪಡೆಯುತ್ತೀರಿ ಮತ್ತು ಹಿರಿಯರಿಂದ ಪ್ರೋತ್ಸಾಹವನ್ನು ಪಡೆಯುತ್ತೀರಿ.ವಿಶೇಷವಾಗಿ ಈ ತಿಂಗಳಲ್ಲಿ ಖರ್ಚು ಹೆಚ್ಚಿಗೆ ಇರುವಂತದ್ದು ಯಾವುದೋ ಒಂದು ಮೂಲದಿಂದ ಖರ್ಚಾಗುತ್ತದೆ ಜೊತೆಗೆ ಹಿಂದಿನ ಆಸ್ತಿಗಳು ಈ ತಿಂಗಳಲ್ಲಿ ನಿಮ್ಮ ಪಾಲಾಗುವ ಸಂದರ್ಭಗಳು ಜಾಸ್ತಿ.

ಕಟಕ ರಾಶಿಯವರ ವ್ಯಾಪಾರ ವ್ಯವಹಾರ ಅಥವಾ ಇನ್ಯಾವುದೇ ಹೊಸ ಕೆಲಸಗಳು ಅಥವಾ ಬಹಳಷ್ಟು ದಿನಗಳಿಂದ ಪೂರ್ಣಗೊಳ್ಳದ ಕಾರ್ಯಗಳು ಕೈಗೂಡುವ ಸಾಧ್ಯತೆಗಳು ಕಂಡುಬರುತ್ತವೆ. ನಿಮ್ಮ ಇಷ್ಟಾರ್ಥಗಳು ಈ ತಿಂಗಳಲ್ಲಿ ನೆರವೇರುತ್ತವೆ. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರು ಬಹಳ ಜಾಗೃತೆ ವಹಿಸಬೇಕು ಜೊತೆಗೆ ವಾಹನ ವ್ಯಾಪಾರಗಳಲ್ಲಿ ಸ್ವಲ್ಪ ಅಡೆತಡೆ ಉಂಟಾಗಬಹುದು ಮತ್ತು ಸರ್ಕಾರಿ ನೌಕರರಿಗೆ ನಿರೀಕ್ಷೆಗೆ ತಕ್ಕ ಪ್ರತಿಫಲ ಈ ತಿಂಗಳಲ್ಲಿ ದೊರೆಯುತ್ತದೆ ಕಟ್ಟಡ ಕಾರ್ಮಿಕರಿಗೆ ತಮ್ಮ ಆದಾಯ ಸಿಗಲಿದೆ.

ಕಟಕ (Cancer sign) ರಾಶಿಯವರ ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಅಲ್ಪ ಮಟ್ಟಿಗೆ ಕೈ ಕಾಲಿನ ನೋವುಗಳು ಹಿಮ್ಮಡಿಯ ನೋವುಗಳು ಎದೆ ನೋವು ಮುಂತಾದ ಸಣ್ಣ ಪುಟ್ಟ ಸಮಸ್ಯೆಗಳು ಕಂಡುಬರುತ್ತವೆ ಆದ್ದರಿಂದ ಆರೋಗ್ಯದ ಕಡೆ ಸ್ವಲ್ಪಮಟ್ಟಿಗೆ ಗಮನ ಹರಿಸುವುದು ಒಳ್ಳೆಯದು. ತಿಂಗಳ ಮೊದಲ 15 ದಿನಗಳು ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಇದರ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕು ಜೊತೆಗೆ ಈ ದಿನಗಳಲ್ಲಿ ನಿಮ್ಮ ಉತ್ತಮ ಬೆಳವಣಿಗೆಯಿಂದ ನಿಮಗೆ ಹಿತಶತ್ರುಗಳು ಜಾಸ್ತಿ ಆಗುತ್ತಾರೆ.ಅದರ ಬಗ್ಗೆ ಗಮನಹರಿಸದೆ ನಿಮ್ಮ ಕೆಲಸದಲ್ಲಿ ನೀವು ತೊಡಗಿ ಕೊಳ್ಳುವುದು ಉತ್ತಮ.

ಬಂಧು ಮಿತ್ರರ ಭೇಟಿಯು ಮನಸ್ಸಿಗೆ ಖುಷಿಯನ್ನ ತಂದುಕೊಡುತ್ತದೆ ಇನ್ನು 15ರಿಂದ 30ನೇ ತಾರೀಕಿನವರೆಗೆ ಕಟಕ ರಾಶಿಯವರು ತಮ್ಮ ಕುಟುಂಬದೊಂದಿಗೆ ದೇವಸ್ಥಾನಗಳನ್ನು ಕುರುಕ್ಷೇತ್ರಗಳನ್ನು ದರ್ಶನ ಮಾಡುತ್ತಾರೆ ಕುಟುಂಬದಲ್ಲಿ ಶುಭ ಸಮಾರಂಭಗಳು, ಈ ದಿನಗಳಲ್ಲಿ ಕಂಡು ಬರುತ್ತವೆ ಅದರಂತೆ ಕಟಕ ರಾಶಿಯವರು ಈ ದಿನಗಳಲ್ಲಿ ಅಹಂಕಾರದ ಮಾತುಗಳನ್ನು ಆಡುವುದರಿಂದ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸುತ್ತೀರಿ ಜೊತೆಗೆ ಕಣ್ಣು ಮತ್ತು ಕಿವಿಗೆ ಸಂಬಂಧಿಸಿದ ಅನಾರೋಗ್ಯದ ಬಾಧೆ ಈ ಸಮಯದಲ್ಲಿ ಕಂಡುಬರುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಮೇ ತಿಂಗಳು ಕಟಕ ರಾಶಿಯವರಿಗೆ ತುಂಬಾ ಉತ್ತಮವಾಗಿದ್ದು ದೈವ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ.

ಇದನ್ನೂ ಓದಿ..Capricorn Astrology: ಮಕರ ರಾಶಿಯವರು ಮೇ ತಿಂಗಳು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಇಲ್ಲಿದೆ

Leave A Reply

Your email address will not be published.