today astrology in kannada: ಮೇಷ ರಾಶಿ ಪರಿಶ್ರಮ, ಬುದ್ಧಿವಂತಿಕೆಯ ಜತೆ ಅಧಿಕ ಸಮಯವನ್ನು ವೃತ್ತಿಯ ಕೆಲಸಕ್ಕೆ ಮೀಸಲಿಡಿ, ಅಲಸ್ಯತನವನ್ನು ದೂರಮಾಡಿ, ಅಶ್ವತ್ಥ ವೃಕ್ಷದ ಪ್ರದಕ್ಷಿಣೆಯು ಪುಣ್ಯ ಸಂಪಾದನೆಗೆ ದಾರಿಯಾಗುವುದು ಮತ್ತು ಶುಭ ತರಲಿದೆ. ನೀವು ಹೊಸ ವ್ಯಾಪಾರವನ್ನು ಶುರು ಮಾಡುತ್ತೀರಾ.

ವೃಷಭ ರಾಶಿ ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಆರ್ಥಿಕವಾಗಿ ಮುಂದುವರಿಯಲು ಸಹಾಯವಾಗುತ್ತದೆ. ಹಂತ ಹಂತವಾಗಿ ಸುಧಾರಿಸಲಿರುವ ಪರಿಸ್ಥಿತಿಯು ಹೆಚ್ಚಿನ ನಿರಾಶೆತರದು. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ನಿಮಗೆ ಕಾಣಿಸಬಹುದು

ಮಿಥುನ ರಾಶಿ ಪೋಲಿಸ್‌ ವೃತ್ತಿಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಗಾಗಿ ದೂರ ಸಂಚಾರ ಕಂಡುಬರಲಿದೆ. ಧೈರ್ಯದಿಂದ ಮತ್ತು ಅಧಿಕ ಪ್ರಯತ್ನ ಬಲದಿಂದ ಕಾರ್ಯದಲ್ಲಿ ಮುನ್ನುಗಿ. ಸರಕಾರಿ ಕೆಲಸ ನಿಮಗೆ ಸಿಗುವ ಸಾಧ್ಯತೆಗಳು ಹೆಚ್ಚಿಗೆ ಆಗಲಿದೆ.ಅಂಜನೇಯನ ಸೇವೆಯಿಂದ ಶುಭ.

ಕರ್ಕಾಟಕ ರಾಶಿ ಖಾಸಗಿ ಗುಮಾಸ್ತ ಕೆಲಸದಲ್ಲಿದ್ದವರಿಗೆ ಬೇಜವಾಬ್ದಾರಿತನದಿಂದ ಪೂರ್ಣವಿರಾಮ ಸಿಗುವಂತಾಗಲಿದೆ. ಪುಸ್ತಕ ಮುದ್ರಣಾಲಯದವರಿಗೆ ಅಥವಾ ಪುಸ್ತಕ ವ್ಯಾಪಾರಿಗಳಿಗೆ ಒಳ್ಳೆಯ ಲಾಭವಾಗುವ ಸಂಭವವಿದೆ. ಆದರೆ ಯಾವತ್ತೂ ಕೂಡ ಕೆಟ್ಟ ದಾರಿಯನ್ನು ಹಿಡಿಯಬೇಡಿ.

ಸಿಂಹ ರಾಶಿ ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊ ಳ್ಳುವುದರಿಂದ ಮುಂದಿನ ಜೀವನದ ದಿನಗಳು ನೆಮ್ಮದಿದಾಯಕವಾಗಲಿದೆ. ಪುಟ್ಟದೊಂದು ಪ್ರಯಾಣ ಮತ್ತಷ್ಟು ಹುರುಪು ತುಂಬಲಿದೆ. ಕುಟುಂಬದ ಜೊತೆಗೆ ದೂರ ಪ್ರಯಾಣವನ್ನು ನೀವು ಮಾಡುತ್ತೀರಾ.

ಕನ್ಯಾ ರಾಶಿ ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವ ಸಂಭವವಿದೆ. ಬಂಧು ಮಿತ್ರರೊಂದಿಗೆ ಸಂತೋಷ ವಿಷಯಗಳನ್ನು ಹಂಚಿಕೊಳ್ಳುವುದು ಈ ದಿನ ಸರಿಯಲ್ಲ.ನೂತನ ಮನೆ ಕೊಳ್ಳುವ ವಿಷಯ ಇತ್ಯರ್ಥವಾಗುವುದು. ಧರ್ಮ ಕ್ಷೇತ್ರಕ್ಕೆ ನೀವು ಬೇಟಿ ಕೊಡುತ್ತೀರಾ.

ತುಲಾ ರಾಶಿ ಎಲ್ಲ ಸವಾಲುಗಳನ್ನು ಎದುರಿಸುವ ಆತ್ಮಸ್ಥೆರ್ಯ ಬಂದಿದೆ.ಆದರೂ ಮುನ್ನೆಚ್ಚರಿಕೆ ಅಗತ್ಯ, ಆಡಿಟಿಂಗ್ ಕೆಲಸಗಳಿಂದ ಹೆಚ್ಚಿನ ವರಮಾನಗಳಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಅರ್ಥಕ್ಕೆ ನಿಲ್ಲಿಸಿದಂತಹ ಕಾರ್ಯಗಳು ಪೂರ್ಣಗೊಳ್ಳುತ್ತವೆ ಹಳದಿ ವರ್ಣ ಶುಭದಾಯಕ.

ವೃಶ್ಚಿಕ ರಾಶಿ ನಿಜ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಹೆಚ್ಚಿನ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ಉನ್ನತ ವ್ಯಾಸಂಗದವರಿಗೆ ನೇರ ಆಯ್ಕೆಗೊಳ್ಳುವ ಸಂಭವವಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುವುದು. ರಾಜಕೀಯ ವರ್ಗದವರಿಗೆ ಶುಭ ತರಲಿದೆ

ಧನು ರಾಶಿ ಯಾರ ನೆರವೂ ಇಲ್ಲದೆ ನಿಮ್ಮೆಲ್ಲ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವುದು ಉತ್ತಮ ಗೃಹತಾಪತ್ರಯಗಳಿಂದಲೂ ಮುಕ್ತರಾಗಿ ನಿಶ್ಚಿಂತತೆ ತೋರಿಬರುತ್ತದೆ.ದಿನಸಿ ವ್ಯಾಪಾರಸ್ಥರಿಗೆ ಶುಭದಿನ. ನೀವು ಆದಷ್ಟು ನಿಮ್ಮ ಮನೆ ದೇವರನ್ನು ಒಮ್ಮೆ ಭೇಟಿಯಾಗಿ ಬನ್ನಿ.

ಮಕರ ರಾಶಿ ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದದಿಂದ ಎಲ್ಲಾ ಸಮಸ್ಯೆಗಳಿಗೂ ಸೂಕ್ತವಾದ ಪರಿಹಾರ ಸಿಗಲಿದೆ.ಸೋಲನ್ನು ಬಯಸುವವರ ಸಂಖ್ಯೆಯು ಇಳಿಮುಖವನ್ನು ಹೊಂದುವುದು, ಎಲ್ಲರೂ ಹಿತೈಷಿಗಳಾಗುವರು. ಪಾಲುದಾರಿಕೆಯಲ್ಲಿ ನಿಮಗೆ ಖುಷಿಯ ಸುದ್ದಿ ಸಿಗಲಿದೆ.

ಕುಂಭ ರಾಶಿ ಕಾರ್ಮಿಕ ಜನರಿಗೆ ಆಡಳಿತ ವರ್ಗದವರಿಂದ ಅನುಕೂಲಗಳು ಉಂಟಾಗಲಿದೆ.ಹಣ್ಣು ತರಕಾರಿ ವ್ಯಾಪಾರಿಗಳಿಗೆ ಸರಕು ಸಾಗಣಿಕೆಯಲ್ಲಿ ತೊಂ ದರೆಗಳಾಗಬಹುದು. ಈ ದಿನ ನೀವು ಲಾಭ ನಷ್ಟದ ಮಿಶ್ರಫಲ ಕಾಣುವಿರಿ.

ಮೀನ ರಾಶಿ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಮತ್ತು ಮಾರಾಟ ಲಾಭದಾಯಕವ ನಿಸುವುದು.ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಉನ್ನತ ಶ್ರೇಣಿಲಭಿಸುವುದು. ಗಂಟಲು ಬೇನೆ ಎದುರಾದಲ್ಲಿ ನಿರ್ಲಕ್ಷಿಸುವುದು ಸರಿಯಲ್ಲ.

By

Leave a Reply

Your email address will not be published. Required fields are marked *