ಟೈಟಾನಿಕ್ ಹಡಗಿನ ದುರಂತದ ಕಥೆ ಎಲ್ಲರಿಗೂ ತಿಳಿದಿದೆ. ಆದರೆ ಇಷ್ಟು ತಂತ್ರಜ್ಞಾನಗಳು ಮುಂದುವರೆದರೂ ಯಾವ ಕಾರಣಕ್ಕೆ ಟೈಟಾನಿಕ್ ಹಡಗು ಮೇಲೆತ್ತಲು ಆಗಲಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರ ಬಹಳ ಜನರಿಗೆ ತಿಳಿದಿಲ್ಲ. ಇದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಟೈಟಾನಿಕ್ ಹಡಗಿನ ದುರಂತದ ಬಗ್ಗೆ ಎಲ್ಲರಿಗೂ ತಿಳಿದ ವಿಷಯವಾಗಿದೆ. 1911ರಲ್ಲಿ ಟೈಟಾನಿಕ್ ಹಡಗಿನ ದುರಂತ ನಡೆಯಿತು. ಹಡಗು ಏನಾಯ್ತು ಅಂತ ಪತ್ತೆ ಹಚ್ಚೋಕೆ ಹಲವಾರು ವರ್ಷಗಳೇ ಬೇಕಾಯಿತು. ದುರಂತದ ಹಿಂದಿನ ರಹಸ್ಯವನ್ನು ಪತ್ತೆಹಚ್ಚಲು ತುಂಬಾ ಪ್ರಯತ್ನಗಳು ನಡೆದವು. ಆದರೆ ಈ ಪ್ರಯತ್ನಗಳು ಟೈಟಾನಿಕ್ ಹಡಗಿನ ದುರಂತಕ್ಕೆ ಕಾರಣಗಳು ಹಾಗೂ ಮುಳುಗಿಹೋದ ಟೈಟಾನಿಕ್ ಹಡಗು ಎಲ್ಲಿದೆ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿರಲಿಲ್ಲ. 77 ವರ್ಷಗಳ ನಂತರ 1980 ರಲ್ಲಿ ಅಮೇರಿಕಾದ ನೌಕಾಪಡೆ ಅಧಿಕಾರಿ ರಾಬರ್ಟ್ ಬಲಾರ್ಡ್ ಎಂಬಾತ ಸಾಗರದ ಗರ್ಭದಲ್ಲಿ ಹುದುಗಿದ್ದ ವಿಶ್ವದ ದೈತ್ಯ ಹಡಗನ್ನು ಪತ್ತೆ ಹಚ್ಚುತ್ತಾನೆ. ಟೈಟಾನಿಕ್ ಹಡಗಿನ ಅವಶೇಷಗಳು ನ್ಯೂ ಫೌಂಡ್ ಲ್ಯಾಂಡ್ ಬಳಿ ಸಿಕ್ಕಿದವು. ಟೈಟಾನಿಕ್ ನ ಅವಶೇಷಗಳು ಇತಿಹಾಸದ ಗರ್ಭದಲ್ಲಿ ಅಡಗಿದ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದವು. ಎರಡು ಭಾಗವಾಗಿ ತುಂಡಾಗಿದ್ದ ಹಡಗು 12,500 ಅಡಿ ಆಳದಲ್ಲಿ ಅಂದರೆ ಸಮುದ್ರದಿಂದ 4 ಕಿಲೋಮೀಟರ್ ಕೆಳಗೆ ಪತ್ತೆಯಾಗಿದ್ದವು.

ಟೈಟಾನಿಕ್ ಹಡಗು ಎರಡು ಭಾಗವಾಗಿದ್ದು ಹೇಗೆ ಎಂಬುದರ ಬಗ್ಗೆ ಹಲವು ವಾದಗಳಿವೆ. ಸಾಮಾನ್ಯವಾಗಿ ಗೊತ್ತಿರುವ ಪ್ರಕಾರ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಎರಡು ತುಂಡಾಗಿದೆ ಎನ್ನಲಾಗುತ್ತದೆ. ಆದರೆ ಟೈಟಾನಿಕ್ ದಿ ನ್ಯೂ ಎವಿಡೆನ್ಸ್ ಡಾಕ್ಯುಮೆಂಟರಿ ಪ್ರಕಾರ ಹಡಗಿನಲ್ಲಿ ಸಂಭವಿಸಿದ ಬೆಂಕಿಯಿಂದ ಟೈಟಾನಿಕ್ ಎರಡು ಭಾಗವಾಯಿತು ಎನ್ನಲಾಗುತ್ತದೆ. ಟೈಟಾನಿಕ್ ಹಡಗು ಸಿಕ್ಕಾಗ ಅದರಲ್ಲಿದ್ದ ಅಮೂಲ್ಯ ವಸ್ತುಗಳನ್ನು ಹೊರ ತೆಗೆಯಲಾಗುತ್ತದೆ. ಇಲ್ಲಿಯವರೆಗೆ ಟೈಟಾನಿಕ್ ಹಡಗನ್ನು ಸಮುದ್ರದ ಆಳದಿಂದ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ಒಂದು ವೇಳೆ ಟೈಟಾನಿಕ್ ನ್ನು ಹೊರತೆಗೆದು ಸಂಶೋಧನೆ ಮಾಡಿದರೆ ದುರಂತದ ಹಿಂದಿನ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ದೊರಕುವ ಸಾಧ್ಯತೆ ಇತ್ತು. ಟೈಟಾನಿಕ್ ನ್ನು ಹೊರತೆಗೆಯಲು ಬಹಳ ಪ್ರಯತ್ನಗಳು ನಡೆದಿವೆ, ಟೈಟಾನಿಕ್ ಹಡಗು ತುಂಬಾ ವರ್ಷಗಳ ಕಾಲ ಸಮುದ್ರದಾಳದಲ್ಲಿ ಇದ್ದಿದ್ದರಿಂದ ಅದರ ಮೇಲೆ ಪಾಚಿಗಳು ಬೆಳೆದಿದೆ, ತುಕ್ಕು ಕೂಡ ಹಿಡಿದಿದೆ. ಒಂದು ವೇಳೆ ಕೇಬಲ್ ನಿಂದ ಅಥವಾ ಬೇರೆ ತಂತ್ರಜ್ಞಾನಗಳನ್ನು ಬಳಸಿ ಮೇಲೆ ಎತ್ತಲು ಅಷ್ಟು ಸುಲಭವಾಗಿಲ್ಲ. ಸಬ್ ಮರಿನ್ ಗಳಿಂದ ಹಾಗೂ ಅಯಸ್ಕಾಂತಗಳಿಂದ ಮೇಲೆತ್ತಬಹುದು ಎನ್ನುವ ಸಲಹೆಗಳು ಕೇಳಿಬಂದವು. ಆದರೆ ಕಾರ್ಯಾಚರಣೆಗೆ ಅಡ್ಡಿಗಳು ಇದ್ದವು. ಮೊದಲನೆಯದಾಗಿ ಟೈಟಾನಿಕ್ ಹಡಗಿನ ತೂಕ ಬರೋಬ್ಬರಿ 1,43,000 ಟನ್ ಇದ್ದವು. ಹಡಗು ನೀರಿನ ಆಳದಲ್ಲಿ ಇರುವುದರಿಂದ ನೀರಿನ ಒತ್ತಡ ಹೆಚ್ಚಾಗಿರುತ್ತದೆ. ಇದು ಅಸಾಧ್ಯ ಕೆಲಸವಾಗಿತ್ತು. 21ನೇ ಶತಮಾನದ ಆರಂಭದಲ್ಲಿ ವಿಜ್ಞಾನಿಗಳು ಪಿಂಕ್ ಪೋಂಕ್ ಚೆಂಡುಗಳ ಸಹಾಯದಿಂದ ಹಡಗನ್ನು ಮೇಲೆತ್ತುವ ಉಪಾಯವನ್ನು ಹುಡುಕಿದರು. ಈ ಚೆಂಡುಗಳು ಹಗುರವಾಗಿ ಇರುವುದರಿಂದ ಹಡಗಿನ ಒಳಗೆ ತುಂಬಿದರೆ ಸುಲಭವಾಗಿ ಮೇಲೆತ್ತಬಹುದು ಎನ್ನುವುದು ವಿಜ್ಞಾನಿಗಳ ವಾದವಾಗಿತ್ತು. ಅಷ್ಟು ಆಳದ ಒಳಗೆ ಹೋಗುವ ಮುಂಚೆಯೆ ಚೆಂಡುಗಳು ಒಡೆದುಹೋಗುತ್ತದೆ ಎಂಬ ಯೋಚನೆ ಮಾಡಿರಲಿಲ್ಲ.

ಬಲೂನ್ ಗಳ ಸಹಾಯದಿಂದ ಈ ಹಡಗನ್ನು ಮೇಲೆತ್ತಬಹುದು ಎನ್ನುವ ಉಪಾಯ ಕೂಡ ಹೊಳೆಯುತ್ತದೆ. ಹೀಲಿಯಂ ಬಲೂನುಗಳನ್ನು ಹಡಗಿಗೆ ಕಟ್ಟಿ ದೊಡ್ಡ ಬಲೂನುಗಳ ಸಹಾಯದಿಂದ ಮೇಲೆ ಎತ್ತಬಹುದು ಎಂದು ಅಂದಾಜಿಸಲಾಗಿತ್ತು ಆದರೆ ಬಲೂನುಗಳನ್ನು ಹೇಗೆ ಕೆಳಗಡೆ ತೆಗೆದುಕೊಂಡು ಹೋಗಬಹುದು ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿರಲಿಲ್ಲ. ಮಂಜುಗಡ್ಡೆಯ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆ ಇರುತ್ತದೆ. ಇದರಿಂದ ನೀರಿನಲ್ಲಿ ಮಂಜುಗಡ್ಡೆ ತೇಲುತ್ತದೆ ಇದನ್ನು ಬಳಸಿಕೊಂಡು ಟೈಟಾನಿಕ್ ಹಡಗನ್ನು ಮಂಜುಗಡ್ಡೆಯನ್ನಾಗಿ ಪರಿವರ್ತಿಸಲು ಯೋಜನೆ ಮಾಡುತ್ತಾರೆ ಅದಕ್ಕಾಗಿ ಲಿಕ್ವಿಡ್ ನೈಟ್ರೋಜನ್ ಬಳಸಿ ಹಡಗನ್ನು ಮೇಲೆತ್ತಬೇಕಾದರೆ ಬರೋಬ್ಬರಿ ಅರ್ಧ ಮಿಲಿಯನ್ ಲಿಕ್ವಿಡ್ ನೈಟ್ರೋಜನ್ ಅವಶ್ಯಕತೆ ಇರುತ್ತದೆ ಅಷ್ಟು ಪ್ರಮಾಣದಲ್ಲಿ ಲಿಕ್ವಿಡ್ ನೈಟ್ರೋಜನ್ ನ್ನು ಸಮುದ್ರದ ಆಳದಲ್ಲಿ ತಲುಪಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಈ ಉಪಾಯ ಕೂಡಾ ಫಲಿಸಲಿಲ್ಲ.

ಹಡಗು ನಿರ್ಮಾಣದ ದಿಗ್ಗಜರು ಒಂದು ಸಲಹೆ ನೀಡುತ್ತಾರೆ. ಈ ಹಡಗನ್ನು ಮೇಲೆತ್ತಬೇಕೆಂದರೆ ಸ್ವಚ್ಛ ಮಾಡಬೇಕು ಆದರೆ ಅದಕ್ಕೆ ಶಕ್ತಿಯುತವಾದ ಹೈಡ್ರೋ ಇನ್ಸುಲೇಶನ್ ನ ಅವಶ್ಯಕತೆ ಇತ್ತು. ಇದರ ಸ್ವಚ್ಛತೆಯ ನಂತರ ಕೇಬಲ್ ಸಹಾಯದಿಂದ ದೊಡ್ಡ ಬೋಟ್ ನ ಸಹಾಯದಿಂದ ಮೇಲೆತ್ತಲು ನಿರ್ಧರಿಸಲಾಗಿತ್ತು. ಅದಕ್ಕೆ ಬೇಕಾದ ಸಬ್ ಮರೀನ್ ಗಳನ್ನು ನಿರ್ಮಾಣ ಮಾಡುವ ಯೋಜನೆ ಮಾಡಲಾಗಿತ್ತು ಮತ್ತು ಅದರ ಟ್ಯಾಂಕ್ ನಲ್ಲಿ ಗ್ಯಾಸ್ ಹಾಕಲು ನಿರ್ಧರಿಸಲಾಗಿತ್ತು ಈ ಕಾರ್ಯಾಚರಣೆಗೆ ಇಪ್ಪತ್ತು ಮಿಲಿಯನ್ ಕಿಲೋ ವ್ಯಾಟ್ ಭಾರಿ ಪ್ರಮಾಣದ ವಿದ್ಯುತ್ ಅವಶ್ಯಕತೆ ಇತ್ತು ಅಂದರೆ ಪವರ್ ಪ್ಲಾಂಟ್ ನ ಪೂರ್ತಿ ವಿದ್ಯುತ್ ಬೇಕಾಗುತ್ತಿತ್ತು ಇಂಥದ್ದೊಂದು ಪವರ್ ಪ್ಲಾಂಟ್ ಅನ್ನು ನೀರಿನಲ್ಲಿ ಮಾಡಲು ಭವಿಷ್ಯದ ದೃಷ್ಟಿಯಿಂದ ಉಪಯೋಗಕ್ಕೆ ಬರದ ಕಾರಣ ಹಾಗೂ ಯಾವುದೇ ಕಂಪನಿ ಲಾಭ ಇಲ್ಲದೆ ಅಷ್ಟೊಂದು ಖರ್ಚು ಮಾಡಲು ಮುಂದಾಗಲಿಲ್ಲ. ಟೈಟಾನಿಕ್ ಹೇಗೆ ಮೇಲೆತ್ತಬೇಕು ಎನ್ನುವ ಪ್ರಶ್ನೆಗಳಿಗಿಂತ ಯಾಕೆ ಎತ್ತಬೇಕು ಎನ್ನುವ ಪ್ರಶ್ನೆಗಳು ಮೂಡಲಾರಂಭಿಸಿತು. ಅದರ ಅಮೂಲ್ಯ ವಸ್ತುಗಳನ್ನು ಆಗಲೇ ಮೇಲೆ ಎತ್ತಲಾಗಿದೆ ಉಳಿದಿರುವುದು ಅವಶೇಷ ಮಾತ್ರ. ಕೋಟಿ ಕೋಟಿ ಖರ್ಚು ಮಾಡಿ ಟೈಟಾನಿಕ್ ಮ್ಯೂಸಿಯಂ ಮಾಡಿದರೆ ಹಾಕಿದ ಹಣ ವಾಪಸ್ ಬರಬೇಕು ಎಂದರೆ ನೂರಾರು ವರ್ಷಗಳು ಬೇಕಾಗುತ್ತದೆ. ಯಾರೂ ಕೂಡ ಹಣ ಹೂಡಲು ಮುಂದಾಗಲಿಲ್ಲ ಟೈಟಾನಿಕ್ ಹಡಗು ಸಾಗರದ ಆಳ ಹುದುಗಿ ನೂರು ವರ್ಷಗಳೇ ಕಳೆದು ಹೋಗಿದೆ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು ಹಡಗನ್ನು ತಿನ್ನುತ್ತಿವೆ. ಸಂಶೋಧನೆಗಳ ಪ್ರಕಾರ ಈ ಬ್ಯಾಕ್ಟೀರಿಯಾಗಳು ಕೆಲವು ವರ್ಷಗಳಲ್ಲಿ ಹಡಗನ್ನು ತಿಂದು ಹಾಳು ಮಾಡುತ್ತವೆ ಎನ್ನಲಾಗಿದೆ. ಯುನೆಸ್ಕೋ 2001ರಲ್ಲಿ ಹಡಗನ್ನು ನೀರಿನ ಆಳದಲ್ಲಿರುವ ಪಾರಂಪರಿಕ ತಾಣ ಎಂದು ಹೇಳಿದೆ. ಅಷ್ಟು ಖರ್ಚು ಮಾಡಿ ಟೈಟಾನಿಕ್ ಹಡಗನ್ನು ಮೇಲೆತ್ತುವ ಬದಲು ಅದೇ ಹಣವನ್ನು ಹಾಕಿ ಟೈಟಾನಿಕ್ ಕಿಂತ ದೊಡ್ಡ ಹಡಗನ್ನು ಮಾಡಬಹುದು ಎನ್ನುವುದು ವಾದವಾಗಿದೆ. ಈ ಹಡಗಿನ ಮೇಲೆ ಹಾಲಿವುಡ್ ಸಿನೆಮಾ ಮಾಡಿದ್ದು ಇದಕ್ಕೆ ಆಸ್ಕರ್ ಪ್ರಶಸ್ತಿ ಕೂಡ ಲಭಿಸಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!