ಒಂದು ಟೀ ಹಾಗೂ 50 ರೂಪಾಯಿಗೆ ಕಷ್ಟ ಪಡುತಿದ್ದ ಡಾಲಿ ಧನಂಜಯ್ ಇವತ್ತು ಈ ಮಟ್ಟಕ್ಕೆ ಬೆಳೆಯಲು ಕಾರಣ ಯಾರು ಗೊತ್ತಾ, ಇಲ್ಲಿದೆ ನೋಡಿ ಸಕ್ಸಸ್ ಸ್ಟೋರಿ

0 4,215

ಕನ್ನಡ ಚಿತ್ರರಂಗಕ್ಕೆ ರಾಟೆ ಸಿನಿಮಾದಿಂದ ಎಂಟ್ರಿ ಆದ ಡಾಲಿ ಧನಂಜಯ್ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆಯಲು ಬಹಳ ಕಷ್ಟಪಟ್ಟಿದ್ದಾರೆ. ಧನಂಜಯ್ ಅವರು ಡಾಲಿ ಧನಂಜಯ್ ಆಗುವ ಮುನ್ನ ಅವರ ಜೀವನ ಹೇಗಿತ್ತು ಹಾಗೂ ಅವರ ಬಾಲ್ಯ, ಸಿನಿ ಪ್ರಯಾಣದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಧನಂಜಯ್ ಅವರು ಆಗಸ್ಟ್ 23,1974 ರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿಯಲ್ಲಿ ಜನಿಸುತ್ತಾರೆ. ಇವರ ತಂದೆ ಸ್ಕೂಲ್ ಮಾಸ್ಟರ್. ಇವರು ಚಿಕ್ಕವರಿದ್ದಾಗ ಊರಿನಲ್ಲಿ ನಡೆಯುವ ನಾಟಕಗಳಲ್ಲಿ ತಮ್ಮ ತಂದೆಯೊಂದಿಗೆ ಅಭಿನಯ ಮಾಡುತ್ತಿದ್ದರು ನಂತರ ನಟನೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಹೀರೊ ಆಗಬೇಕೆಂಬ ಕನಸು ಕಾಣುತ್ತಾರೆ, ಶಾಲೆಯಲ್ಲಿ ಯಾವುದೆ ನಾಟಕವಾದರೂ ಸರಿ ಭಾಗವಹಿಸುತ್ತಿದ್ದರು. ಅವರು ವಿದ್ಯಾಭ್ಯಾಸದಲ್ಲಿ ಕೂಡ ಮುಂದಿದ್ದರು. ಇವರು ಏಳು ಮತ್ತು ಹತ್ತನೇ ತರಗತಿಯಲ್ಲಿ ಹಾಸನ ಜಿಲ್ಲೆಗೆ ಟಾಪರ್ ಆಗಿರುತ್ತಾರೆ. ನಂತರ ಬ್ಯಾಂಕ್ ನಲ್ಲಿ ಲೋನ್ ಮಾಡಿ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ಇನ್ಫೋಸಿಸ್ ಕಂಪನಿಯಲ್ಲಿ ಇವರಿಗೆ ಕೆಲಸ ಸಿಗುತ್ತದೆ. ಒಂದು ವರ್ಷ ಕೆಲಸ ಮಾಡಿ ಮನೆಯವರಿಗೂ ತಿಳಿಸದೆ ಕೆಲಸಕ್ಕೆ ರಿಸೈನ್ ಮಾಡಿ ಚಿಕ್ಕ ವಯಸ್ಸಿನಲ್ಲಿ ತಾವು ಕಂಡ ಹೀರೋ ಆಗಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಮೈಸೂರಿನ ರಂಗಾಯಣ ನಾಟಕ ಮಂಡಳಿಯ ನಾಟಕಗಳನ್ನು ಪದೇ ಪದೇ ನೋಡುತ್ತಾರೆ. ನಂತರ ರಂಗಾಯಣ ನಾಟಕ ಮಂಡಳಿಯನ್ನು ಸೇರಿಕೊಂಡು ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಾರೆ. ನಾಟಕ ತರಬೇತಿ ಪಡೆಯುತ್ತಿರುವಾಗ ಜರ್ಮನಿ ಮೂಲದ ರಂಗಭೂಮಿ ನಿರ್ದೇಶಕರಾದ ಕ್ರಿಶ್ಚಿಯನ್ ಸ್ಟೆಕಲ್ ಅವರ ಪರಿಚಯವಾಗುತ್ತದೆ. ಕ್ರಿಶ್ಚಿಯನ್ ಅವರನ್ನು ಧನಂಜಯ್ ಅವರು ತಮ್ಮ ಊರಿಗೆ ಕರೆದುಕೊಂಡು ಹೋಗಿ, ಊರನ್ನು ಪರಿಚಯಿಸುತ್ತಾರೆ ಬೇಲೂರು, ಹಳೇಬೀಡು ಕ್ಷೇತ್ರಗಳನ್ನು ತೋರಿಸುತ್ತಾರೆ ಇದರಿಂದ ಖುಷಿಯಾಗಿ ಕ್ರಿಶ್ಚಿಯನ್ ಅವರು ನಾನು ನಿಮ್ಮ ಊರಿಗೆ ಬಂದೆ ನೀನು ನಮ್ಮ ಊರಿಗೆ ಬಾ ಎಂದು, ತಾವೇ ಖರ್ಚನ್ನು ಭರಿಸಿ ಧನಂಜಯ್ ಅವರನ್ನು ಜರ್ಮನಿಗೆ ಕರೆಸಿಕೊಳ್ಳುತ್ತಾರೆ. ಜರ್ಮನಿಯಲ್ಲಿ ಧನಂಜಯ್ ಅವರು ನಾಟಕಗಳಲ್ಲಿ ಅಭಿನಯಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ.‌ ನಂತರ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಸೈನಿಕನ ಪಾತ್ರವನ್ನು ಅಭಿನಯಿಸುತ್ತಾರೆ ಅದಕ್ಕಾಗಿ ಅವರಿಗೆ ಒಂದು ಕಪ್ ಟೀ ಮತ್ತು 50 ರೂಪಾಯಿಯನ್ನು ಕೊಡುತ್ತಾರೆ, ಅದೆ ಧನಂಜಯ್ ಅವರ ನಾಟಕ ಜೀವನದ ಮೊದಲ ದುಡಿಮೆಯಾಗಿರುತ್ತದೆ.

ನಂತರ ನಾಟಕಗಳಲ್ಲಿ ಅಭಿನಯಿಸುತ್ತಾರೆ, ನಿರ್ದೇಶಕರಾದ ಗುರುಪ್ರಸಾದ್ ಅವರ ಪರಿಚಯವಾಗುತ್ತದೆ. ಧನಂಜಯ್ ಅವರು ಗುರುಪ್ರಸಾದ್ ಅವರೊಂದಿಗೆ ಕೆಲಸ ಮಾಡುತ್ತಿರುತ್ತಾರೆ, ತಮ್ಮ ಡೈರೆಕ್ಟರ್ ಸ್ಪೆಷಲ್ ಎಂಬ ಚಿತ್ರದಲ್ಲಿ ಧನಂಜಯ್ ಅವರಿಗೆ ಹೀರೋ ಆಗಿ ನಟನೆ ಮಾಡಲು ಅವಕಾಶ ನೀಡುತ್ತಾರೆ. ಅವಕಾಶವನ್ನು ಉಪಯೋಗಿಸಿಕೊಂಡ ಧನಂಜಯ್ ಅವರು ವಿಭಿನ್ನವಾಗಿ ಅಭಿನಯಿಸುತ್ತಾರೆ ಅಲ್ಲದೆ ತಮ್ಮ ನಟನೆಗೆ ಸೈಮಾ ಅವಾರ್ಡ್ ಅನ್ನು ಪಡೆಯುತ್ತಾರೆ. ನಂತರ ಬೆಂಗಳೂರಿನಲ್ಲಿ ತಮಗಾದ ಅನುಭವವನ್ನು ಜಯನಗರ ಫೋರ್ಥ್ ಬ್ಲಾಕ್ ಎಂಬ ಶಾರ್ಟ್ ಫಿಲ್ಮ್ ಗೆ ಸ್ಕ್ರಿಪ್ಟ್ ಬರೆದು ಅಭಿನಯಿಸುತ್ತಾರೆ. ನಂತರ ರಾಟೆ ಸಿನಿಮಾದಲ್ಲಿ ನಟನಾಗಿ ಅಭಿಯಿಸುತ್ತಾರೆ, ಶೂಟಿಂಗ್ ಸಮಯದಲ್ಲಿ ಸಣ್ಣ ಪುಟ್ಟ ಗಾಯ ಮಾಡಿಕೊಳ್ಳುತ್ತಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತದೆ ನಂತರ ಬಾಕ್ಸರ್, ಜೆಸ್ಸಿ, ಬದ್ಮಾಶ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಅಲ್ಲಮ ಎಂಬ ಸಿನಿಮಾದಲ್ಲಿ ನಟಿಸಿ ಫಿಲ್ಮ್ ಫೇರ್ ಪ್ರಶಸ್ತಿ ದೊರೆಯುತ್ತದೆ. ಎರಡನೇ ಸಲ ಸಿನಿಮಾದಲ್ಲಿ ನಟಿಸುತ್ತಾರೆ, ಇವರು ಅಭಿನಯಿಸಿದ ಸಿನಿಮಾಗಳು ವಿಶೇಷವಾಗಿ ಇದ್ದರೂ ಹೇಳಿಕೊಳ್ಳುವಷ್ಟು ಯಶಸ್ಸು ಸಿಗುವುದಿಲ್ಲ. ಇವರಿಗೆ ಚಿತ್ರರಂಗದಲ್ಲಿ ಅವಮಾನವಾಗುತ್ತದೆ, ಅವಮಾನ ಮಾಡಿದವರಿಗೆ ನಾನೇನೆಂದು ತೋರಿಸಬೇಕೆಂದು ನಿರ್ಧರಿಸುತ್ತಾರೆ.

ನಂತರ ಶಿವರಾಜ್ ಕುಮಾರ್ ಅವರ ಟಗರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಾರೆ. ಈ ಸಿನಿಮಾ ಹಿಟ್ ಆಗುತ್ತದೆ ಡಾಲಿ ಧನಂಜಯ್ ಎಂಬ ಹೆಸರಿನಿಂದ ಅವರನ್ನು ಜನರು ಮೆಚ್ಚುತ್ತಾರೆ. ಸತತ ಸೋಲುಗಳನ್ನು ನೋಡಿದ ಧನಂಜಯ್ ಅವರಿಗೆ ಟಗರು ಸಿನಿಮಾ ಡಾಲಿ ಪಾತ್ರ ಯಶಸ್ಸನ್ನು ಕೊಟ್ಟಿತು. ನಂತರ ಹಲವು ಸಿನಿಮಾದಲ್ಲಿ ನಟಿಸಲು ಧನಂಜಯ್ ಅವರಿಗೆ ಅವಕಾಶ ಸಿಗುತ್ತದೆ. ನಂತರ ದರ್ಶನ್ ಅವರ ಯಜಮಾನ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಾರೆ. ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುತ್ತಾರೆ. ಸತತ ಸೋಲು ಅನುಭವಿಸಿದರೂ ಎದೆಗುಂದದೆ ತಮ್ಮ ಪ್ರಯತ್ನ ಬಿಡದೆ ಯಶಸ್ಸನ್ನು ಪಡೆದರು. ಅವಮಾನವಾದ ಚಿತ್ರರಂಗದಲ್ಲಿ ಇಂದು ತಮ್ಮದೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಯಾವ ಪಾತ್ರ ಬೇಕಾದರೂ ಮಾಡುವ ಅವರಿಗೆ ಹೆಚ್ಚಿನ ಸಿನಿಮಾ ಅವಕಾಶಗಳು ಸಿಗಲಿ ಎಂದು ಆಶಿಸೋಣ.

Leave A Reply

Your email address will not be published.