tirupati temple To KSRTC: ಉತ್ತರ ಕನ್ನಡದಿಂದ ತಿರುಪತಿಗೆ ಯಾವ ಬಸ್ಸಿನ ಸೌಲಭ್ಯನೂ ಇರಲಿಲ್ಲ ಈಗ ಬಸ್ಸಿನ ಸೌಲಭ್ಯ ಶುರುವಾಗುವುದರಲ್ಲಿದೆ ಬಸ್ಸನ್ನ ಕರ್ನಾಟಕ ಸಾರಿಗೆ ಸಂಸ್ಥೆ ಹೊಸದಾಗಿ ಆರಂಭಿಸಿದೆ ಇನ್ನು ಮೇಲೆ ತಿರುಪತಿಗೆ ನಾವು ಸುಲಭವಾಗಿ ಹೋಗಿ ಬರಬಹುದು. ಇಷ್ಟರವರೆಗೆ ಕುಮಟಾದಿಂದ ತಿರುಪತಿಗೆ ಬಸ್ಸಿನ ಸೇವೆ ಇರಲಿಲ್ಲ ಹೋಗು ಯಾತ್ರಿಗಳು ಅಲ್ಲಿ ಇಲ್ಲಿ ಹೋಗಿ ಏನೋ ಬಸ್ಸನ್ನ ಹುಡುಗಿ ತುಂಬಾ ಕಷ್ಟಪಟ್ಟು ಹೋಗಬೇಕಾಗಿತ್ತು ಆದರೆ ಈಗ ರಾಜ್ಯ ಸರ್ಕಾರ ತುಂಬಾ ಸುಲಭದ ಒಂದು ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.
ಕುಮಟಾದಿಂದ ಸಂಜೆ 4 ಗಂಟೆಗೆ ಹೊರಡುವ ಈ ಬಸ್ ಶಿರಸಿಗೆ ಐದು ಮೂವತ್ತೈದಕ್ಕೆ ತಲುಪುತ್ತದೆ ನಂತರ 7:30ಗೆ ಸಾಗರ ಮಾರ್ಗವಾಗಿ ಒಂಬತ್ತು ವರೆಗೆ ಶಿವಮೊಗ್ಗ ತಲುಪುತ್ತದೆ ಅಲ್ಲಿಂದ ಬೆಂಗಳೂರಿಗೆ 4:30ಗೆ ತಲುಪುತ್ತದೆ ಅಲ್ಲಿಂದ ಬೆಳಿಗ್ಗೆ 9:30ಗೆ ತಿರುಪತಿಯನ್ನ ತಲುಪಲಿದೆ ಎಂದು ವರದಿಯ ಮೂಲಗಳು ತಿಳಿಸಿವೆ. ಹಾಗೆಯೇ ಮರುದಿನ ಸಂಜೆ 4 ಗಂಟೆಗೆ ತಿರುಪತಿಯನ್ನ ಬಿಟ್ಟು ಅದರ ಮುಂದಿನ ದಿನ ಬೆಳಿಗ್ಗೆ 10:30ಗೆ ಕುಮಟವನ್ನ ಪುನಃ ತಲುಪಲಿದೆ ಕರಾವಳಿಯ ತಿಮ್ಮಪ್ಪನ ಭಕ್ತರಿಗೆ ಇದು ಒಂದು ಸುವರ್ಣ ಅವಕಾಶ ಅಂತಾನೆ ಹೇಳಬಹುದು ಇದರ ಪ್ರಯೋಜನವನ್ನು ಪಡೆದುಕೊಂಡು ಕೃತಾರ್ಥರಾಗಿ ಎಂದು ಇಲಾಖೆಯ ಜನಸಾಮಾನ್ಯರಿಗೆ ತಿಳಿಸಿದೆ.
ಹೌದು ಇಷ್ಟು ದಿನ ಉತ್ತರ ಕನ್ನಡದ ಭಾಗದ ಜನರಿಗೆ ತಿರುಪತಿಗೆ ಹೋಗಲು ಯಾವುದೇ ಸೌಲಭ್ಯ ಇರಲಿಲ್ಲ ಎಲ್ಲರಿಗೂ ತಿರುಪತಿಗೆ ಹೋಗುವ ಇಷ್ಟ ಇದ್ದರೂ ಕೂಡ ತಿರುಪತಿಗೆ ವಯಸ್ಕರರಿಗೆ ಹಾಗೂ ಚಿಕ್ಕ ಚಿಕ್ಕ ಮಕ್ಕಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಆದರೆ ಇದೀಗ ಒಂದು ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆ ಒಂದು ವ್ಯವಸ್ಥೆಯನ್ನು ಕಲ್ಪಿಸಿದ್ದು ಈಗ ಸುಲಭವಾಗಿ ತಿರುಪತಿಗೆ ಹೋಗಿ ತಿರುಪತಿಯ ಬಾಲಾಜಿಯ ದರ್ಶನವನ್ನು ಪಡೆದುಕೊಂಡು ಬರಬಹುದಾಗಿದೆ.
ಇದು ನಾಡಿನ ಜನತೆಗೆ ಶುಭ ಸುದ್ದಿ ಅಂತನೇ ಹೇಳಬಹುದು ಎಲ್ಲಿಂದಲೋ ಎಲ್ಲಿಗೋ ಜನರು ತಿರುಪತಿಗೆ ಹೋಗಿ ಬರುತ್ತಿದ್ದರು ಆದರೆ ಇಲ್ಲೇ ಇರುವ ನಮ್ಮ ಉತ್ತರ ಕನ್ನಡದ ಜನರಿಗೆ ಹೋಗಲು ಹೋಗಿ ಬರಲು ಸಾಧ್ಯವಾಗುತ್ತಿರಲಿಲ್ಲ. ಜನತೆಯ ಸಂಕಷ್ಟವನ್ನು ಅರ್ಥ ಮಾಡಿಕೊಂಡ ರಾಜ್ಯ ಸಾರಿಗೆ ಸಂಸ್ಥೆ ಇಂದು ಈ ಸೌಲಭ್ಯವನ್ನು ಕಲ್ಪಿಸಿದೆ ಅದರಿಂದ ಜನಗಳಿಗೆ ತುಂಬಾ ಸಂತೋಷವಾಗಿದೆ ಅಂತ ಹೇಳಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ ಚೈತ್ರ ಕುಂದಾಪುರಗೂ ಹಾಗೂ ಹಾಲಶ್ರೀ ಸ್ವಾಮೀಜಿಗೂ ಏನ್ ಲಿಂಕ್? ಇಲ್ಲಿದೆ ಇವರ ರಿಯಲ್ ಲೈಫ್ ಸ್ಟೋರಿ