Tirupati Temple: ತಿರುಪತಿ ಯಾತ್ರೆಗೆ ಹೊರಡುವವರೆಗೆ ಇದೀಗ ಹೆಲಿಕ್ಯಾಪ್ಟರ್ ಸೇವೆ ಆರಂಭಿಸಿದ ಫ್ಲೈ ಬ್ಲೇಡ್ ಇಂಡಿಯಾ ಸಂಸ್ಥೆ.ಇನ್ನು ಮುಂದೆ ತಿರುಪತಿಗೆ ಪ್ರಯಾಣ ಬೆಳೆಸುವ ಜನರು ಹೆಲಿಕ್ಯಾಪ್ಟರ್ ಮುಖಾಂತರ ಪ್ರಯಾಣಿಸಬಹುದಾಗಿದೆ ಬೆಂಗಳೂರಿನಿಂದ ತಿರುಪತಿಗೆ ಹೆಲಿಕ್ಯಾಪ್ಟರ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದ್ದು ತಿರುಪತಿ (Tirupati Temple) ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಬರುವ ಸಾವಿರಾರು ಭಕ್ತರು ಈ ಉಪಯೋಗವನ್ನ ಪಡೆದುಕೊಳ್ಳಬಹುದು ಇದನ್ನು ಹೊರತುಪಡಿಸಿ ದೇವಸ್ಥಾನಗಳಲ್ಲಿಯೂ ಸಹ ಭಕ್ತರಿಗಾಗಿ ವಿಶೇಷ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸಿಗುವ ವಿಶೇಷ ಸೌಲಭ್ಯಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ. ವೃದ್ಧರಿಗೆ ಮಹಿಳೆಯರಿಗೆ ಮಕ್ಕಳಿಗೆ ವಿವಿಧ ಪ್ರದೇಶಗಳಿಂದ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಬೇರೆಬೇರೆ ರೀತಿಯ ಸೌಲಭ್ಯಗಳನ್ನ ಅಲ್ಲಿ ಒದಗಿಸಲಾಗಿದೆ ಇದೀಗ ಬೆಂಗಳೂರಿನಿಂದ ತಿರುಪತಿಗೆ ತೆರಳುವ ಭಕ್ತರಿಗೆ ಫ್ಲೈ ಬ್ಲೇಡ್ ಇಂಡಿಯಾ ಸಂಸ್ಥೆಯು ಸಿಹಿ ಸುದ್ದಿ ನೀಡಿದ್ದು ಇದು ಬೆಂಗಳೂರಿನಿಂದ ತಿರುಪತಿಗೆ ತೆರಳುವ ಭಕ್ತಾದಿಗಳಿಗೆ ಹೆಲಿಕ್ಯಾಪ್ಟರ್ ಸೇವೆಯನ್ನು ನೀಡಲು ತೀರ್ಮಾನಿಸಿದೆ ಈ ಮೂಲಕ ಭಕ್ತಾದಿಗಳು ಸುಲಭವಾಗಿ ತಿರುಪತಿಗೆ ತಲುಪಿ ತಿಮ್ಮಪ್ಪನ ದರ್ಶನವನ್ನು ಮುಗಿಸಿ ವಾಪಸ್ ಆಗಬಹುದು.
ಈ ಹೆಲಿಕ್ಯಾಪ್ಟರ್ ಸೇವೆಯನ್ನ ಪಡೆಯಲು ಫ್ಲೈ ಬ್ಲೇಡ್ ಇಂಡಿಯಾ ಸಂಸ್ಥೆಯು ಬೆಲೆಯನ್ನ ಸುಮಾರು 3,50,000ಕ್ಕೆ ನಿಗದಿಪಡಿಸಲಾಗಿದೆ ಬೆಳಿಗ್ಗೆ 9:15 -9:30 ಹಾಗೂ ಸಂಜೆ 4:00 – 4:15 ರ ಸುಮಾರಿಗೆ ಹೆಲಿಕ್ಯಾಪ್ಟರ್ ಹೊರಡುವ ಸಮಯ ನಿಗದಿಪಡಿಸಲಾಗಿದೆ, ಪ್ರತಿ ಹೆಲಿಕ್ಯಾಪ್ಟರ್ ನಲ್ಲಿ ಗರಿಷ್ಠ ಎಂದರೆ ಐದು ಪ್ರಯಾಣಿಕರು ಪ್ರಯಾಣಿಸಬಹುದು ಈ ಯೋಜನೆಯು ಅನೇಕ ಭಕ್ತಾದಿಗಳಿಗೆ ಉಪಯೋಗಕಾರಿ ಯಾಗಲಿದೆ.
ಇದನ್ನೂ ಓದಿ Astrology Kannada: ಕಷ್ಟ ಅನ್ನೋ ಚಿಂತೆ ಬಿಟ್ಟುಬಿಡಿ, ಈ ರಾಶಿಯವರ ಮೇಲಿದೆ ಆಂಜನೇಯ ಸ್ವಾಮಿಯ ರಕ್ಷಣೆ