Ultimate magazine theme for WordPress.

ತಿರುಪತಿಯಲ್ಲಿ ಬಂಗಾರದ ಬಾವಿ ಇರೋದು ನಿಜಾನಾ? ವಿಡಿಯೋ

0 842

ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯದ ಹತ್ತಿರ ಬಂಗಾರದ ಬಾವಿ ಇದೆ ಎಂದು ಹೇಳುತ್ತಾರೆ. ಬಂಗಾರದ ಬಾವಿ ಎಲ್ಲಿದೆ, ಬಂಗಾರದ ಬಾವಿಯಲ್ಲಿ ಏನಿದೆ ಹಾಗೂ ಅದರ ವಿಶೇಷತೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಆಂಧ್ರಪ್ರದೇಶದ ತಿರುಪತಿಯಲ್ಲಿ ವೆಂಕಟೇಶ್ವರನು ಭೂದೇವಿ, ಶ್ರೀದೇವಿ ಜೊತೆ ಲೀಲಾ ಮಾನವ ರೂಪದಲ್ಲಿ ಶ್ರೀ ವೈಕುಂಠಾಧಿಪತಿ ಭೂಲೋಕದಲ್ಲಿ ನೆಲೆಸಿದ್ದಾನೆ. ಶ್ರೀ ವೆಂಕಟಾಚಲ ಕ್ಷೇತ್ರದಲ್ಲಿ ಸಂಚಾರ ಮಾಡುವ ಸಮಯದಲ್ಲಿ ಸ್ವಾಮಿಗೆ ಅಡುಗೆ ಮಾಡುವ ಸಲುವಾಗಿ ಮಹಾಲಕ್ಷ್ಮೀಯು ತೀರ್ಥವನ್ನು ಏರ್ಪಾಡು ಮಾಡುತ್ತಾಳೆ ಅದನ್ನು ಶ್ರೀ ತೀರ್ಥ ಎಂದು ಕರೆಯುತ್ತಾರೆ. ಅದರಂತೆ ಭೂದೇವಿಯು ಒಂದು ತೀರ್ಥವನ್ನು ಏರ್ಪಾಡು ಮಾಡುತ್ತಾಳೆ ಅದನ್ನು ಭೂ ತೀರ್ಥ ಎಂದು ಕರೆಯುತ್ತಾರೆ. ಕಾಲಾನಂತರ ಈ ಎರಡು ತೀರ್ಥ ಅದೃಶ್ಯ ನಿಕ್ಷೇಪವಾಯಿತು. ನಂತರ ಶ್ರೀ ವೆಂಕಟೇಶ್ವರ ಸ್ವಾಮಿಗೆ ವೈಖಾನ ಸಾಗಮನ ಎಂಬ ಶಾಸ್ತ್ರವನ್ನು ಮಾಡುವ ಸಲುವಾಗಿ ಪ್ರಧಾನ ಅರ್ಚಕರು ಹಾಗೂ ಸಹಾಯಕ ಅರ್ಚಕರಾದ ರಂಗದಾಸು ತಿರುಮಲಕ್ಕೆ ಬರುತ್ತಾರೆ. ಸ್ವಾಮಿಗೆ ಅವಶ್ಯಕವಾಗಿ ಬೇಕಾಗುವ ಪುಷ್ಪಗಳಿಗಾಗಿ ತೋಟವನ್ನು ಬೆಳೆಸಬೇಕು ಎಂದು ತೀರ್ಮಾನಿಸಿ ಎರಡು ಬಾವಿಗಳನ್ನು ನಿರ್ಮಾಣ ಮಾಡುತ್ತಾರೆ. ಅದೇ ಸ್ಥಳದಲ್ಲಿ ಇದ್ದ ಪುರಾತನ ಭೂ ತೀರ್ಥ ಹಾಗೂ ಶ್ರೀ ತೀರ್ಥಗಳು ಬೆಳಕಿಗೆ ಬರುತ್ತದೆ. ರಂಗದಾಸು ಮರಣಹೊಂದುತ್ತಾನೆ, ನಂತರ ತೋಟದ ಪುಷ್ಪಗಳಿಂದ ಶ್ರೀ ವೆಂಕಟೇಶ್ವರನನ್ನು ಅಲಂಕರಿಸುತ್ತಾರೆ. ಹಲವು ವರ್ಷಗಳ ನಂತರ ಅರ್ಚಕನು ಚಕ್ರವರ್ತಿಯಾಗಿ ಜನಿಸುತ್ತಾನೆ. ಇದರಿಂದ ಮತ್ತೆ ವೆಂಕಟೇಶ್ವರಸ್ವಾಮಿಯ ಸೇವೆ ಮಾಡಲು ಅವಕಾಶ ಕೂಡಿ ಬರುತ್ತದೆ. ಈ ಚಕ್ರವರ್ತಿಯ ಕನಸಿನಲ್ಲಿ ವೆಂಕಟೇಶ್ವರ ಸ್ವಾಮಿಯು ಬಂದು ಪೂರ್ವ ಜನ್ಮದ ವೃತ್ತಾಂತವನ್ನು ತಿಳಿಸುತ್ತಾನೆ ಹಾಗೂ ಒಂದು ದೇವಾಲಯವನ್ನು ನಿರ್ಮಾಣ ಮಾಡಿ ಅದರಮೇಲೆ ಬಂಗಾರದ ವಿಮಾನವನ್ನು ನಿರ್ಮಾಣ ಮಾಡಿ ಪುರಾತನ ಶ್ರೀ ತೀರ್ಥ ಮತ್ತು ಭೂ ತೀರ್ಥವನ್ನು ಪುನರ್ ಸ್ಥಾಪಿಸಬೇಕೆಂದು ಚಕ್ರವರ್ತಿಗೆ ಆಜ್ಞಾಪಿಸುತ್ತಾರೆ. ಆಗ ಚಕ್ರವರ್ತಿ ಶ್ರೀ ತೀರ್ಥವನ್ನು ಪುನರ್ ಅಭಿವೃದ್ಧಿಗೊಳಿಸಿ ಅದಕ್ಕೆ ಬಂಗಾರದ ಲೇಪನವನ್ನು ಮಾಡಿಸುತ್ತಾರೆ, ಅದು ನಂತರ ಬಂಗಾರದ ಬಾವಿಯಾಗಿ ಪ್ರಸಿದ್ಧಿ ಹೊಂದಿತು. ಹಾಗೆಯೇ ಭೂ ತೀರ್ಥವನ್ನು ಅಭಿವೃದ್ಧಿಗೊಳಿಸಿ ಅದಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು ನಂತರ ಮೆಟ್ಟಿಲುಗಳ ಬಾವಿ ಎಂದು ಪ್ರಸಿದ್ದಿ ಪಡೆಯಿತು, ಈಗ ಹೂವಿನಬಾವಿಯಾಗಿದೆ. ಕಾಲಾನಂತರ ಬಂಗಾರದ ಬಾವಿಯ ನೀರನ್ನು ಅಡುಗೆಗೆ, ಅರ್ಚನೆಗೆ ಬಳಸುತ್ತಿದ್ದರು. ಬಂಗಾರದ ಬಾವಿಯ ನೀರಿನಿಂದ ಸ್ವಾಮಿಯ ಅಭಿಷೇಕ ಮಾಡಿದ ನಂತರ ಬಂಗಾರದ ಬಾಗಿಲು ಇದೆ ಅಲ್ಲಿಂದ ಎದುರಿಗೆ ಅಡುಗೆಮನೆ ತಯಾರಿ ಕೊಠಡಿ ಇದೆ. ಅದರ ಎದುರಿಗೆ ಇರುವ ಮಾರ್ಗದಲ್ಲಿ ಒಕುಳ ದೇವಿಯನ್ನು ದರ್ಶನ ಮಾಡಬಹುದಾಗಿದೆ ಅಲ್ಲಿಂದ ಹೋಗುವ ದಾರಿಯಲ್ಲಿಯೇ ಬಂಗಾರದ ಬಾವಿ ಇದೆ. ಕಲ್ಲಿನಿಂದ ಈ ಬಾವಿಯನ್ನು ನಿರ್ಮಿಸಲಾಗಿದೆ. ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿಯ ಮೂಲ ವಿರಾಟನ ವಿಗ್ರಹವಿದೆ. ಅದಕ್ಕೆ ಪ್ರತಿ ಶುಕ್ರವಾರ ಅಭಿಷೇಕ ನಡೆಯುತ್ತದೆ.

ತಿರುಮಲ ನಂದಿ ಎಂಬ ವ್ಯಕ್ತಿಯು 11ನೇ ಶತಮಾನದಲ್ಲಿ ಪಾಪ ವಿನಾಶ ತೀರ್ಥದಿಂದ ಪ್ರತಿನಿತ್ಯ ಸ್ವಾಮಿಗೆ ಅಭಿಷೇಕ ಮಾಡುತ್ತಿದ್ದನು. ಈ ಸಮಯದಲ್ಲಿ ಗುರುಗಳಾದ ಯಮುನಾಚಾರ್ಯರು ತಿರುಮಲಕ್ಕೆ ತೆರಳಿ ಶ್ರೀನಿವಾಸ ದೇವರ ದರ್ಶನ ಪಡೆಯುತ್ತಾರೆ. ಆಗ ಅತ್ಯಂತ ಮಳೆ ಸಂಭವಿಸುತ್ತದೆ ಆಗ ತಿರುಮಲದಿಂದ ಪಾಪ ವಿನಾಶಕ ಜಲವನ್ನು ಅಭಿಷೇಕ ಮಾಡಲು ತೆಗೆದುಕೊಂಡು ಬರುವಾಗ ಯಾವುದೇ ವಿಘ್ನ ಬರಬಾರದೆಂದು ಶ್ರೀಲಕ್ಷ್ಮೀಯು ಬೇಡಿಕೊಳ್ಳುತ್ತಾಳೆ. ಶ್ರೀನಿವಾಸನ ಅಭಿಷೇಕಕ್ಕೆ ಇತರ ತೀರ್ಥಗಳಿಗಿಂತ ಶ್ರೀ ತೀರ್ಥ ಜಲವು ಸರ್ವಶ್ರೇಷ್ಠವಾಗಿದೆ ಹಾಗಾಗಿ ಇನ್ನು ಮುಂದೆ ಶ್ರೀ ತೀರ್ಥದ ಜಲವನ್ನು ವೆಂಕಟೇಶ್ವರ ಸ್ವಾಮಿಯ ಅಭಿಷೇಕ ಮಾಡಲು ಬಳಸಬೇಕು ಎಂದು ಹೇಳಿಕೊಳ್ಳುತ್ತಾಳೆ. ಬಂಗಾರದ ಬಾವಿಯನ್ನು ಸ್ವಾಮಿಯ ರೂಪ ಎಂದು ಇದನ್ನು ಸ್ವಾಮಿ ಕೂಪ ಎಂದು ಕೂಡ ಕರೆಯುತ್ತಾರೆ. ಬಂಗಾರದ ಬಾವಿಯ ಕೆಳಗೆ ವಿರಾಜ ನದಿ ಈಗಲೂ ಹರಿಯುತ್ತದೆ ಎಂಬ ನಂಬಿಕೆಯಿದೆ. ಈ ಕಾರಣದಿಂದಲೇ ಈ ಬಾವಿಯಲ್ಲಿ ಎಂದಿಗೂ ಇದುವರೆಗೂ ನೀರು ಬತ್ತಿಲ್ಲ. ಬೆಂಗಳೂರಿನಿಂದ ತಿರುಮಲ ದೇವಾಲಯ 291 ಕಿಲೋಮೀಟರ್ ದೂರದಲ್ಲಿದೆ.

Leave A Reply

Your email address will not be published.