ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತಿನಲ್ಲಿ ಹಬ್ಬಿಕೊಂಡಿದೆ. ಪ್ರತಿಯೊಂದು ದೇಶವು ಒಂದೇ ಬಾರಿ ಆರ್ಥಿಕವಾಗಿ ಹಿಂದುಳಿಯುವಂತೆ ಮಾಡಿದೆ. ಕೊರೊನಾದಿಂದಾಗಿ ಭಾರತದಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ಆಗ ಎಷ್ಟೋ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದರು. ಆದರೆ ಇಲ್ಲಿ ಒಬ್ಬ ಹುಡುಗ ಲಾಕ್ ಡೌನ್ ಸಮಯದಲ್ಲಿ ಒಂದು ಕೋಟಿ ಗಳಿಸಿದ್ದಾನೆ. ನಾವು ಇಲ್ಲಿ ಈ ಹುಡುಗನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈ ಹುಡುಗನ ಹೆಸರು ಯುವರಾಜ್. ಈತನ ವಯಸ್ಸು 18. ಈತ ರಾಜಸ್ಥಾನ ರಾಜ್ಯದ ಒಂದು ಕುಗ್ರಾಮದಲ್ಲಿ ಇವನು ಜನಿಸಿದ್ದಾನೆ. ಈತನ ತಂದೆಯ ಉದ್ಯೋಗ ಟೈಲ್ಸ್ ಜೋಡಣೆ ಮಾಡುವುದು. ದಿನಗೂಲಿ ಪಡೆಯುವ ನೌಕರ ಇವರ ತಂದೆಯಾಗಿದ್ದರು. ಇವರ ಕುಟುಂಬ ತುಂಬಾ ಬಡತನದಲ್ಲಿ ಕೂಡಿತ್ತು. ಈಗ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದಾದರೂ ಮೊಬೈಲ್ ಇದ್ದೇ ಇರುತ್ತದೆ. ಆದರೆ ಇಲ್ಲಿ ಮೊಬೈಲ್ ಕೂಡ ಇರಲಿಲ್ಲ.
ಈ ಹುಡುಗನಿಗೆ ಒಂದು ತಂಗಿಯಿದ್ದಳು. ಮೊಬೈಲ್ ತೆಗೆದುಕೊಳ್ಳಬೇಕು ಎನ್ನುವುದು ಯುವರಾಜ್ ಮತ್ತು ಅವನ ತಂಗಿಯ ಆಸೆಯಾಗಿತ್ತು. ಹಾಗಾಗಿ ಹಣ ಕೂಡಿಡುತ್ತಿದ್ದರು. ಒಂದು ದಿನ ಕೂಡಿಟ್ಟ ಹಣದಿಂದ ಒಂದು ಮೊಬೈಲ್ ಖರೀದಿ ಮಾಡಿದರು. ಅದು ಅವರಿಬ್ಬರಿಗೆ ಬಹಳ ಸಂತೋಷ ನೀಡಿತು. ಬಿಡುವಿನಲ್ಲಿ ಅಣ್ಣ ಮತ್ತು ತಂಗಿ ಕುಳಿತುಕೊಂಡು ತಮಾಷೆಯ ವಿಡಿಯೋಗಳನ್ನು ಮೊಬೈಲ್ ನಲ್ಲಿ ನೋಡುತ್ತಿದ್ದರು. ಅದೊಂದು ದಿನ ಈ ಹುಡುಗನನ್ನು ಬದಲಾಯಿಸಿತು.
ಒಂದು ದಿನ ಯುವರಾಜ್ ಟೈಗರ್ ಷಾ ಅವರ ಹಾಡುಗಳನ್ನು ಮತ್ತು ಡ್ಯಾನ್ಸ್ ಗಳನ್ನು ನೋಡಿದನು. ಅವರ ಡ್ಯಾನ್ಸ್ ಸ್ಟೈಲ್ ಯುವರಾಜ್ ಗೆ ತುಂಬಾ ಇಷ್ಟವಾಯಿತು. ನಾನು ಹಾಗೇ ಡ್ಯಾನ್ಸ್ ಮಾಡಬೇಕು ಎಂದುಕೊಂಡು ಮನೆಯಲ್ಲಿ ಸ್ಟೆಪ್ಸ್ ಕಲಿಯಲು ಶುರು ಮಾಡಿದನು. 6ತಿಂಗಳುಗಳ ಕಾಲ ಸತತವಾಗಿ ಪ್ರಾಕ್ಟೀಸ್ ಮಾಡಿ ಲಯಗಳನ್ನು ಕಲಿತನು. ಹಾಗೆಯೇ ಎಷ್ಟೋ ಜನ ನೋಡಿ ನಕ್ಕರೂ ಇವನ ತಂಗಿ ಮಾತ್ರ ಸಪೋರ್ಟ್ ನೀಡುತ್ತಿದ್ದಳು. ಒಂದು ದಿನ ತನ್ನ ಡ್ಯಾನ್ಸ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದನು. ಜನ ಇವನನ್ನು ಬಾಬಾ ಜ್ಯಾಕ್ಸನ್ ಎಂದು ಕರೆಯಲು ಶುರುಮಾಡಿದರು.
ಲಾಕ್ ಡೌನ್ ಸಮಯದಲ್ಲಿ ಫ್ಲಿಪ್ಕಾರ್ಟ್ ಕಂಪನಿ ಸ್ಟೇ-ಹೋಮ್ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದರು ಪ್ರತಿವಾರ 10ಲಕ್ಷ ಮತ್ತು ವಿಜೇತರಾದವರಿಗೆ 1ಕೋಟಿ ಬಹುಮಾನ ಘೋಷಿಸಿತ್ತು. ಇದರಲ್ಲಿ ಯುವರಾಜ್ ಭಾಗವಹಿಸಿ ವಿಜೇತರಾದನು. ಹಾಗೆಯೇ 1ಕೋಟಿ ಬಹುಮಾನವನ್ನು ಪಡೆದನು. ಇವನ ಡ್ಯಾನ್ಸ್ ಗೆ ಅಮಿತಾಬ್ ಬಚ್ಚನ್ ಮತ್ತು ರುತಿಕ್ ರೋಷನ್ ಕೂಡ ಫಿದಾ ಆಗಿದ್ದಾರೆ.