ರೈತ ಬೆಳೆದಂತ ಬೆಳೆಗೆ ತಾನು ಬೆಲೆ ಹಾಕಿದಾಗಿನಿಂದ ಕಟಾವು ಮಾಡೋವವರೆಗೆ ಹೆಚ್ಚು ಕಷ್ಟ ಪಟ್ಟು ಬೆವರು ಸುರಿಸಿ ಉತ್ತಮ ಅಧಾಯವನ್ನು ಪಡೆಯಲು ಶ್ರಮಿಸುತ್ತಿರುತ್ತಾನೆ ಆದ್ರೆ ಮಲೆನಾಡಿನಲ್ಲಿ ಫಸಲುಗಳನ್ನು ಹಾಲು ಮಾಡಲು ಕೋತಿಗಳ ದಿಂಡೇ ಬರುತ್ತದೆ, ಹೌದು ಕೋತಿಗಳು ಆಹಾರ ಹುಡುಕೊಂಡು ಹಿಂಡುಗಟ್ಟಲೆ ಹೊಲ ಗದ್ದೆಗಳಲ್ಲಿ ಬೆಳೆಯನ್ನು ನಾಶ ಮಾಡುತ್ತವೆ ಇದನ್ನು ನಿಯಂತ್ರಿಸಲು ರೈತರು ಕಷ್ಟ ಪಡಬೇಕಾಗುತ್ತದೆ ಕೆಲವರಿಗಂತೂ ಸಾಕಾಗಿರುತ್ತೆ. ಇಂತಹದ್ದೇ ಕಷ್ಟ ಅನುಭವಿಸಿದ ರೈತನೊಬ್ಬ ಒಂದು ಉತ್ತಮ ಉಪಾಯವನ್ನು ಮಾಡಿದ್ದಾನೆ ಅದು ಎಂಬುದರ ಬಗ್ಗೆ ಏನು ಲೇಖನದ ಮೂಲಕ ತಿಳಿದುಕೊಳ್ಳೋಣ.
ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿ ರೈತರ ಹೆಸರು ಶ್ರೀಕಾಂತ. ಹೇಳಿಕೇಳಿ ಇದು ಮಲೆನಾಡು ಇಲ್ಲಿ ಕೋತಿಗಳ ಹಾವಳಿ ಹೇಳತೀರದು. ಇನ್ನೇನು ಫಸಲು ಬಂದು ಕಟಾವ್ ಮಾಡಬೇಕು ಎನ್ನುವ ಸಮಯಕ್ಕೆ ಕಾಫಿ ತೋಟ ಅಡಿಕೆ ತೋಟ ಹಾಗೂ ಇನ್ನಿತರ ಬೆಳೆಗಳನ್ನೆಲ್ಲ ಕಂಡ ಅವುಗಳ ಮೇಲೆ ದಾಳಿ ಮಾಡುವ ಕೋತಿಗಳ ಗುಂಪು ಎಲ್ಲಾ ಬೆಳೆಗಳನ್ನು ನಾಶ ಪಡಿಸುತ್ತವೆ. ಇವುಗಳನ್ನು ನಿಯಂತ್ರಿಸುವುದು ಅಸಾಧ್ಯದ ಮಾತಾಗಿತ್ತು ಕೋತಿಗಳು ದಾಳಿಯನ್ನು ಹೇಗೆ ನಿಯಂತ್ರಿಸುವುದು ಎಂಬುದರ ಬಗ್ಗೆ ಯೋಚಿಸುತ್ತಿದ್ದಾಗ ಶ್ರೀಕಾಂತ್ ಅವರಿಗೆ ಭಟ್ಕಳದ ರೈತನೊಬ್ಬನು ಮಾಡಿದ ಉಪಾಯ ತಿಳಿಯಿತು.
ಭಟ್ಕಳದ ರೈತನೊಬ್ಬನು ಕೋತಿಗಳ ದಾಳಿಯಿಂದ ತಾನು ಬೆಳೆದ ಬೆಳೆಗಳನ್ನು ರಕ್ಷಿಸಲು ಒಂದು ದೊಡ್ಡ ಹುಲಿಯ ಗೊಂಬೆಯನ್ನು ತಂದು ತಮ್ಮ ತೋಟದ ಬಳಿ ಇಟ್ಟಿದ್ದರು ಅದನ್ನು ನಿಜವಾದ ಹುಲಿ ಎಂದೇ ಭಾವಿಸಿದಂತಹ ಕೋತಿಗಳು ಅವರ ತೋಟದ ಕಡೆ ಬರುತ್ತಿರಲಿಲ್ಲ ಅದರಂತೆ ಶ್ರೀಕಾಂತ್ ಅವರು ಸಹ ಗೋವಾದಿಂದ ಒಂದು ಹುಲಿಯ ಗೊಂಬೆಯನ್ನು ತರಸಿ ತೋಟದ ಬಳಿ ಇಟ್ಟಿದ್ದರು. ಉಪಾಯ ಸ್ವಲ್ಪ ದಿನ ಏನು ಕೆಲಸ ಮಾಡಿತ್ತು. ದಿನಕಳೆದಂತೆ ಹುಲಿ ಗೊಂಬೆಯ ಬಣ್ಣ ಸ್ವಲ್ಪ ಸ್ವಲ್ಪ ಮಾಸ ತೊಡಗಿತ್ತು. ಕೋತಿಗಳು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿ ಮತ್ತೆ ತೋಟದಲ್ಲಿ ದಾಳಿ ಮಾಡಲು ಆರಂಭಿಸಿದವು. ಇದರಿಂದ ಮತ್ತೆ ಆಲೋಚನೆಗೆ ಬಿದ್ದಂತಾ ಶ್ರೀಕಾಂತ್ ಅವರಿಗೆ ಇನ್ನೊಂದು ಉತ್ತಮ ಉಪಾಯ ಹೊಳೆಯಿತು. ಅದರ ಪ್ರಕಾರ ಎರಡೇ ಕಲರ್ ತೆಗೆದುಕೊಂಡು ತಮ್ಮ ನಾಯಿಗಳಿಗೆ ಹುಲಿಯ ತರ ಪೇಂಟ್ ಮಾಡಿದರು. ಆ ಬಣ್ಣದಿಂದಾಗಿ ನಾಯಿ ಪಕ್ಕಾ ಹುಲಿಯ ತರಹವೇ ಕಾಣಿಸುತ್ತಿತ್ತು.
ಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ನಾಯಿಯನ್ನು ಕರೆದುಕೊಂಡು ತೋಟದ ಸುತ್ತಲೂ ತಿರುಗಾಡುತ್ತಿದ್ದರು. ನಿಜವಾದ ಹುಲಿ ಬಂದೇಬಿಟ್ಟಿದೆ ನಮ್ಮ ಪ್ರಾಣವನ್ನು ತೆಗೆಯುವುದು ಗ್ಯಾರೆಂಟಿ ಎಂದು ಭಾವಿಸಿ ಕೋತಿಗಳು ಶ್ರೀಕಾಂತ್ ಅವರ ತೋಟದ ಕಡೆ ಹೋಗುವುದು ಬೇಡ ಎಂದು ಅವರ ತೋಟದ ಕಡೆ ಬರುತ್ತಲೇ ಇಲ್ಲ. ಕೊನೆಗೂ ಶ್ರೀಕಾಂತ್ ಅವರ ಉಪಾಯ ಫಲಿಸಿತು ಅವರ ಉಪಾಯವನ್ನು ನೋಡಿ ಸುತ್ತಮುತ್ತಲು ಇರುವಂತಹ ಜನರು ಹಾಗೂ ರೈತರು ಮೂಕವಿಸ್ಮಿತರಾಗಿ ತಾವು ಸಹ ಸಹಾಯವನ್ನು ಮಾಡಿ ಕೋತಿಗಳ ಹಾವಳಿ ಇಂದ ಬಚಾವಾಗಿದ್ದಾರೆ.