ತುಂಬೆ ಗಿಡವನ್ನು ನಾವು ಎಲ್ಲೆಂದರಲ್ಲಿ ಕಾಣುತ್ತೇವೆ. ನೆಲದಿಂದ ಕೇವಲ ಒಂದೆರಡು ಅಡಿ ಎತ್ತರ ಇರುವ ಈ ಗಿಡ ಹೂವು ಬಿಟ್ಟಾಗ ಮಾತ್ರ ಎಲ್ಲರ ಗಮನ ಸೆಳೆಯುವುದು ನಿಜ.ಈ ಹೂವು ಶಿವನಿಗೆ ಬಹಳ ಇಷ್ಟ ಅನ್ನುವ ಕಾರಣಕ್ಕಾಗಿ ಶಿವರಾತ್ರಿಯ ಸಮಯದಲ್ಲಿ ಬಹಳಷ್ಟು ಜನ ಈ ಹೂವನ್ನು ಹುಡುಕುತ್ತಾರೆ. ನಾವು ತೀರಾ ನಿರ್ಲಕ್ಷ್ಯ ಮಾಡುವ ಈ ಪುಟ್ಟ ಗಿಡ ತನ್ನೊಡಲಲ್ಲಿ ಅಗಾಧ ಪ್ರಮಾಣದಲ್ಲಿ ಔಷಧಿಗಳ ಭಂಡಾರವನ್ನೇ ಹೊತ್ತಿದೆ. ಸಮುದ್ರ ಮಂಥನ ಸಮಯದಲ್ಲಿ ಕಾರ್ಕೋಟಕ ವಿಷ ಬಂದಾಗ ಅದನ್ನು ಯಾರೂ ಸ್ವೀಕರಿಸದೆ ಇದ್ದಾಗ ದೇವಾನುದೇವತೆಗಳ ಒಡೆಯ ಶಿವನು ಆ ಕಾರ್ಕೋಟಕ ವಿಷವನ್ನು ಸೇವಿಸುತ್ತಾರೆ. ಶಿವ ವಿಷ ಸೇವಿಸಿದಾಗ ಅದು ಪೂರ್ತಿಯಾಗಿ ದೇಹದಲ್ಲಿ ಸೇರದಂತೇ ಪಾರ್ವತಿ ದೇವಿ ತಡೆದರೂ ಸಹ ವಿಷ ತನ್ನ ಪ್ರಭಾವ ಬೀರುತ್ತಲೇ ಇತ್ತು. ಆಗ ಈ ತುಂಬೆ ಗಿಡದ ಹೂವನ್ನು ಬಳಕೆ ಮಾಡಲಾಗಿತ್ತು. ರುದ್ರ ಪುಷ್ಪ ಎಂದೂ ಪ್ರತೀತಿಯಲ್ಲಿ ಇರುವ ತುಂಬೆ ಗಿಡ ಶಿವನಿಗೆ ಈ ಕಾರಣಕ್ಕಾಗಿ ಬಹಳ ಪ್ರೀತಿ. ತುಂಬೆ ಗಿಡ ಹಾಗೂ ಇದರ ಹೂವಿಗೆ ನಾಟಿ ಔಷಧ ಹಾಗೂ ಆಯುರ್ವೇದದಲ್ಲಿ ಬಹಳಷ್ಟು ಬೇಡಿಕೆ ಇದೆ. ಇಷ್ಟೊಂದು ಪ್ರಚಲಿತದಲ್ಲಿರುವ ತುಂಬೆ ಗಿಡದ ಉಪಯೋಗಗಳ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ತುಂಬೆಗಿಡ ನಮ್ಮ ದೇಹದ ನೋವನ್ನು ನಿವಾರಿಸುವಲ್ಲಿ ಎಷ್ಟು ಉಪಯೋಗಕಾರಿ ಎಂದರೆ ನಮ್ಮ ದೇಹದಲ್ಲಿ ಯಾವುದೇ ಭಾಗದಲ್ಲಿ ನೋವಿದ್ದರೂ ಸಹ ತುಂಬೆ ಗಿಡವನ್ನು ಹೂವು ಎಲೆ ಕಾಂಡದ ಸಮೇತ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಆ ನೀರಿನಿಂದ ಬಟ್ಟೆಯಲ್ಲಿ ಶಾಖ ಕೊಟ್ಟುಕೊಂಡರೆ ಎಂತಹ ನೋವಿದ್ದರೂ ಸಹ ಮಾಯವಾಗುವುದರಲ್ಲಿ ಅನುಮಾನವಿಲ್ಲ.
ಚರ್ಮ ರೋಗಗಳು, ತುರಿಕೆ, ಗಜಕರ್ಣ, ಸೋರಿಯಾಸಿಸ್ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ತುಂಬೆ ಗಿಡದ ರಸವನ್ನು ದೇಹಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ಕಡಿಮೆ ಆಗುತ್ತವೆ. ಇಲ್ಲವಾದಲ್ಲಿ ತುಂಬೆ ಗಿಡದ ಎಲೆಗಳು ಹಾಗೂ ಅದರ ಜೊತೆಗೆ ಬೇವಿನ ಎಲೆಗಳನ್ನು ನೀರಿಗೆ ಬೆರೆಸಿ ನೀರನ್ನು ಚೆನ್ನಾಗಿ ಕಾಯಿಸಿ ಅದರಿಂದ ಸ್ನಾನ ಮಾಡಿದರೆ ಉತ್ತಮ.
ಒಂದು ಹಿಡಿ ತುಂಬೆಹುವನ್ನು ತೆಗೆದುಕೊಂಡು ಸ್ವಚ್ಛ ಮಾಡಿ ತೊಳೆದು ಅದರ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಶೀತ, ಕಫ ಕಡಿಮೆಯಾಗಿ ಶ್ವಾಸಕೋಶದ ಹಾಗೂ ಉಸಿರಾಟದ ಸಮಸ್ಯೆ ಇದ್ದರೆ ಗುಣವಾಗುವುದು.
ಇನ್ನು ಅಜೀರ್ಣದ ಸಮಸ್ಯೆಯಿಂದ ಬಳುತ್ತಿದ್ದರೆ ಅವರಿಗೆ ಸಹ ತುಂಬೆ ಹೂವನ್ನು ಬಳಸುವುದು ಉತ್ತಮ. ತುಂಬೆ ಹುವನ್ನು ನೀರಿಗೆ ಹಾಕಿ ಕುದಿಸಿ ಸ್ವಲ್ಪ ಉಪ್ಪು ಬೆರೆಸಿ ಕುಡಿಯುವುದರಿಂದ ಅಜೀರ್ಣದ ಸಮಸ್ಯೆ ನಿವಾರಣೆ ಆಗುವುದು.
ಉರಿಗಣ್ಣಿನ ಸಮಸ್ಯೆ, ಕಣ್ಣು ಯಾವಾಗಲೂ ಕೆಂಪಾಗಿ ಇದ್ದರೆ, ಕಣ್ಣಿನ ಸುತ್ತಲೂ ಕಪ್ಪಾಗಿದ್ದರೆ ತುಂಬೆ ಗಿಡದ ರಸ ತೆಗೆದು ಅದಕ್ಕೆ ತಣ್ಣನೆಯ ನೀರು ಅಥವಾ ಹಾಲು ಬೆರೆಸಿ ಮುಖ ತೊಳೆಯುವುದರಿಂದ ಈ ಎಲ್ಲಾ ಸಮಸ್ಯೆಗಳಿಂದ ದೂರವಿರಬಹುದು. ಇದರಿಂದ ಕೆಲವೇ ದಿನಗಳಲ್ಲಿ ಕಣ್ಣಿನ ಸುತ್ತಲೂ ಆಗಿರುವ ಕಪ್ಪು ಕಲೆಗಳು ಮಾಯವಾಗುತ್ತವೆ ಹಾಗೂ ಮುಖದ ಕಾಂತಿ ಕೂಡಾ ಹೆಚ್ಚುತ್ತದೆ ಅಷ್ಟೇ ಅಲ್ಲದೆ ಕಣ್ಣಿನ ಸಮಸ್ಯೆ ಕೂಡಾ ದೂರವಾಗುವುದು.
ಸ್ತ್ರೀಯರಿಗೆ ಋತುಚಕ್ರದ ಸಮಯದಲ್ಲಿ ಬಹಳಷ್ಟು ರಕ್ತಸ್ರಾವ ಹಾಗೂ ಹೊಟ್ಟೆನೋವು ಇದ್ದರೆ ತುಂಬೆ ಎಲೆಯ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ನಿಂಬೆರಸ ಹಾಗೂ ಎಳ್ಳೆಣ್ಣೆಯನ್ನು ಸೇರಿಸಿ ಕುಡಿದರೆ ಅತಿಯಾದ ರಕ್ತಸ್ರಾವ ಕಡಿಮೆ ಆಗುವುದು.
ಎಷ್ಟೇ ನೀರು ಕುಡಿದರೂ ಬಾಯಾರಿಕೆ ಕಡಿಮೆ ಆಗದೆ ಇದ್ದರೆ ತುಂಬೆ ಎಲೆಯ ಕಶಾಯ ಮಾಡಿ ಕುಡಿಯಬೇಕು. ತುಂಬೆ ಗಿಡವನ್ನು ನೆರಳಲ್ಲಿ ಒಣಗಿಸಿಕೊಂಡು ಅದನ್ನು ಪುಡಿ ಮಾಡೋಟ್ಟುಕೊಂಡು ಆಗಾಗ ನೀರಿಗೆ ಬೆರೆಸಿ ಕುಡಿಯುವುದರಿಂದ ರಕ್ತ ಶುದ್ಧಿ ಆಗುವುದು.
ತುಂಬೆ ಎಲೆಯ ರಸಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ ಹಾಗೂ ಸೈನ್ದವ ಲವಣವನ್ನು ಸೇರಿಸಿ ಕಷಾಯ ಮಾಡಿ ಕುಡಿಯುವಿದರಿಂದ ಆಗಾಗ ಕಾಡುವ ಜ್ವರ ನಿವಾರಣೆ ಆಗುವುದು. ಹಾವು ಕಚ್ಚಿದಾಗ ತುಂಬೆ ಎಲೆ ಹಾಗೂ ಹೂವುಗಳನ್ನು ಸ್ವಲ್ಪ ಜಜ್ಜಿ ಹಚ್ಚಿ, ಕಟ್ಟುವುದರಿಂದ ವಿಷ ದೇಹಕ್ಕೆ ಸೇರದಂತೆ ತಡೆಯುತ್ತದೆ. ಮನೆಯಲ್ಲಿ ಕ್ರಿಮಿ ಕೀಟಗಳ ಕಾಟ ಹೆಚ್ಚಿದ್ದರೆ ತುಂಬೆ ಗಿಡದಿಂದ ಹೊಗೆ ಹಾಕಿದರೆ ಹೋಗುತ್ತವೆ.
ಹೆಚ್ಚು ನೀರು ಬಯಸದ ತುಂಬೆ ಗುಡವನ್ನು ನಾವು ನಮ್ಮ ನಮ್ಮ ಮನೆಗಳಲ್ಲಿ ಟೆರೇಸ್ ಮೇಲೆ ಸಹ ಬೆಳೆಸಬಹುದು. ಇದರಿಂದಾಗಿ ನಿಮ್ಮ್ ಗಾರ್ಡನ್ ನಲ್ಲಿರುವ ಬೇರೆ ಗಿಡಗಳನ್ನು ಸಹ ಕೀಟ ಬಾಧೆಯಿಂದ ರಕ್ಷಿಸುತ್ತದೆ. ತುಂಬೆಯಲ್ಲಿ ಹಲವಾರು ಬಣ್ಣಗಳು ಇದ್ದು ಇವುಗಳಲ್ಲಿ ಶ್ವೇತ ತುಂಬೆ ಅಥವಾ ಬಿಳಿ ತುಂಬೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು ಅತ್ಯಂತ ಶ್ರೇಷ್ಠವಾಗಿದೆ.