ಆಹಾರದಿಂದ ಆರೋಗ್ಯ ಲಭ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಆಯುರ್ವೇದ ಶಾಸ್ತ್ರ ಹಾಗೂ ಭಾರತೀಯ ವೈದ್ಯ ಶಾಸ್ತ್ರದಲ್ಲಿ ಬೆಳ್ಳುಳ್ಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದಕ್ಕೆ ಕಾರಣ ಬೆಳ್ಳುಳ್ಳಿಯಲ್ಲಿ ಇರುವಂತಹ ಪ್ರಮುಖವಾದ ಔಷಧೀಯ ಗುಣಗಳು ಎನ್ನಬಹುದು. ವೈಜ್ಞಾನಿಕವಾಗಿ ನೋಡಿದಾಗ ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಪೋಷಕಾಂಶ ಹಾಗೂ ಆಂಟಿ ಆಕ್ಸಿಡೆಂಟ್ ಇವು ನಮ್ಮ ರಕ್ತ ನಾಳಗಳನ್ನು ಶುದ್ಧ ಮಾಡಲು ಸಹಾಯ ಮಾಡುತ್ತದೆ. LDL ಎಂಬಕೆಟ್ಟ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ಹಾಗೂ HDL ಎಂಬ ಒಳ್ಳೆಯ ಹಾಗೂ ದೇಹಕ್ಕೆ ಅವಶ್ಯವಿರುವ ಕೊಬ್ಬನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೂ ಬೆಳ್ಳುಳ್ಳಿ ಒಳ್ಳೆಯದು. ಬಿಪಿ ಹತೋಟಿ ಮಾಡುತ್ತದೆ. ಅಸ್ತಮಾ, ಉಸಿರಾಟದ ಸಮಸ್ಯೆ ದೂರ ಮಾಡುತ್ತದೆ ಶೀತ, ನೆಗಡಿ, ಅಲರ್ಜಿಯನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿಯ ಕುರಿತಾಗಿ ಸಾವಿರಾರು ವೈಜ್ಞಾನಿಕ ಸಂಶೋಧನೆಗಳು ನಡೆದಿವೆ. ವೈರಸ್ ಗಳ ವಿರುದ್ಧ ಹೋರಾಡುವ ಶಕ್ತಿ ಬೆಳ್ಳುಳ್ಳಿಗೆ ಇದೆ. ಈ ಒಂದು ಔಷಧವನ್ನು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಬೆಳ್ಳುಳ್ಳಿಯನ್ನ ಸ್ವಲ್ಪ ತೆಂಗಿನ ಎಣ್ಣೆಯಲ್ಲಿ ಜಜ್ಜಿ ಅದಕ್ಕೆ ಸ್ವಲ್ಪ ಅಮೃತ ಬಳ್ಳಿಯ ಪುಡಿಯನ್ನ ಹಾಕಿ ಹಾಗೂ ಕಾಲಮೇಘದ ಪುಡಿಯನ್ನು ಸೇರಿಸಿ ಉಂಡೆ ರೀತಿಯಾಗಿ ಮಾಡಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಬೆಳ್ಳುಳ್ಳಿಯ ವೈಜ್ಞಾನಿಕ ಸಂಶೋಧನೆಯ ಕುರಿತಾಗಿ ನೋಡಿವುದಾದರೆ ಇಲ್ಲಿ 2 ರೀತಿಯ ಸಂಶೋಧನೆಗಳನ್ನು ನಾವು ಗಮನಿಸಬಹುದು. Benifits of garlic Oxford academic The American Journal of Clinical Nutrition ಇವರು ತಿಳಿಸುವಂತೆ effect of garlic on serum lipids coagulability and fibrinolytic activitie of blood ಅಂದರೆ ಬೆಳ್ಳುಳ್ಳಿ ನಮ್ಮ ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಜ್ಞಾನಿಗಳೇ ಈ ಹೇಳಿಕೆಯನ್ನು ನೀಡಿದ್ದು ಇದರ ಕುರಿತಾಗಿ ಇವರು ತೀರ್ಮಾನಕ್ಕೆ ಬಂದಿರುವುದಾದರೂ ಹೇಗೆ ಅಂತ ನೋಡುವುದಾದರೆ, ಬೆಳ್ಳುಳ್ಳಿಯನ್ನು ನಮ್ಮ ಆಹಾರದಲ್ಲಿ ಸೇವಿಸುವುದರಿಂದ ಹಾರ್ಟ್ ಅಟ್ಯಾಕ್ ಗೆ ಕಾರಣ ಆಗುವಂತಹ ರಕ್ತ ನಾಳದಲ್ಲಿ ಉಂಟಾಗುವ ಬ್ಲಾಕ್ ಗಳನ್ನ ಕರಗಿಸೋಕೆ ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಎಂದು ಈ ರೀತಿಯಾಗಿ ಒಂದು ಸಂಶೋಧನೆಯಲ್ಲಿ ಕಂಡುಬಂದರೆ ಇನ್ನು ಎರಡನೆಯ ಸಂಶೋಧನೆಯಲ್ಲೂ ಬೆಳ್ಳುಳ್ಳಿಯ ಕುರಿತಾಗಿ ಏನು ಹೇಳಿದ್ದಾರೆ ಅಂತ ನೋಡೋಣ.

Journal of Infectious Diseases and Treatment ಇವರು ಹೇಳುವಂತೆ ಆಂಟಿ ಬ್ಯಾಕ್ಟೀರಿಯಲ್ ಎಫ್ಫೆಕ್ಟ್ ಆಫ್ ಗಾರ್ಲಿಕ್… ಇವರು ಆಸ್ಪತ್ರೆಗೆ ಭೇಟಿ ನೀಡುವ ಜನರನ್ನ ಸಂಶೋಧನೆಗೆ ಒಳಪಡಿಸಿ ಬೇರೆ ಬೇರೆ ರೀತಿಯ ಬ್ಯಾಕ್ಟೀರಿಯ ಇನ್ಫೆಕ್ಷನ್ ಇರುವವರಿಗೆ ಬೆಳ್ಳುಳ್ಳಿಯನ್ನ ನೀಡಿದರು. ಇದರಿಂದ ಅವರಿಗೆ ಇನ್ಫೆಕ್ಷನ್ ಸಹ ಕಡಿಮೆ ಆಗಿ ಗುಣಮುಖರಾಗಿ ವಿಜ್ಞಾನಿಗಳೂ ಸಹ ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳು ಇವೆ ಅನ್ನೋದನ್ನ ಒಪ್ಪಿದ್ದಾರೆ. ವಿಜ್ಞಾನಿಗಳ ಸಂಶೋಧನೆಯಿಂದಲೇ ಬೆಳ್ಳುಳ್ಳಿ ಸೂಕ್ಷ್ಮಾಣು ಜೀವಿಗಳನ್ನ ನಾಶಪಡಿಸಬಲ್ಲದು ಎಂದು ಒಪ್ಪಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ಯಾವುದೇ ಭಯವಿಲ್ಲದೆ ಬೆಳ್ಳುಳ್ಳಿಯನ್ನ ಉಪಯೋಗಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು.

By

Leave a Reply

Your email address will not be published. Required fields are marked *