ಕೆಲವು ದಿನಗಳ ಹಿಂದೆ ವೇಲ್ ವಾಮಿಟ್ ಅಥವಾ ತಿಮಿಂಗಲದ ವಾಂತಿಯನ್ನು ಅಕ್ರಮವಾಗಿ ಸಂಗ್ರಹಿಸಿ ವಿದೇಶಿಯರಿಗೆ ಮಾರಾಟ ಮಾಡುತ್ತಿರುವವರನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈ ಸುದ್ದಿ ದೇಶದಾದ್ಯಂತ ಸಖತ್ ವೈರಲ್ ಆಗಿತ್ತು. ಹಾಗಾದರೆ ತಿಮಿಂಗಿಲದ ಒಮಿಟ್ ಗೆ ಏಕೆ ಅಷ್ಟು ಮಹತ್ವವಿದೆ ಹಾಗೂ ಅದರ ಇತಿಹಾಸ ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯೋಣ.

ಮುಂಬೈ, ಚೆನ್ನೈ ಹೀಗೆ ದೇಶದಾದ್ಯಂತ ಅನೇಕ ನಗರಗಳಲ್ಲಿ ವೇಲ್ ಒಮಿಟ್ ಅನ್ನು ಅಕ್ರಮವಾಗಿ ಸಾಗಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಸುದ್ದಿಯನ್ನು ನಾವು ಆಗಾಗ ಕೇಳುತ್ತೇವೆ. ತಿಮಿಂಗಿಲದ ವಾಂತಿಯನ್ನು ಅಂಬರಗ್ರೀಸ್ ಎಂತಲೂ ಕರೆಯುತ್ತಾರೆ. 1ಕೆಜಿ ಅಂಬರಗ್ರೀಸ್ ಗೆ ಕಾಳಸಂತೆಯಲ್ಲಿ ಒಂದು ಕೋಟಿ ರೂಪಾಯಿ ಬೆಲೆ ಇದೆ. ತಿಮಿಂಗಿಲಗಳಲ್ಲಿ ಸ್ಪರ್ಮ್ ವೇಲ್ ಪ್ರಭೇದದ ಸಸ್ತನಿಗಳು ಮಾತ್ರ ಅಂಬರಗ್ರೀಸ್ ಉತ್ಪತ್ತಿಮಾಡುತ್ತವೆ. ಅಂಬರಗ್ರೀಸ್ ಇದು ಗೋಲ್ಡನ್ ಬ್ರೌನ್ ಅಥವಾ ಬೂದು, ಕಪ್ಪು ಬಣ್ಣದಲ್ಲಿರುವ ಸ್ಪರ್ಮ್ ವೇಲ್ ಗಳಲ್ಲಿ ಮಾತ್ರ ಕಂಡುಬರುವ ಒಂದು ಪದಾರ್ಥ. ತಿಮಿಂಗಿಲ ಮಾಡುವ ಎಲ್ಲಾ ವಾಂತಿಯು ಅಂಬರಗ್ರೀಸ್ ಆಗಿರುವುದಿಲ್ಲ. ಸ್ಪರ್ಮ್ ವೇಲ್ ತಿಮಿಂಗಿಲ ಮಲದ ರೂಪದಲ್ಲಿಯೂ ಅಂಬರಗ್ರೀಸ್ ಹೊರಹಾಕುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಅಂಬರಗ್ರೀಸ್ ನ ಸಾಂದ್ರತೆ ನೀರಿಗಿಂತ ಕಡಿಮೆ ಹಾಗಾಗಿ ಇದು ನೀರಿನಲ್ಲಿ ತೇಲುತ್ತದೆ. ಆಲ್ಕೋಹಾಲ್, ಕ್ಲೋರೋಫಾವ್, ಈಥರ್ ನಂತಹ ದ್ರವಗಳಲ್ಲಿ ಅಂಬರಗ್ರೀಸ್ ಕರಗುತ್ತದೆ. ಅಂಬರಗ್ರೀಸ್ ಮೇಣದಂಥ ಪದಾರ್ಥ ಆಗಿರುವುದರಿಂದ ಬೆಂಕಿ ತಾಗಿದರೆ ಉರಿದು ಹೋಗುತ್ತದೆ. ಸ್ಪರ್ಮ್ ವೇಲ್ ಗಳು ಕಾಟ್ಲಾ ಮತ್ತು ಸ್ಕ್ವಿಟ್ ಫಿಶ್ ಸಮುದ್ರಚರಗಳನ್ನು ದೊಡ್ಡ ಪ್ರಮಾಣದಲ್ಲಿ ಭೇಟಿಯಾಡಿ ತಿನ್ನುತ್ತವೆ, ಕೆಲವೊಮ್ಮೆ ಮೀನಿನ ಗಟ್ಟಿಯಾದ ಎಲುಬುಗಳು ಸಂಪೂರ್ಣವಾಗಿ ಜೀರ್ಣ ಆಗುವುದಿಲ್ಲ.

ಜೀರ್ಣವಾಗದೆ ಅದು ವರ್ಷಗಟ್ಟಲೆ ಹಾಗೆಯೆ ತಿಮಿಂಗಿಲದ ಜೀರ್ಣಾಂಗದಲ್ಲಿ ಉಳಿಯುತ್ತದೆ ಇದರಿಂದ ತಿಮಿಂಗಿಲಕ್ಕೆ ಒಂದು ರೀತಿಯ ಯಾತನೆ ಉಂಟಾಗಿ ವಾಂತಿ ಮಾಡಿಕೊಳ್ಳುತ್ತದೆ ಅಥವಾ ಅದನ್ನು ಮಲದ ರೂಪದಲ್ಲಿ ಹೊರಹಾಕುತ್ತದೆ. ಮೀನಿನ ಮೂಳೆಗಳು ವರ್ಷಗಟ್ಟಲೆ ತಿಮಿಂಗಲದ ಹೊಟ್ಟೆಯಲ್ಲಿ ಸಂಗ್ರಹವಾಗಿದ್ದಾಗ ಅಲ್ಲಿ ಉತ್ಪತ್ತಿಯಾಗುವ ಜೀರ್ಣ ರಸದಿಂದ ಹಲವು ರಾಸಾಯನಿಕ ಪ್ರಕ್ರಿಯೆಗೆ ಒಳಗಾಗುತ್ತದೆ ಕ್ರಮೇಣ ಅದು ಮೇಣದಂತೆ ಪರಿವರ್ತನೆಯಾಗುತ್ತದೆ ಆಗ ಅದು ಸುಗಂಧವನ್ನು ಪಡೆದುಕೊಳ್ಳುತ್ತದೆ.

ತಿಮಿಂಗಿಲ ಮಾಡಿದ ವಾಂತಿಯು ಮೊದಲು ಭಾರವಾಗಿರುತ್ತದೆ ನಂತರ ಸ್ಪರ್ಮ್ ವೇಲ್ ಸಮುದ್ರದಲ್ಲಿ ವಿಸರ್ಜಿಸಿದಾಗ ಹಲವು ರಾಸಾಯನಿಕ ಪ್ರಕ್ರಿಯೆಗೆ ಒಳಗಾಗಿ ನಂತರ ಗಟ್ಟಿಯಾಗಿ ನೀರಿನಲ್ಲಿ ತೇಲಲು ಪ್ರಾರಂಭಿಸುತ್ತದೆ ಆದ್ದರಿಂದ ಅಂಬರಗ್ರೀಸ್ ಅನ್ನು ತೇಲುವ ಚಿನ್ನ ಎಂತಲೂ ಕರೆಯುತ್ತಾರೆ. ಒಂದು ವೇಳೆ ತಿಮಿಂಗಿಲ ಮೀನನ್ನು ತಿಂದ ಒಂದೆರಡು ವಾರಗಳಲ್ಲಿ ಎಲುಬುಗಳನ್ನು ಹೊರಹಾಕಿದರೆ ಅದು ಅಂಬರಗ್ರೀಸ್ ಆಗಿರುವುದಿಲ್ಲ ವಾಸನೆಯಿಂದ ಕೂಡಿದ ವಾಂತಿ ಆಗಿರುತ್ತದೆ.

ಅಂಬರಗ್ರೀಸ್ ನಲ್ಲಿ ಟೈಟರ್ ಫೀನ್, ಆಲ್ಕೋಹಾಲ್ ಎಂಬ ಕೀ ಕಾಂಪೊನೆಂಟ್ ಇರುತ್ತದೆ ಇದನ್ನು ಅಂಬ್ರಿನ್ ಎಂತಲೂ ಕರೆಯುತ್ತಾರೆ ಇದಕ್ಕೆ ವಾಸನೆ ಇರುವುದಿಲ್ಲ ಇದರಿಂದ ಸುವಾಸನೆ ಹೊಂದಿರುವ ಅಂಬರಗ್ರೀಸ್ ಉತ್ಪತ್ತಿಯಾಗುತ್ತದೆ ಎಂಬುದು ವಿಪರ್ಯಾಸ. ಅಂಬರಗ್ರೀಸ್ ಅನ್ನು ಬಿಸಿ ಎಥೆನಾಲ್ ನಲ್ಲಿ ಬೆರೆಸಿ ನಂತರ ಸೋಸಿ ಬಿಳಿ ಕ್ರಿಸ್ಟಲ್ ರೂಪದ ಅಂಬರಗ್ರೀಸ್ ಅನ್ನು ಮೊದಲ ಬಾರಿಗೆ ಪ್ರತ್ಯೇಕಿಸಿದ ಕೀರ್ತಿ ಪರ್ಷಿಯನ್ ದೇಶದವರಿಗೆ ಸಲ್ಲುತ್ತದೆ. ಅಂಬರಗ್ರೀಸ್ ಬಳಕೆಯನ್ನು ಸಾವಿರಾರು ವರ್ಷಗಳಿಂದ ನೋಡಬಹುದು ಅಂದರೆ ಸಾವಿರಾರು ವರ್ಷಗಳ ಇತಿಹಾಸವಿದೆ.

ವೈನಿನ ಮಾದಕತೆಯನ್ನು ಹೆಚ್ಚಿಸಲು ಗ್ರೀಕರು ಅಂಬರಗ್ರೀಸ್ ಅನ್ನು ವೈನಿಗೆ ಸೇರಿಸುತ್ತಿದ್ದರು. ಪ್ಲೇಗ್ ಮಹಾಮಾರಿಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ ಆ ಸಮಯದಲ್ಲಿ ಅಂಬರಗ್ರೀಸ್ ಹಚ್ಚಿಕೊಂಡರೆ ಅಥವಾ ಉಂಡೆ ಮಾಡಿ ಹತ್ತಿರ ಇಟ್ಟುಕೊಂಡರೆ ಮಹಾಮಾರಿ ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆ ಇತ್ತು. ಕಾಫಿ, ಚಾಕ್ಲೆಟ್ ನಂತಹ ಪದಾರ್ಥಗಳಿಗೆ ಸುವಾಸನೆ ಭರಿಸಲು ಅದಕ್ಕೆ ಅಂಬರಗ್ರೀಸ್ ಅನ್ನು ಸೇರಿಸಲಾಗುತ್ತಿತ್ತು. ಮಧ್ಯ ಯುರೋಪಿಯನ್ನರು ತಲೆನೋವು, ತಂಡಿ, ಮೂರ್ಛೆ ರೋಗದಂತಹ ಖಾಯಿಲೆಗಳಿಗೆ ಔಷಧಿಯಾಗಿ ಅಂಬರಗ್ರೀಸ್ ಅನ್ನು ಬಳಸುತ್ತಿದ್ದರು.

ಇಟಲಿಯ ಭೂವಿಜ್ಞಾನಿಗಳಿಗೆ 2013ರಲ್ಲಿ ಸುಮಾರು 17 ವರೆ ಲಕ್ಷ ವರ್ಷಗಳಷ್ಟು ಹಳೆಯದಾದ ಅಂಬರಗ್ರೀಸ್ ನ ಪಳೆಯುಳಿಕೆಗಳು ಸಿಕ್ಕಿದೆ. ಪರ್ಫ್ಯೂಮ್ ಗಳಲ್ಲಿ ಅಂಬರಗ್ರೀಸ್ ಅನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಕಸ್ತೂರಿಯ ಪರಿಮಳವನ್ನು ನಾಚಿಸುವಂತಹ ಪರಿಮಳವನ್ನು ಹೊಂದಿರುವ ಅಂಬರಗ್ರೀಸ್ ಅನ್ನು ಪರ್ಫ್ಯೂಮ್ ಗಳಲ್ಲಿ ಬಳಸಲಾಗುತ್ತದೆ. ಪರ್ಫ್ಯೂಮ್ ತನ್ನ ತಾಜಾತನವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಅಂಬರಗ್ರೀಸ್ ಸಹಾಯಕಾರಿಯಾಗಿದೆ. ಅಂಬರಗ್ರೀಸ್ ಇದು ವಿರಳವಾಗಿ ಸಿಗುವ ನೈಸರ್ಗಿಕ ಸೃಷ್ಟಿ. ಒಂದು ತಿಮಿಂಗಿಲ 1ಕೆಜಿ ಇಂದ 10 ಕೆಜಿ ಯವರೆಗೆ ತೂಕವಿರುವ ಅಂಬರಗ್ರೀಸ್ ಅನ್ನು ವಾಂತಿ ಮಾಡಿಕೊಳ್ಳುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವಸ್ತುವಿನ ಬೇಡಿಕೆ ಪೂರೈಕೆಯಲ್ಲಾಗುವ ಅಗಾಧ ವ್ಯತ್ಯಾಸಗಳಿಂದಾಗಿ ಅದರ ಬೆಲೆ ಕೂಡ ವ್ಯತ್ಯಾಸವಾಗುತ್ತದೆ ಅದೆ ರೀತಿ ಅಂಬರ್ ಗ್ರೀಸ್ ನ ಬೆಲೆ ಕೋಟಿ ರೂಪಾಯಿಯಿದೆ. ಕೆಲವು ವರ್ಷಗಳ ಹಿಂದೆ ಹನ್ನೊಂದು ಲಕ್ಷ ಇದ್ದ ಸ್ಪರ್ಮ್ ವೇಲ್ ಗಳು ಈಗ 3 ಲಕ್ಷಕ್ಕೆ ಇಳಿದಿದೆ ಎಂಬುದು ಆಶ್ಚರ್ಯದ ಜೊತೆಗೆ ಆಘಾತವಾಗುತ್ತದೆ. ಅಂಬರಗ್ರೀಸ್ ಅನ್ನು ಪಡೆದುಕೊಂಡು ಮಾರಾಟಮಾಡಿ ಶ್ರೀಮಂತರಾಗುವ ದುರಾಸೆಯಿಂದ ಸಾಕಷ್ಟು ಸಂಖ್ಯೆಯ ಸ್ಪರ್ಮ್ ವೇಲ್ ಗಳನ್ನು ಬೇಟೆಯಾಡಿದರು.

ಇದರಿಂದ ಸ್ಪರ್ಮ್ ತಿಮಿಂಗಿಲಗಳು ಅಳಿವಿನಂಚಿನಲ್ಲಿವೆ ಇದು ಹೀಗೆ ಮುಂದುವರೆದರೆ ಜಲಚರಗಳ ವ್ಯವಸ್ಥೆಯಲ್ಲಿ ಭಾರಿ ಅಸಮತೋಲನ ಉಂಟಾಗುತ್ತದೆ ಎಂದು ಜೀವವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಪಂಚದ ಅನೇಕ ದೇಶಗಳು ಅಂಬರಗ್ರೀಸ್ ಸಂಗ್ರಹಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಿದೆ. ನಮ್ಮ ಭಾರತ ದೇಶದಲ್ಲಿಯೂ ಅಂಬರಗ್ರೀಸ್ ಮಾರಾಟವನ್ನು ವನ್ಯಜೀವಿ ಕಾಯ್ದೆಯಡಿ 1970 ರಿಂದ ನಿಷೇಧಿಸಲಾಗಿದೆ. ಸುಗಂಧದ್ರವ್ಯ ತಯಾರಿಕೆಯಲ್ಲಿ ಅಂಬರಗ್ರೀಸ್ ಗೆ ಹೆಚ್ಚಿನ ಮಹತ್ವ ಇರುವುದರಿಂದ ಪರ್ಫ್ಯೂಮ್ ತಯಾರಿಕಾ ದೇಶಗಳಲ್ಲಿ ಹೆಚ್ಚು ಹಣವನ್ನು ನೀಡಿ ಅಂಬರಗ್ರೀಸ್ ಅನ್ನು ಖರೀದಿ ಮಾಡಲಾಗುತ್ತಿದೆ. ಒಂದು ಜೀವಿಯ ಮಲ ಅಥವಾ ವಾಂತಿಗೆ ಇಷ್ಟೊಂದು ಬೇಡಿಕೆ ಇರುವುದು ನಿಜವಾಗಲೂ ಆಶ್ಚರ್ಯ ಮತ್ತು ಅದ್ಭುತವಾಗಿದೆ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!