Viral News: ಕೆಜಿಎಫ್ ಸಿನಿಮಾದಲ್ಲಿ ಬರುವ ಎಲ್ ಡೊರಾಡೊ ಇರುವುದು ಕೊಲಂಬಿಯಾದಲ್ಲಿ, ಪಾಪ್ ತಾರೆ ಶಕೀರಾ ಅವರು ಕೊಲಂಬಿಯಾ ದೇಶದವರು. ಹಾಗಾದರೆ ಕೊಲಂಬಿಯಾ ದೇಶದ ಬಗ್ಗೆ ಅನೇಕ ಇಂಟರೆಸ್ಟಿಂಗ್ ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ.
ಕೊಲಂಬಿಯಾ ದೇಶದ ಅಫಿಶಿಯಲ್ ಹೆಸರು ರಿಪಬ್ಲಿಕ್ ಆಫ್ ಕೊಲಂಬಿಯಾ. ಈ ದೇಶಕ್ಕೆ ಕೊಲಂಬಿಯಾ ಎಂಬ ಹೆಸರು ಬಂದಿದ್ದು ಕ್ರಿಸ್ಟೋಫರ್ ಕೊಲಂಬಸ್ ಅವರಿಂದ. ಈ ದೇಶದಲ್ಲಿ ಕೋಲಂಬಸ್ ಅವರ ಪ್ರತಿಮೆಯನ್ನು ಮೂಲೆ ಮೂಲೆಯಲ್ಲಿ ನೋಡಬಹುದು. ಈ ದೇಶದ ಜನಸಂಖ್ಯೆ ಕೇವಲ ಐದು ಕೋಟಿ. ಕೊಲಂಬಿಯಾ ದೇಶದ ಒಟ್ಟು ವಿಸ್ತೀರ್ಣ 4,49,830 ಚದರ ಮೀಟರ್. ಈ ದೇಶದ ಜನಸಂಖ್ಯೆಯಲ್ಲಿ 80%ರಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಾರೆ ಉಳಿದ 20% ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಾರೆ.
ಈ ದೇಶದ ಜನರು ಹೆಚ್ಚಾಗಿ ಸ್ಪ್ಯಾನಿಶ್ ಭಾಷೆಯನ್ನು ಮಾತನಾಡುತ್ತಾರೆ. ಅತಿ ಹೆಚ್ಚು ಸ್ಪ್ಯಾನಿಶ್ ಭಾಷೆಯನ್ನು ಮಾತನಾಡುವ ದೇಶಗಳ ಪಟ್ಟಿಯಲ್ಲಿ ಕೊಲಂಬಿಯಾ 2ನೇ ಸ್ಥಾನವನ್ನು ಪಡೆದಿದೆ. ಈ ದೇಶಕ್ಕೆ ಬಹಳ ವರ್ಷಗಳ ಹಿಂದಿನ ಇತಿಹಾಸವಿದೆ 20 ಸಾವಿರ ವರ್ಷಗಳ ಹಿಂದೆ ಕೂಡ ಇಲ್ಲಿ ಜನರು ವಾಸವಾಗಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿಯ ಜನರು ಹಿರಿಯರಿಗೆ ಬಹಳ ಗೌರವ ಕೊಡುತ್ತಾರೆ, ಮನೆಯಲ್ಲಿ ದೊಡ್ಡವರು ನಿಯಮವನ್ನು ಹೇಳಿದರೆ ಅದನ್ನು ತಪ್ಪದೆ ಪಾಲಿಸುತ್ತಾರೆ.
ಕೊಲಂಬಿಯಾ ದೇಶದ ರಾಜಧಾನಿ ಭುಗುಟು ಇಲ್ಲಿ ಸ್ಟ್ರೀಟ್ ಆರ್ಟ್ ಬಹಳ ಫೇಮಸ್, ಈ ನಗರದ ತುಂಬೆಲ್ಲಾ ಸ್ಟ್ರೀಟ್ ಆರ್ಟ್ಸ್ ಕಂಗೊಳಿಸುತ್ತದೆ. ಒಂದಕ್ಕಿಂತ ಒಂದು ಆರ್ಟ್ ಆಕರ್ಷಣೀಯವಾಗಿವೆ. ಇಲ್ಲಿಯ ಜನರು ಡ್ಯಾನ್ಸ್ ಮಾಡುವುದರಲ್ಲಿ ಎಕ್ಸಪರ್ಟ್, ಇವರಿಗೆ ಡ್ಯಾನ್ಸ್ ಮಾಡುವುದೆಂದರೆ ಇಷ್ಟ. ಶಕೀರಾ ಎಂಬ ಪಾಪ್ ತಾರೆಯ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಪಾಪ್ ಲೋಕದ ಮಿನುಗುವ ತಾರೆ ಶಕೀರಾ ಅವರು ಕೊಲಂಬಿಯಾ ದೇಶದವರು. ಬಾಕ್ಸ್ ಆಫೀಸ್ ನಲ್ಲಿ ಕಂಪನವನ್ನು ಮೂಡಿಸಿದ ಕೆಜಿಎಫ್ ಸಿನಿಮಾದಲ್ಲಿ ಎಲ್ ಡೊರಾಡೊ ಎಂದು ಹೆಸರು ಕೇಳಿಬರುತ್ತದೆ ಎಲ್ ಡೊರಾಡೊ ಅಂದರೆ ಕೆಜಿಎಫ್ ಎಂದರ್ಥ. ಕರ್ನಾಟಕದಲ್ಲಿ ಕೆಜಿಎಫ್ ಗೆ ಎಲ್ ಡೊರಾಡೊ ಎಂದು ಕರೆಯುತ್ತಿದ್ದರು. ಎಲ್ ಡೊರಾಡೊ ಚಿನ್ನದ ನಗರವಾಗಿದೆ, ಈ ನಗರ ಇರುವುದು ಕೊಲಂಬಿಯಾ ದೇಶದಲ್ಲಿ. ಒಂದು ಕಾಲದಲ್ಲಿ ಈ ನಗರದಲ್ಲಿ ಚಿನ್ನದಲ್ಲಿ ಸ್ನಾನ ಮಾಡುತ್ತಿದ್ದರಂತೆ ಮುಂದೆ ಸಂಪತ್ತಿನ ಕಾರಣದಿಂದಲೇ ಈ ನಗರ ನಾಶವಾಯಿತು.
ಕೊಲಂಬಿಯಾ ದೇಶದ ಜನರಿಗೆ ಫುಟ್ಬಾಲ್ ಎಂದರೆ ಪಂಚಪ್ರಾಣ. ಇಲ್ಲಿಯ ಜನರು ಓಪನ್ ಮೈಂಡೆಡ್ ಸ್ವಭಾವವನ್ನು ಹೊಂದಿರುತ್ತಾರೆ, ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಈ ದೇಶದಲ್ಲಿ ಹೆಚ್ಚಾಗಿ ಹಣ್ಣುಹಂಪಲುಗಳನ್ನು ಬೆಳೆಯುತ್ತಾರೆ. ಹಣ್ಣು-ಹಂಪಲುಗಳು ಈ ದೇಶದ ಪ್ರಮುಖ ಆದಾಯದ ಮೂಲವಾಗಿದೆ ಅದರಲ್ಲೂ ಬಾಳೆಹಣ್ಣನ್ನು ಈ ದೇಶ ಹೆಚ್ಚಾಗಿ ಎಕ್ಸ್ ಪೋರ್ಟ್ ಮಾಡುತ್ತದೆ. ಈ ದೇಶದಲ್ಲಿ ಕಾಫಿ ಬೆಳೆಯುವುದಿಲ್ಲ ಆದರೆ ಕಾಫಿ ಬೀನ್ಸ್ ನಿಂದ ಕಾಫಿಯನ್ನು ತಯಾರಿಸಿ ಎಕ್ಸ್ ಪೋರ್ಟ್ ಮಾಡುತ್ತಾರೆ. ಕೊಲಂಬಿಯಾ ದೇಶದ ಕಾಫಿಗೆ ಬಹಳ ವ್ಯಾಲ್ಯೂ ಇದೆ. ಈ ದೇಶದ ವೆದರ್ ಯಾವಾಗಲೂ ಕೂಲ್ ಆಗಿರುತ್ತದೆ. ಈ ದೇಶದಲ್ಲಿ ಸೀ ಫುಡ್ ಬಹಳ ಫೇಮಸ್ ಆಗಿದೆ. ಕೊಲಂಬಿಯಾ ದೇಶದಲ್ಲಿ ಮಾಡುವಷ್ಟು ಮೀನಿನ ಐಟಂಗಳನ್ನು ಪ್ರಪಂಚದ ಬೇರೆ ಯಾವುದೇ ದೇಶದಲ್ಲಿ ಮಾಡುವುದಿಲ್ಲ. ಈ ದೇಶದ ಜನರು ದಿನಪೂರ್ತಿ ಕೇವಲ ಊಟ-ತಿಂಡಿ, ಫುಟ್ಬಾಲ್ ಬಗ್ಗೆ ಮಾತನಾಡುತ್ತಿರುತ್ತಾರೆ.
ಕೊಲಂಬಿಯಾ ದೇಶದಲ್ಲಿ ಪ್ರತಿದಿನ ರೇಡಿಯೋ, ಟಿವಿಗಳಲ್ಲಿ ಎರಡು ಬಾರಿ ರಾಷ್ಟ್ರಗೀತೆ ಪ್ರಸಾರ ಮಾಡಲೇಬೇಕು ಎಂಬ ನಿಯಮವಿದೆ. ಕೊಲಂಬಿಯಾದಲ್ಲಿ ಐದು ಬಣ್ಣದಲ್ಲಿ ನದಿಯೊಂದು ಹರಿಯುತ್ತದೆ ಇದನ್ನು ರಿವರ್ ಆಫ್ ಫೈವ್ ಕಲರ್ ಎಂದು ಕರೆಯುತ್ತಾರೆ. ಈ ನದಿಯ ಬಣ್ಣ 5 ಕಲರ್ ನಲ್ಲಿ ಬದಲಾಗುತ್ತಾ ಹೋಗುತ್ತದೆ. ಈ ನದಿಯನ್ನು ನೋಡಲು ಜಗತ್ತಿನ ಮೂಲೆ ಮೂಲೆಗಳಿಂದ ಜನರು ಬರುತ್ತಾರೆ. ಇಲ್ಲಿಯ ಜನರಿಗೆ ಅನುಮಾನ ಹೆಚ್ಚು ಅವರು ಅಷ್ಟು ಸುಲಭವಾಗಿ ಬೇರೆಯವರನ್ನು ನಂಬುವುದಿಲ್ಲ. ಇಲ್ಲಿಯ ಜನರಿಗೆ ಏಲೀಯನ್ ಬಗ್ಗೆ ಬಹಳ ನಂಬಿಕೆ ಇದೆ. ಕೊಲಂಬಿಯಾ ದೇಶದ ಜನರಿಗೆ ಅತ್ಯಂತ ಇಷ್ಟವಾದ ಕೆಲಸವೆಂದರೆ ಮೀನುಗಾರಿಕೆ. ಇಲ್ಲಿಯ ಜನರಿಗೆ ಹಳದಿ ಬಣ್ಣ ಎಂದರೆ ಇಷ್ಟ, ಈ ದೇಶದ ಧ್ವಜದಲ್ಲಿ ಕೂಡ ಹಳದಿ ಬಣ್ಣವಿದೆ. ಫುಟ್ಬಾಲ್ ಮ್ಯಾಚ್ ಇದ್ದಾಗ ಇಡೀ ಸ್ಟೇಡಿಯಂ ಹಳದಿ ಬಣ್ಣದಿಂದ ಕಂಗೊಳಿಸುತ್ತದೆ.
ಕೊಲಂಬಿಯಾ ದೇಶದಲ್ಲಿ ಮಕ್ಕಳು ಹುಟ್ಟಿದ ಸ್ವಲ್ಪ ದಿನಗಳ ನಂತರ ಒಂದು ಆಚರಣೆ ಮಾಡುತ್ತಾರೆ. ಮಗುವಿನ ಸುತ್ತ ನೋಟುಗಳನ್ನು ಹಾಕಿರುತ್ತಾರೆ ಮಗುವಿಗೆ ಮುಂದಿನ ದಿನಗಳಲ್ಲಿ ಹಣದ ಕೊರತೆ ಆಗದಿರಲಿ ಎಂಬುದು ಈ ಆಚರಣೆಯ ಹಿಂದಿನ ಉದ್ದೇಶವಾಗಿದೆ. ಇಲ್ಲಿಯ ಜನರು ಫಿಟ್ ಆಗಿರುತ್ತಾರೆ ಏಕೆಂದರೆ ಅವರು ಪ್ರತಿದಿನ ಎಕ್ಸೈಸೈಜ್ ಮಾಡುತ್ತಾರೆ. ಈ ದೇಶದಲ್ಲಿ ಡ್ರಗ್ಸ್ ಕೂಡ ಹೆಚ್ಚಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ಬ್ಯಾನ್ ಆಗಿರುವ ಡ್ರಗ್ಸ್ ಈ ದೇಶದಲ್ಲಿ ಸಿಗುತ್ತದೆ.
ಅತಿ ಹೆಚ್ಚು ಡ್ರಗ್ಸ್ ಸೇವನೆ ಮಾಡುವುದು ಈ ದೇಶದಲ್ಲಿಯೇ ಇನ್ನು ಈ ದೇಶದಲ್ಲಿ ರೌಡಿಸಂ ಕೂಡ ಹೆಚ್ಚಾಗಿದೆ. ಈ ದೇಶದಲ್ಲಿ ರಾತ್ರಿ ಸಮಯ ಹೆಣ್ಣುಮಕ್ಕಳು ಒಬ್ಬರೆ ಓಡಾಡುವಂತಿಲ್ಲ. ಇಲ್ಲಿಯ ಜನರಿಗೆ ವೈನ್ ಮತ್ತು ಬಿಯರ್ ಎಂದರೆ ಬಹಳ ಇಷ್ಟ. ಇಲ್ಲಿಯ ಚಿಕ್ಕ ಮಕ್ಕಳು ಸಹ ಡ್ರಗ್ಸ್, ಬಿಯರ್ ಸೇವನೆ ಮಾಡುತ್ತಾರೆ. ಕೊಲಂಬಿಯಾ ದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ಸಮುದ್ರ ಕಿನಾರೆಗಳಿವೆ, ಇಲ್ಲಿ ಒಂದು ಬೀಚ್ ಗಿಂತ ಒಂದು ಬೀಚ್ ಸುಂದರವಾಗಿದೆ. ಇಲ್ಲಿ ವಿಚಿತ್ರವಾದ ಸಂಪ್ರದಾಯವಿದೆ ಅದೇನೆಂದರೆ ಮದುವೆಯಾದ ನಂತರ ಹುಡುಗಿಯು ತನ್ನ ತಾಯಿಯ ಎದುರು ಗಂಡನೊಂದಿಗೆ ಶಾರೀರಿಕ ಸಂಬಂಧ ಹೊಂದಬೇಕು.