ಉತ್ತರ ಕರ್ನಾಟಕ ಶೈಲಿಯ ಸ್ಪೆಷಲ್ ರುಚಿಯಾದ ತಾಲಿಪಟ್ಟಿ ಮಾಡುವ ವಿಧಾನವನ್ನು ನಾವು ಈ ಲೇಖನದಲ್ಲಿ ನೋಡೋಣ. ಉತ್ತರ ಕರ್ನಾಟಕ ಶೈಲಿಯಲ್ಲಿ ತಾಲಿಪಟ್ಟಿ ಹೇಗೆ ಮಾಡುವುದು ಹಾಗೂ ಅದಕ್ಕೆ ಬೇಕಾಗಿರುವ ಸಾಮಗ್ರಿಗಳು ಏನು ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳೋಣ.
ತಾಲಿಪಟ್ಟಿ ಮಾಡಲು ಬೇಕಾಗುವ ಸಾಮಗ್ರಿಗಳು: ಜೋಳದ ಹಿಟ್ಟು ಒಂದು ಕಪ್, ಗೋಧಿ ಹಿಟ್ಟು ಅರ್ಧ ಕಪ್, ಕಡಲೇ ಹಿಟ್ಟು ಅರ್ಧ ಕಪ್, ಆಜವಾನ 2 ಟೀ ಸ್ಪೂನ್, ಹಸಿಮೆಣಸಿನ ಕಾಯಿ, ಸ್ಪ್ರಿಂಗ್ ಆನಿಯನ್ ಕೊತ್ತಂಬರಿ ಸೊಪ್ಪು, ಅರಿಶಿನ ಒಂದು ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು
ತಾಲಿಪಟ್ಟಿ ಮಾಡುವ ವಿಧಾನ ಹೇಗೆ ಅಂತಾ ನೋಡೋಣ. ಮೊದಲು ಒಂದು ಮಿಕ್ಸಿ ಜಾರಿಗೆ ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಅಜವಾನ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಮೇಲೆ ಹೇಳಿದ ಅಳತೆಯಲ್ಲಿ ಜೋಳದ ಹಿಟ್ಟು ಕಡಲೆಹಿಟ್ಟು ಹಾಗೂ ಗೋದಿಹಿಟ್ಟನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಸ್ಪ್ರಿಂಗ್ ಆನಿಯನ್ ಕೂಡ ಸೇರಿಸಿ ಕಾರಕ್ಕೆ ಬೇಕಾದಷ್ಟು ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ ಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಂತರ ಇದಕ್ಕೆ ಒಂದು ಟೀ ಸ್ಪೂನ್ ಇಷ್ಟು ಅರಿಶಿನ ಹಾಗೂ ಎರಡು ಟೀ ಸ್ಪೂನ್ ಅಷ್ಟು ಅಜವಾನ ಹಾಕಿ ಮಿಕ್ಸ್ ಮಾಡಿಕೊಂಡು ಕಾದಿರುವ ನೀರನ್ನು ಹಾಕಿ ಹಿಟ್ಟನ್ನು ಕಲೆಸಿಟ್ಟುಕೊಳ್ಳಬೇಕು.
ನಂತರ ಬಟರ್ ಪೇಪರ್ ಅಥವಾ ದಪ್ಪದ ಪ್ಯಾಸ್ಟಿಕ್ ಮೇಲೆ ಎಣ್ಣೆ ಸವರಿಕೊಂಡು ಚಪಾತಿ ಹಿಟ್ಟಿನ ಅಷ್ಟೇ ಉಂಡೆ ತೆಗೆದುಕೊಂಡು ಎಣ್ಣೆ ಹಾಕಿ ಎರಡೂ ಕಡೆ ಎಣ್ಣೆ ಹಚ್ಚಿಕೊಂಡು ಕೈಯಲ್ಲಿ ಚೆನ್ನಾಗಿ ತಟ್ಟಿ ಕಾದ ತವಾದ ಮೇಲೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಬೇಕು. ಈ ರೀತಿ ಮಾಡುವುದರಿಂದ ತಾಲಿಪಟ್ಟಿ ತುಂಬಾ ರುಚಿಯಾಗಿ ಬರುತ್ತದೆ ಹಾಗೂ ಈ ರೀತಿ ಮಾಡುವುದರಿಂದ ಮಕ್ಕಳಿಗೂ ಕೂಡ ಇದು ಇಷ್ಟವಾಗಬಹುದು.