ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್, ಅಂದರೆ UPSC . UPSC ಪರೀಕ್ಷೆಯನ್ನು ನಮ್ಮ ದೇಶದ ಒಂದು ಕಠಿಣ ಪರೀಕ್ಷೆ ಎಂದೇ ಹೇಳಲಾಗುತ್ತದೆ. ಈ ಪರೀಕ್ಷೆಗೆ ಕೂರುವ ಜನರು ಹೇಗೆ ಇರುತ್ತಾರೆ ಎಂದರೆ ಅವರ ಜೀವನ ಪೂರ್ತಿ ಸಫಲತೆಯಿಂದ ಕೂಡಿರುತ್ತದೆ. ಆದರೆ ಅದೇ ಒಬ್ಬ ಸಾಮಾನ್ಯ ವಿದ್ಯಾರ್ಥಿಗೆ ಈ ಪರೀಕ್ಷೆಯನ್ನು ಬರೆಯುವುದು ಒಂದು ದೊಡ್ಡ ಕನಸೇ ಆಗಿರುತ್ತದೆ ಹಾಗೂ ಆ ಕಮಸನ್ನು ನನಸು ಮಾಡಿದಂತೆಯೇ ಆಗಿರುತ್ತದೆ. ಆದರೆ ಇಲ್ಲಿ ಒಬ್ಬಳು ರುಕ್ಮಿಣಿ ರಾಯರ್ ಎಂಬ ಹೆಣ್ಣು ಮಗಳು ತನ್ನ ಆರನೇ ತರಗತಿಯಲ್ಲಿಯೇ ಫೆಲ್ ಆಗಿರುತ್ತಾಳೇ. ಮತ್ತು ಮುಂದೆ ಯಾವುದೇ ಕೋಚಿಂಗ್ ಕ್ಲಾಸ್ ಇಲ್ಲದೆ, ಅವಳು ದೇಶದ ಕಠಿಣ ಪರೀಕ್ಷೆ ಆದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗುತ್ತಾಳೆ. ಇದು ಆಶ್ಚರ್ಯಕರ ಎನಿಸಿದರೂ ನಂಬಲೇಬೇಕಾದ ಸತ್ಯ.
ರುಕ್ಮಿಣಿ ಅವರು ಜನಿಸಿದ್ದು ಹರಿಯಾಣದಲ್ಲಿ ಅವರನ್ನು ಡಾಲ್ಹೌಸಿ ಯ ಒಂದು ಬೋರ್ಡಿಂಗ್ ಸ್ಕೂಲಿಗೆ ಸೇರಿಸಲಾಗಿತ್ತು. ಆದರೆ ಇದು ಹಿಮಾಚಲಪ್ರದೇಶದಲ್ಲಿ ಇದ್ದ ಕಾರಣ ರುಕ್ಮಿಣಿ ಅವರಿಗೆ ಅಲ್ಲಿ ಹೊಂದಾಣಿಕೆ ಆಗಿರಲಿಲ್ಲ ಹಾಗೂ ಬೋಟಿಂಗ್ ಸ್ಕೂಲಿನ ಅತಿಯಾದ ಒತ್ತಡದಿಂದಾಗಿ ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿತ್ತು ಇದರಿಂದಾಗಿ ರುಕ್ಮಿಣಿ ಅವರು ತಮ್ಮ ಆರನೇ ತರಗತಿಯಲ್ಲಿ ಫೇಲ್ ಆಗಿದ್ದರು. ಅದರ ನಂತರ ರುಕ್ಮಿಣಿ ಡಿಪ್ರೆಶನ್ ಗೆ ಒಳಗಾಗಿ ತನ್ನ ಸ್ನೇಹಿತರು ಹಾಗು ತಂದೆ ತಾಯಿಯರ ಜೊತೆಗೆ ಸಹ ಮಾತನಾಡುತ್ತಿರಲಿಲ್ಲ. ಇದು ಅವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ವನ್ನು ಬೀರಿತ್ತು. ಸ್ವಲ್ಪ ದಿನದ ನಂತರ ಗಟ್ಟಿ ಮನಸ್ಸಿನಿಂದ ಡಿಪ್ರೆಶನ್ ನಿಂದ ಹೊರಗೆ ಬಂದರು. ರುಕ್ಮಿಣಿ ಅವರ ಸ್ವತಹ ಅವರೇ ಹೇಳುವ ಹಾಗೆ ನಾನು ಆರನೇ ತರಗತಿಯಲ್ಲಿದ್ದಾಗ ತುಂಬಾ ಅಸಫಲತೆ ಯಿಂದ ಬಳಲುತ್ತಿದ್ದೆ ಹಾಗೂ ಆದರೆ ತುಂಬಾ ನಿರಾಸೆಯಲ್ಲಿದ್ದ ಎಂದು ಹೇಳುತ್ತಾರೆ .
ಆದರೆ ಕೊನೆಗೂ ತುಂಬಾ ಕಷ್ಟಪಟ್ಟು ಓದಿ ಸಾಧನೆ ಮಾಡಿದ್ದರು. ಯಾವ ವ್ಯಕ್ತಿಯು ತನ್ನ ವಿಫಲತೆಯಿಂದ ಎದ್ದು ಮತ್ತೆ ಗೆಲುವನ್ನು ಕಾಣುತ್ತಾನೆ ಅಂತಹ ವ್ಯಕ್ತಿ ಜೀವನದಲ್ಲಿ ಮುಂದೆ ಬರುತ್ತಾನೆ ಹಾಗೂ ಅವರ ಜೀವನದಲ್ಲಿ ಸಫಲತೆಯನ್ನು ಕಾಣುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರುಕ್ಮಿಣಿ ಹೇಳುತ್ತಾರೆ. ಇದಾದನಂತರ ರುಕ್ಮಿಣಿ ಅವರ ಜೀವನವು ಸಫಲತೆ ಎಂದು ಕೂಡ ಗೆಲುವಿನ ಹಾದಿಯನ್ನು ಕಂಡಿತ್ತು. ತಮ್ಮ ಶಾಲೆಯನ್ನು ಮುಗಿಸಿದ ನಂತರ ರುಕ್ಮಿಣಿ ಅವರು ತಮ್ಮ ಗ್ರಾಜುಯೇಶನ್ ಪದವಿಯನ್ನು ಗುರುನಾನಕ ದೇವ ಯುನಿವರ್ಸಿಟಿ ಅಮೃತ್ಸರ್ ಅಲ್ಲಿ ಮುಗಿಸಿದರು. ಅಲ್ಲಿ ಆ ಸಮಯದಲ್ಲಿ ಯಾವ ಒಂದು ಅಸಫಲತೆಯ ಅವರನ್ನು ಕಾಡದೆ ಎಲ್ಲಾ ವಿಷಯಗಳಲ್ಲೂ ಎಲ್ಲಾ ಸೆಮಿಸ್ಟರ್ ಗಳಲ್ಲೂ ಸಹ ಮುಂದೆ ಇದ್ದರು. ಇದಾದನಂತರ ಸೋಶಿಯಲ್ ಸೈನ್ಸ್ ವಿಷಯದಲ್ಲಿ ತಮ್ಮ ಪೋಸ್ಟ್ ಗ್ರಾಜುಯೇಷನ್ ಅನ್ನು ಮುಂಬೈನಲ್ಲಿ ಇರುವಂತಹ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಅಲ್ಲಿ ಮುಗಿಸಿ, ಅಲ್ಲಿ ಗೋಲ್ಡ್ ಮೆಡಲ್ ಅನ್ನು ಸಹ ಪಡೆದರು. ತಮ್ಮ ಪಿ ಜಿ ವಿದ್ಯಾಭ್ಯಾಸ ಮುಗಿದ ನಂತರ ಹಲವಾರು NGO ಗಳೊಂದಿಗೆ ಕಾರ್ಯನಿರ್ವಹಿಸಿದರು. ದೇಶದ ಏಳಿಗೆಗಾಗಿ ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಂಡರು ಹಾಗೂ ಸಮಾಜದ ಏಳಿಗೆಗಾಗಿ ಸಹ ಸಮಸ್ಯೆ ನೀತಿಯನ್ನು ಸುಧಾರಿಸಲು ಲೋಕಸೇವೆಯಿಂದ ಕೆಲಸ ಮಾಡುವ ಸಲುವಾಗಿ ರಾಜನೀತಿ ಶಾಸ್ತ್ರ ವನ್ನು ಹಾಗೂ ಸೋಶಿಯಾಲಜಿ ಯನ್ನು ತಮ್ಮ ವಿಷಯವನ್ನಾಗಿ ಆರಿಸಿಕೊಂಡು ದೃಢ ಮನಸ್ಸಿನಿಂದ ಯಾವುದೇ ಒಂದು ಕೋಚಿಂಗ್ ಕ್ಲಾಸ್ ಸಹ ಇಲ್ಲದೆಯೇ ಓದಲು ಆರಂಭಿಸಿದ್ದರು. ಇದರ ಪರಿಣಾಮವಾಗಿ 2011ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು. ಯಾರು ತಮ್ಮ ತರಗತಿಗಳಲ್ಲಿ ಕಾಲೇಜುಗಳಲ್ಲಿ ಜೀವನದಲ್ಲಿ ಆಗುತ್ತಾರೆ ಅಂತವರಿಗೆ ಮತ್ತೆ ತಮ್ಮ ಜೀವನದಲ್ಲಿ ಮೇಲೇಳಲು ರುಕ್ಮಿಣಿ ಅವರು ಒಂದು ದೊಡ್ಡ ಮಾದರಿಯಾಗಿದ್ದಾರೆ. ಕೊನೆಯದಾಗಿ ರುಕ್ಮಿಣಿ ಅವರೇ ಹೇಳುತ್ತಾರೆ If I can do it, everybody else can do, nothing can stop you ಎಂದು.