ಮದುವೆಯಾಗಿ ಸುಮಾರು 10 ವರ್ಷದ ನಂತರ ಗುಡ್ ನ್ಯೂಸ್ ಕೊಟ್ಟ ರಾಮಚರಣ್ ದಂಪತಿ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ಆಗಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಪೋಲೋ ಸಂಸ್ಥೆಯ ಮುಖ್ಯಸ್ಥರ ಮಗಳಾಗಿರುವ ಉಪಾಸನ ಅವರನ್ನು ಬರೋಬ್ಬರಿ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು.

ಮೂಲೆಗಳ ಪ್ರಕಾರ ಇವರಿಬ್ಬರ ಮದುವೆ ಲವ್ ಮ್ಯಾರೇಜ್ ಆಗಿದ್ದು ತೆಲುಗು ಫಿಲಂ ಇಂಡಸ್ಟ್ರಿ ಅತ್ಯಂತ ಮೆಚ್ಚಿನ ಜೋಡಿ ಇವರಿಬ್ಬರಾಗಿದ್ದರು. ರಾಮಚರಣ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದರೆ, ಈ ಕಡೆ ಉಪಾಸನ ಅವರು ಒಬ್ಬ ಸ್ವಾವಲಂಬಿ ಮಹಿಳೆಯಾಗಿ ಬಿಸಿನೆಸ್ ವುಮೆನ್ ಆಗಿ ತಮ್ಮದೇ ಆದಂತಹ ಪ್ರಭಾವವನ್ನು ಹೊಂದಿದ್ದಾರೆ.

ಇತ್ತೀಚಿಗಷ್ಟೇ ರಾಮಚರಣ್ ನಾಯಕ ನಟನಾಗಿ ನಟಿಸಿರುವ ಆರ್ ಆರ್ ಆರ್ ಸಿನಿಮಾಗೆ ಸಾಕಷ್ಟು ಅವಾರ್ಡ್ ಗಳನ್ನು ಪಡೆದುಕೊಂಡಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಈ ಸಿನಿಮಾ ಸಾವಿರಕ್ಕೂ ಅಧಿಕ ಕೋಟಿ ಕಲೆಕ್ಷನ್ ಅನ್ನು ಬಾಕ್ಸ್ ಆಫೀಸ್ ನಲ್ಲಿ ಗಳಿಸಿತ್ತು. ಇತ್ತೀಚಿಗಷ್ಟೇ ಜಪಾನ್ ದೇಶದಲ್ಲಿ ಕೂಡ ಬಿಡುಗಡೆಯಾಗಿ ಜಪಾನ್ ದೇಶದಲ್ಲಿ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿತ್ತು. ಇನ್ನು ರಾಮಚರಣ್ ಹಾಗೂ ಉಪಾಸನಾ ಇಬ್ಬರೂ ಕೂಡ ಫ್ರಾನ್ಸ್ ಗೆ ತೆರಳಿ ತಮ್ಮ ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಕೆಲವು ತಿಂಗಳುಗಳ ಹಿಂದಷ್ಟೇ ಆಚರಿಸಿಕೊಂಡಿದ್ದರು.

Telugu Actor Ramcharan Marriage Story

ಮದುವೆಯಾಗಿ ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು ಕೂಡ ಇಬ್ಬರಿಗೂ ಮಕ್ಕಳಾಗಿರಲಿಲ್ಲ. ಈ ಕುರಿತಂತೆ ಇಬ್ಬರಿಗೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರಶ್ನೆಯನ್ನು ಕೇಳುತ್ತಲೇ ಇದ್ದರು. ಕೊನೆಗೂ ಕೂಡ ಮೆಗಾಸ್ಟಾರ್ ಫ್ಯಾಮಿಲಿ ಇದಕ್ಕೆ ಸಂತೋಷದ ಉತ್ತರವನ್ನು ಅಭಿಮಾನಿಗಳಿಗೆ ನೀಡುವ ಸಮಯ ಬಂದೇಬಿಟ್ಟಿದೆ. ನಿನ್ನೆಯಷ್ಟೇ ಮೆಗಾಸ್ಟಾರ್ ಚಿರಂಜೀವಿ ರವರು ಎಲ್ಲಾ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಹೌದು ಮಿತ್ರರೇ 10 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮೆಗಾ ಪವರ್ ಸ್ಟಾರ್ ರಾಮಚರಣ್ ಹಾಗೂ ಅವರ ಪತ್ನಿ ಉಪಾಸನಾ ಕೊನಿಡೆಲಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದು ದೃಢೀಕೃತವಾಗಿದೆ. ಇದು ಮೆಗಾಸ್ಟಾರ್ ಅಭಿಮಾನಿಗಳಿಗೆ ನಿಜಕ್ಕೂ ದೊಡ್ಡ ಮಟ್ಟದ ಸಂತೋಷವನ್ನು ನೀಡಿದ್ದು ನಿಜವಾದ ಸಂತೋಷದ ಸುದ್ದಿಯನ್ನು ಎದುರು ನೋಡಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಈ ಸಂತೋಷದ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ ಹಾಗೂ ರಾಮಚರಣ್ ಹಾಗೂ ಉಪಾಸನ ದಂಪತಿಗಳಿಗೆ ಶುಭಾಶಯಗಳನ್ನು ಕೂಡ ಕಾಮೆಂಟ್ ಮಾಡುವ ಮೂಲಕ ಮಾಡಬಹುದಾಗಿದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *