ಕೊರೋನಾ ವೈರಸ್ ನಿಂದಾಗಿ ಮನುಷ್ಯರು ಮಾನವೀಯತೆಯನ್ನು ಮರೆಯುತ್ತಿದ್ದಾರೆ, ಅಂದರೆ ಈ ರೋಗ ತಗುಲಿರುವವರನ್ನು ಊರೇ ಹೊರಗೆ ಒಬ್ಬರನ್ನೆ ವಾಸಿಸಲು ಬಿಡುತ್ತಿದ್ದಾರೆ ತೆಲಂಗಾಣದಲ್ಲಿ, ಹಾಗೆಯೇ ಅಪಘಾತವಾಗಿ ಗಾಯಾಳು ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲಿಯೇ ನರಳಾಡಿದ್ರೂ ಅಲ್ಲಿಯ ಜನರು ಆಸ್ಪತ್ರೆಗೆ ಸೇರಿಸದೇ ಒಂದು ಗಂಟೆಗಳ ಕಾಲ ನೋಡುತ್ತಾ ನಿಂತ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಂಚಿಪುರ ಗ್ರಾಮದ ಬಳಿ ನಡೆದಿದೆ.
ಕೊರೋನಾ ವು ಪ್ರಸ್ತುತ ಸಮಯದಲ್ಲಿ ಅದರ ಅಟ್ಟಹಾಸವನ್ನು ಮೆರೆಯುತ್ತಿದೆ, ಹೀಗಿದ್ದಲ್ಲಿ ತೆಲಂಗಾಣ ಜಿಲ್ಲೆಯ ಒಂದು ಹಳ್ಳಿಯಲ್ಲಿ ಸೋಂಕಿತರನ್ನು ಊರ ಹೊರಗಿನ ಲ್ಲಿ ಒಂದು ಶೆಡ್ಡ್ ನಿರ್ಮಿಸಿ ಅಲ್ಲಿಯೇ ವಾಸಿಸಲು ಸೂಚಿಸುತ್ತಾರೆ ಹೀಗೆ ಒಬ್ಬ ಹೆಣ್ಣು ಮಗಳನ್ನುಊರ ಹೊರಗೆ ಇರಿಸಿದ್ದಾರೆ. ಅವಳ ರಕ್ಷಣೆಗಾಗಿ ಅವಳಪ್ಪ ಅಂತರವನ್ನು ಕಾಯ್ದಿರಿಸಿಕೊಂಡು ಮಗಳ ರಕ್ಷಣೆಯನ್ನು ಮಾಡುತ್ತಿದ್ದಾರೆ. ಇಲ್ಲಿ ಕಾನೂನಿನ ವಿರುದ್ಧ ಪರ-ವಿರೋಧ ವಾಗ್ವಾದಗಳು ನಡೆಯುತ್ತಿವೆ ಮತ್ತು ಕೆಲವು ರಾಜಕಾರಣಿಗಳು ಹುಡುಗಿಗೆ ಕಾಲಕಾಲಕ್ಕೆ ಊರ ಹಿರಿಯರು ಆಹಾರವನ್ನು ಒದಗಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇನ್ನು ಸ್ವಲ್ಪ ಜನ 13 ದಿನಗಳ ಕಾಲ ಹುಡುಗಿಯನ್ನು ಊರವರಿಗೆ ಏಕಾಂಗಿಯಾಗಿ ಬಿಡುವುದು ಸಹಮತವಿಲ್ಲ ಎಂದು ವಿರೋಧಿಸಿದ್ದಾರೆ.
ಈಗಿನ ತಂತ್ರಜ್ಞಾನದಲ್ಲಿ ಈ ರೀತಿಯಲ್ಲ ಮಾಡುವುದು ಸರಿಯಲ್ಲ ಮನೆಯಲ್ಲಿ ಕ್ವಾರಂಟೇನ್ ಮಾಡುವುದು ಹಾಗೂ ಸೋಂಕಿತರ ದೂರವುಳಿಯುವುದು ಒಳ್ಳೆಯದು ಅದೇ ಕಾರಣಕ್ಕೆ ಅವರನ್ನು ಏಕಾಂಗಿ ಮಾಡುವುದು ಸರಿಯಾಗುವುದಿಲ್ಲ.ಹಾಗೆಯೇ ಒಂದು ಕಡೆ ದ್ವಿಚಕ್ರವಾಹನದ ಅಪಘಾತವಾಗಿದ್ದು ಅದರಲ್ಲಿನ ಸವಾರ ಕೆಳಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರು ಸುತ್ತಲಿನ ಜನ ನೋಡುತ್ತ ನಿಂತಿರುತ್ತಾರೆ ಹೊರತು ಸಹಾಯಕ್ಕೆ ಹೋಗುವುದಿಲ್ಲ ಆ ತಕ್ಷಣ ಸಹಾಯಕಿ ನಿಂತರೆ ಒಂದು ಜೀವ ಉಳಿಸಬಹುದು ಅದನ್ನು ಬಿಟ್ಟು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ಳುವುದರ ನಿರತರಾಗಿರುತ್ತಾರೆ ಈ ಅಜ್ಞಾನವನ್ನು ಅಥವಾ ಅಮಾನವೀಯತೆಯನ್ನು ಹೋಗಲಾಡಿಸಬೇಕು.