ಹಲ್ಲುನೋವು ಹೆಚ್ಚಾಗಿ ಎಲ್ಲರಲ್ಲೂ ಕಾಣುವ ತೊಂದರೆಯಾಗಿದೆ. ಈಗಿನ ಆಧುನಿಕ ಆಹಾರ ಶೈಲಿಯಲ್ಲಿ ಹಲ್ಲುಗಳು ದುರ್ಬಲವಾಗಿವೆ. ಹಲ್ಲುಗಳು ಹುಳುಕಾಗಿ ಹಲ್ಲುಗಳಲ್ಲಿ ಹುಳಗಳು ಇರುತ್ತವೆ. ಇದರಿಂದ ನೋವು ಕಾಣಿಸಿಕೊಳ್ಳುತ್ತದೆ. ವೈದ್ಯರು ಹತ್ತಿರ ಹೋದರೆ ಬೆಳ್ಳಿ ಅಥವಾ ಸಿಮೆಂಟ್ ನ್ನು ತುಂಬುತ್ತಾರೆ. ಹಾಗಾಗಿ ಇದಕ್ಕೆ ನಾವು ಇಲ್ಲಿ ಹಲ್ಲಿನ ಹುಳವನ್ನು ಹೋಗಲಾಡಿಸಲು ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹಲ್ಲು ಬಹಳ ಮುಖ್ಯ. ಹಲ್ಲುಗಳನ್ನು ಕಳೆದುಕೊಂಡರೆ ಅಗಿಯುವುದು ಮತ್ತು ತಿನ್ನುವುದು ಬಹಳ ಕಷ್ಟ. ಹಾಗೆಯೇ ಆಹಾರವನ್ನು ಸೇವಿಸದೇ ಬದುಕಲು ಸಾಧ್ಯವಿಲ್ಲ. ಹಲ್ಲಿನಲ್ಲಿ ಹುಳುಗಳು ಆಗಿ ಎಷ್ಟೋ ಜನ ತಮ್ಮ ಅಮೂಲ್ಯವಾದ ಹಲ್ಲುಗಳನ್ನು ಕಳೆದುಕೊಂಡಿದ್ದಾರೆ. ಏಕೆಂದರೆ ಒಂದು ಹಲ್ಲಿನಲ್ಲಿ ಹುಳುಗಳು ಆದರೆ ಅವು ಎಲ್ಲಾ ಹಲ್ಲುಗಳಿಗೂ ಹರಡುತ್ತಾ ಹೋಗುತ್ತವೆ. ಹುಳುಗಳು ಹಲ್ಲಿನಲ್ಲಿ ಇದ್ದು ಹಲ್ಲುಗಳನ್ನು ಒಳಗೆ ತಿಂದು ಕಪ್ಪು ಬಣ್ಣ ಬರುವಂತೆ ಮಾಡುತ್ತವೆ.
ಲವಂಗ ಇದು ಹಲ್ಲುನೋವನ್ನು ನಿವಾರಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಹಲ್ಲುನೋವು ಆದಾಗ ಲವಂಗವನ್ನು ಹಲ್ಲುನೋವು ಇರುವ ಹಲ್ಲಿನ ಮೇಲೆ ಇಟ್ಟುಕೊಳ್ಳುತ್ತಾರೆ. ಆದರೆ ಅದು ಹಲ್ಲಿನ ಹುಳಗಳನ್ನು ಸಹ ತೆಗೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಎರಡರಿಂದ ಮೂರು ಲವಂಗವನ್ನು ತೆಗೆದುಕೊಳ್ಳಬೇಕು. ಅದನ್ನು ಚೆನ್ನಾಗಿ ಪುಡಿ ಮಾಡಬೇಕು. ಆ ಪುಡಿಯನ್ನು ಹಲ್ಲಿನಲ್ಲಿ ಇಟ್ಟುಕೊಳ್ಳಬೇಕು. ಅಂದರೆ ಹುಳುಕಾಗಿ ಇರುವ ಹಲ್ಲುಗಳಿಗೆ ಅದನ್ನು ತುಂಬಬೇಕು.
ಹಾಗೆಯೇ ಜಾಯಿಕಾಯಿ ಇದು ಎಲ್ಲಾ ಕಡೆ ಸಿಗುವುದಿಲ್ಲ. ಆದರೆ ಔಷಧಿಗಾಗಿ ಎಲ್ಲರ ಮನೆಯಲ್ಲೂ ಇಟ್ಟುಕೊಂಡಿರುತ್ತಾರೆ. ಜಾಯಿಕಾಯಿ ಎಣ್ಣೆಯನ್ನು ಮಾಡಿ ಹತ್ತಿಯಲ್ಲಿ ಅದ್ದಿ ಹಲ್ಲಿನಲ್ಲಿ ಇಟ್ಟುಕೊಳ್ಳಬೇಕು. ಹಾಗೆಯೇ ಬೆಳ್ಳುಳ್ಳಿ ಮತ್ತು ಸೈಂದವ ಲವಣವನ್ನು ಸೇರಿಸಿ ಹಲ್ಲಿಗೆ ಹಚ್ಚಿದರೆ ಹಲ್ಲುನೋವು ನಿವಾರಣೆ ಆಗುತ್ತದೆ. ಹಾಗೆಯೇ ಈರುಳ್ಳಿ ಬೀಜಗಳನ್ನು ಸುಟ್ಟು ಹೊಗೆಯನ್ನು ತೆಗೆದುಕೊಂಡರೆ ಹುಳಗಳು ಸಾಯುತ್ತವೆ. ಪ್ರತಿದಿನ ಬೆಳಿಗ್ಗೆ ಬಿಸಿನೀರಿಗೆ ಎಳ್ಳೆಣ್ಣೆಯನ್ನು ಸೇರಿಸಿ ಬಾಯಿ ಮುಕ್ಕಳಿಸಿದರೆ ಹಲ್ಲಿನ ಸಮಸ್ಯೆ ದೂರವಾಗುತ್ತದೆ.