ಅಸಿಡಿಟಿ ಹುಳಿತೇಗು ಎನ್ನುವುದು ಈಗಿನ ಜನರಲ್ಲಿ ಸರ್ವೇಸಾಮಾನ್ಯವಾದ ಒಂದು ಕಾಯಿಲೆಯಾಗಿದೆ. ಇದನ್ನು ನಿರ್ಲಕ್ಷ ಮಾಡುವುದರಿಂದ ಇನ್ನೂ ಅನೇಕ ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಆಸಿಡಿಟಿಯನ್ನು ನಮ್ಮ ಆಹಾರದ ಕ್ರಮದಲ್ಲಿಯೇ ಹೆಚ್ಚಾಗಿ ಕಡಿಮೆ ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ ನಾವು ಇಲ್ಲಿ ಈ ಅಸಿಡಿಟಿಯ ನಿವಾರಣೆಗೆ ಬೇಕಾದ ಮುಖ್ಯ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ನಾವು ಆಹಾರವನ್ನು ಸೇವಿಸುವಾಗ ಸರಿಯಾಗಿ ಅಗೆಯುವುದು ಮತ್ತು ನಿಧಾನವಾಗಿ ಆಹಾರವನ್ನು ಸೇವಿಸುವುದರಿಂದ ಮತ್ತು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುವುದರಿಂದ ಹುಳಿತೇಗು ಮತ್ತು ಆಸಿಡಿಟಿಯನ್ನು ನಿಯಂತ್ರಿಸಬಹುದು. ದೇಹದ ತೂಕವನ್ನು ಅಂದರೆ ಬೊಜ್ಜನ್ನು ಕರಗಿಸುವುದು, ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಜೀರ್ಣಕ್ರಿಯೆಯು ಸರಿಯಾಗಿ ಆಗುತ್ತದೆ. ಇದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಆಸಿಡ್ ನ ಪ್ರಮಾಣ ಸರಿಯಾಗಿ ಆಗಿ ಹುಳಿ ತೇಗು ಬರುವುದು ಕಡಿಮೆಯಾಗುತ್ತದೆ. ಧೂಮಪಾನ ಮಾಡುವುದರಿಂದ ಅನ್ನನಾಳದ ಮೇಲೆ ಪರಿಣಾಮ ಬೀರುವುದರಿಂದ ಆಸಿಡಿಟಿಯು ಇಂಥವರಲ್ಲಿ ಹೆಚ್ಚಾಗಿರುತ್ತದೆ.

ಧೂಮಪಾನವನ್ನು ತ್ಯಜಿಸುವುದರಿಂದ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆಯಾಗಿ ಆಸಿಡಿಟಿ ಸಮಸ್ಯೆಯು ಕಡಿಮೆಯಾಗುತ್ತದೆ. ತಂಪು ಪಾನೀಯಗಳನ್ನು ಸೇವಿಸುವುದರಿಂದ ಆಸಿಡಿಟಿ ಪ್ರಮಾಣವು ಹೆಚ್ಚಾಗುತ್ತದೆ. ತಂಪು ಪಾನೀಯವನ್ನು ತೇಜಸಿ ಹಣ್ಣಿನ ರಸವನ್ನು ಆದರೆ ಯಾವುದೇ ಕೆಮಿಕಲ್ ಗಳನ್ನು ಹಾಕದೆ ಮತ್ತು ತಂಪುನೀರನ್ನು ಬಳಸದೆ ತಯಾರಿಸಿರುವ ಹಣ್ಣಿನ ಜ್ಯೂಸನ್ನು ಕುಡಿಯುವುದರಿಂದ ಆಸಿಡಿಟಿಯನ್ನು ನಿಯಂತ್ರಣದಲ್ಲಿಡಬಹುದು. ಕೆಲವೊಂದು ಆಹಾರಗಳನ್ನು ತ್ಯಜಿಸುವುದರಿಂದ ಅಂದರೆ ಕಾಫಿ ಚಾಕಲೇಟ್ ಗಳಂಥ ಆಹಾರದಲ್ಲಿ ಅಸಿಡಿಟಿಯನ್ನು ಹೆಚ್ಚಿಸುವ ಗುಣವಿರುವುದರಿಂದ ಅಂತಹ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು.

ಹಾಗೆ ಮದ್ಯಪಾನವು ಕೂಡ ಆಸಿಡಿಟಿ, ಗ್ಯಾಸ್ಟ್ರಿಕ್ ನ್ನು ಹೆಚ್ಚಿಸುತ್ತದೆ. ಮದ್ಯಪಾನವನ್ನು ಬಿಡುವುದರಿಂದ ಅನೇಕ ಸಮಸ್ಯೆಗಳನ್ನು ದೂರವಿಡಬಹುದು. ದಿನಚರಿಯನ್ನು ಸರಿಯಾದ ಕ್ರಮದಲ್ಲಿ ಇಟ್ಟುಕೊಳ್ಳುವುದರಿಂದ ಅಂದರೆ ಊಟಕ್ಕಿಂತ ಒಂದು ತಾಸು ಮುಂಚೆ ಅಥವಾ ಎರಡು ತಾಸಿನ ನಂತರ ವ್ಯಾಯಾಮಗಳನ್ನು ಮಾಡುವುದರಿಂದ ಆರೋಗ್ಯ ಸ್ಥಿತಿಯು ಸರಿಯಾದ ಕ್ರಮದಲ್ಲಿ ಇರುತ್ತದೆ. ಇದರಿಂದಲೂ ಕೂಡ ಆಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ದೂರವಿಡಬಹುದು. ನಾವು ಸೇವಿಸುವ ಕೆಲವೊಂದು ಔಷಧಿ ಗಳಲ್ಲಿಯೂ ಆಸಿಡಿಟಿ ಪ್ರಮಾಣವನ್ನು ಹೆಚ್ಚಿಸುವ ಗುಣವಿರುತ್ತದೆ. ಇದನ್ನು ಸರಿಯಾದ ನಿರ್ದೇಶನದಲ್ಲಿ ತೆಗೆದುಕೊಳ್ಳುವುದರಿಂದ ಇದನ್ನು ನಿಯಂತ್ರಿಸಬಹುದು.

ಊಟವಾದ ಕೂಡಲೇ ಮಲಗುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಇದರಿಂದಲೂ ಹುಳಿತೇಗು ಮತ್ತು ಆಸಿಡಿಟಿ ಹೆಚ್ಚಾಗುತ್ತದೆ. ಊಟವಾದ ಒಂದು ತಾಸಿನ ನಂತರ ಮಲಗುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗಿ ಸುಸ್ಥಿರವಾದ ನಿದ್ರೆಯು ಬರುತ್ತದೆ. ಆಸಿಡಿಟಿ ಅಂತಹ ರೋಗವನ್ನು ತಡೆಗಟ್ಟುತ್ತದೆ. ಹೀಗೆ ಮಾಡುವುದರಿಂದ ಮತ್ತು ಇಂತಹ ನಿಯಮಗಳನ್ನು ಅನುಸರಿಸುವುದರಿಂದ ಆಸಿಡಿಟಿ ಮತ್ತು ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳನ್ನು ದೂರವಿಡಬಹುದು.

Leave a Reply

Your email address will not be published. Required fields are marked *