Taurus Horoscope: ವೃಷಭ ರಾಶಿಯವರು ಇದೊಂದು ವಿಷಯದಲ್ಲಿ ತುಂಬಾ ಕೇರ್ ಫುಲ್ ಅಗಿರ್ಲೇಬೇಕು

0 68

Taurus Horoscope: ತಿಂಗಳುಗಳು ಬದಲಾಗುತ್ತ ಇದ್ದಂತೆ ಪ್ರತಿಯೊಬ್ಬರಿಗೂ ಸಹ ಮುಂದಿನ ತಿಂಗಳಲ್ಲಿ ಯಾವ ರೀತಿಯ ಫಲಗಳು ಲಭಿಸುತ್ತದೆ ಎಂಬುದರ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ನಿರೀಕ್ಷೆಯನ್ನು ಸಹ ಇಟ್ಟುಕೊಂಡಿರುತ್ತಾರೆ ಕೆಲವರಿಗೆ ಶುಭ ಫಲಗಳು ಅಥವಾ ಒಳ್ಳೆಯ ಯೋಗ ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡುಬರುತ್ತದೆ

ಹಾಗೆಯೇ 2023 ಜುಲೈ ತಿಂಗಳಲ್ಲಿ ವೃಷಭ (Taurus Horoscope) ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ. ಸಣ್ಣ ಪುಟ್ಟ ತೊಂದರೆಯನ್ನು ರವಿ ಗ್ರಹವು ಬಗೆಹರಿಸುತ್ತದೆ ಕ್ರಮಬದ್ದವಾಗಿ ಇಲ್ಲದ ವಿಚಾರ ಸಹ ಸರಿಯಾದ ಮಾರ್ಗ ಕ್ಕೆ ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ಜರುಗುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಹಾಗೆಯೇ ಹಣದ ಉಳಿತಾಯದ ಕಡೆಗೆ ಗಮನ ಹರಿಸಬೇಕು ಮತ್ತು ವೃಷಭ ರಾಶಿಯವರಿಗೆ ಜುಲೈ ತಿಂಗಳಲ್ಲಿ ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳು ದೊರಕುತ್ತದೆ ಆರೋಗ್ಯದ ಕಡೆಗೆ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ವೃಷಭ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ವೃಷಭ ರಾಶಿಯವರು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವವರು ಜುಲೈ 17ರ ನಂತರ ಹಾಕಬೇಕು ರವಿ 17ರಂದು ಕರ್ಕಾಟಕ ರಾಶಿಗೆ ಹೋಗುತ್ತಾನೆ ಮೂರನೆಯ ಮನೆಯಲ್ಲಿ ಇರುತ್ತಾನೆ ಕೋರ್ಟ್ ಕಚೇರಿಯ ಕೆಲಸ ಕಾರ್ಯಗಳು ಸುಲಭವಾಗಿ ನಡೆಯುತ್ತದೆ ಸಣ್ಣ ಪುಟ್ಟ ತೊಂದರೆಯನ್ನು ರವಿ ಗ್ರಹವು ಬಗೆಹರಿಸುತ್ತದೆ ಕ್ರಮಬದ್ದವಾಗಿ ಇಲ್ಲದ ವಿಚಾರ ಸಹ ಸರಿಯಾದ ಮಾರ್ಗ ಕ್ಕೆ ಬರುತ್ತದೆ ತೃತೀಯ ಸ್ಥಾನದಲ್ಲಿ ಇದ್ದಾಗ ಹೊಳಪನ್ನು ನೀಡುತ್ತಾನೆ ವೃಷಭ ರಾಶಿಯವರಿಗೆ ರವಿ ಯಿಂದಾಗಿ ಧೈರ್ಯ ಸಾಹಸ ಪ್ರವೃತ್ತಿ ಕಂಡು ಬರುತ್ತದೆ

ವೃಷಭ ರಾಶಿಯವರ ಸಾಹಸಕ್ಕೆ ಗೌರವ ಲಭಿಸುತ್ತದೆ .ಒಳ್ಳೆಯ ಅವಕಾಶಗಳು ಸಿಗುತ್ತದೆ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಾರೆ ಕರ್ಮ ಸ್ಥಾನದಲ್ಲಿ ಇರುವ ಶನಿ ಸಹ ಆಶೀರ್ವಾದ ಮಾಡುತ್ತಾನೆ ವಕೀಲರು ಟೀಚರ್ ಗಳಿಗೆ ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿ ತೊಂದರೆಗಳು ಕಂಡು ಬರುತ್ತದೆ ಚಿನ್ನ ಬೆಳ್ಳಿಯ ಮಾರಾಟಗಾರರು ಹಾಗೂ ಷೇರುಮಾರುಕಟ್ಟೆಯಲ್ಲಿ ಕೆಲಸದಲ್ಲಿ ಅಸ್ಥಿರತೆ ಕಂಡು ಬರುತ್ತದೆ ತಕ್ಷಣದ ನಿರ್ಧಾರವನ್ನು ತೆಗೆದುಕೊಂಡು ದುಡುಕ ಬಾರದು ಯಾರನ್ನು ಅತಿಯಾಗಿ ನಂಬಬಾರದು.

ದ್ವಿತೀಯ ಭಾಗದಲ್ಲಿ ರಾಹು ಬೃಹಸ್ಪತಿ ಸಂಧಿ ನಡೆಯುತ್ತಿದೆ ಹಾಗಾಗಿ ಬಹಳ ಎಚ್ಚರಿಕೆಯಿಂದ ಇರಬೇಕು ಹಾಗೂ ಶನಿ ಕೂಡ ವಕ್ರನಾಗಿ ಇರುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು ಮಾತು ಕೊಡುವಾಗ ಮತ್ತು ಕೊಟ್ಟ ಮಾತನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳಬಾರದು ಮೋಸ ವಂಚನೆಗೆ ಒಳಗಾಗದೆ ರಕ್ಷಣೆ ಮಾಡಿಕೊಳ್ಳಬೇಕು ಸುಖದ ಸ್ಥಾನದಲ್ಲಿ 2 ಪರಿವರ್ತನೆಗಳು ಆಗುತ್ತದೆ ಜುಲೈ ತಿಂಗಳ ಆರಂಭದಲ್ಲಿ ಕುಜ ಸುಖದ ಸ್ಥಾನದಲ್ಲಿ ಇರುತ್ತಾನೆ ಇದರಿಂದಾಗಿ ಕಿರಿಕಿರಿ ಸಣ್ಣ ಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ

ಶುಕ್ರ ಗ್ರಹ ಸುಖದ ಸ್ಥಾನದಲ್ಲಿ ಬಂದಾಗ ಸುಖ ಜಾಸ್ತಿ ಆಗುತ್ತದೆ. ಹಣಕಾಸಿನ ಅಭಿವೃದ್ದಿ ಕಂಡು ಬರುತ್ತದೆ ಚಿನ್ನಾಭರಣ ಅಲಂಕಾರಿಕ ವಸ್ತು ಗಿಫ್ಟ್ ಐಟಂ ಗಳ ಮಾರಾಟ ಹಾಗೂ ಮನೆಯ ಅಲಂಕಾರಿಕ ವಸ್ತುಗಳು ಪೀಠೋಪಕರಣ ವ್ಯಾಪಾರಸ್ಥರಿಗೆ ಲಾಭಗಳು ಜಾಸ್ತಿ ಆಗುತ್ತದೆ ಆರೋಗ್ಯದ ವಿಷಯದಲ್ಲಿ ಬಹಳ ಜಾಗೃತವಾಗಿ ಇರಬೇಕು ಜುಲೈ ತಿಂಗಳ ಇಡೀ ಕುಜ ಗ್ರಹ 4ನೆಯ ಸ್ಥಾನ ಅಂದರೆ ಸುಖದ ಸ್ಥಾನದಲ್ಲಿ ಇರುತ್ತದೆ ಬುಧ ಗ್ರಹ ಬುದ್ದಿಯನ್ನು ಕೊಡುತ್ತದೆ ಹಾಗೂ ಚಾಕಚಕ್ಯತೆಯನ್ನು ಬುಧ ಗ್ರಹ ಕೊಡುತ್ತದೆ ಅದೃಷ್ಟವನ್ನು ತರುತ್ತದೆ

ಬುಧ ಗ್ರಹ ಕೆಲವು ಪರಿವರ್ತನೆಯನ್ನು ತರುತ್ತದೆ ಬುಧ ಗ್ರಹ ಸಹ ಜುಲೈ 25ರ ವರೆಗೆ ಸಹ ಕಿರಿಕಿರಿಯನ್ನು ತಂದು ಕೊಡುತ್ತದೆ ಅಡ್ಡಿ ಆತಂಕ ಹಾಗೂ ಶತ್ರುಗಳ ಕಾಟ ಸಹ ಇರುತ್ತದೆ ಬುಧ ಚತುರ್ಥ ಕ್ಕೇ ಬಂದಾಗ ಆತ್ಮ ವಿಶ್ವಾಸ ಜಾಸ್ತಿ ಆಗುತ್ತದೆ ಸಂಪತ್ತನ್ನು ಸಹ ಬುಧ ಗ್ರಹ ಕೊಡುತ್ತಾನೆ ಹೀಗೆ 2023 ಜುಲೈ ತಿಂಗಳಲ್ಲಿ ವೃಷಭ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಹಿಂದಿನ ಹಣಕಾಸಿನ ಸಮಸ್ಯೆಗಳು ದೂರವಾಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಮತ್ತು ಆರೋಗ್ಯದ ಕಡೆಗೆ ಗಮನ ಹರಿಸಬೇಕು .

Leave A Reply

Your email address will not be published.