ಪುನೀತ್ ಹೆಸರು 1000 ವರ್ಷ ಖ್ಯಾತಿ ಇರುವಂತ ಕೆಲಸ ಮಾಡುತ್ತೇನೆ ಎಂದ ತಮಿಳು ನಟ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂಬ ಮುತ್ತು ನಮ್ಮೆಲ್ಲರಿಂದ ದೂರ ಹೋಗಿ 20 ದಿನಗಳೆ ಕಳೆದಿದೆ. ಸಾವಿರಾರು ವರ್ಷಗಳೆ ಕಳೆದರೂ ಅವರ ಹೆಸರು ಅಜರಾಮರ. ಪುನೀತ್ ಅವರ ಸ್ನೇಹಿತ ವಿಶಾಲ್ ಕುಮಾರ್ ಅವರು ಪುನೀತ್ ರಾಜಕುಮಾರ್ ಅವರು ಮಾಡುತ್ತಿರುವ ಕೆಲಸದ ಬಗ್ಗೆ ಕೆಲವು ಮಾತುಗಳನ್ನಾಡಿದ್ದಾರೆ. ವಿಶಾಲ್ ಕುಮಾರ್ ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸ್ಯಾಂಡಲ್​​ವುಡ್​​ ನ ಪವರ್​​ ಸ್ಟಾರ್​​​ ಪುನೀತ್​​ ರಾಜಕುಮಾರ್ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮಗಳೊಂದಿಗೆ ನಟ ವಿಶಾಲ್​​ ಕುಮಾರ್​​​ ಮಾತನಾಡಿದರು. ಪುನೀತ್​​​ ರಾಜಕುಮಾರ್ ಅವರು ನನಗೆ ಒಳ್ಳೆಯ ಸ್ನೇಹಿತ, ಯಾವಾಗಲೂ ಒಳ್ಳೆಯದನ್ನೆ ಮಾತಾಡುತ್ತಿದ್ದರು. ಪುನೀತ್​​ ಹೆಸರು ಇನ್ನೂ 1000 ವರ್ಷ ನೆನಪಿರುವಂತ ಕೆಲಸಗಳನ್ನು ಮಾಡಿದ್ದಾರೆ ಎಂದರು. ನಾನು ಕೊಟ್ಟ ಮಾತಿನಂತೆ ಪುನೀತ್​​ ಕೆಲಸಗಳನ್ನು ಮುಂದುವರಿಸಿಕೊಂಡು ಹೊಗುತ್ತೇನೆ ಎಂದು ಹೇಳಿದರು.

ಪುನೀತ್ ನಮ್ಮನ್ನು ಅಗಲಿದ್ದು‌ ಬೇಸರ ತರಿಸಿದೆ ಅಲ್ಲದೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಪುನೀತ್‌ ನನ್ನ ಮಿತ್ರ ಅವರು ಬಹಳ ಒಳ್ಳೆಯ ಮನುಷ್ಯ. ನನಗೆ ಪುನೀತ್ ರಾಜಕುಮಾರ್ ದೊಡ್ಡ ಅಣ್ಣನಂತೆ. ಅವರು ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ ಎಂದು ಇದೀಗ ಇಡಿ ದೇಶಕ್ಕೆ‌ ಗೊತ್ತಾಗಿದೆ. ಅವರು ನೋಡಿಕೊಳ್ಳುತ್ತಿದ್ದ ಸಂಸ್ಥೆ, ಓದಿಸುತ್ತಿದ್ದ ಮಕ್ಕಳ ಜವಬ್ದಾರಿ ಇದೆ. ಪುನೀತ್ ನನ್ನೊಂದಿಗೆ ಸದಾ ಒಳ್ಳೆಯ ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಪುನೀತ್ ತಾವು ಮಾಡಿದ ಕೆಲಸವನ್ನು ಯಾರಿಗೂ ಹೇಳಲು ಇಷ್ಟಪಡುತ್ತಿರಲಿಲ್ಲ. ಅವರ ಮಾನವೀಯ ಗುಣ, ಕೆಲಸ ಎಲ್ಲರು ಮೆಚ್ಚುವಂತದ್ದು. ಅವರ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.

ಪುನೀತ್ ಅವರು ಅನೇಕ ಜನರಿಗೆ ಸಹಾಯ ಮಾಡಿ ಅದನ್ನು ಎಲ್ಲಿಯೂ ಪ್ರಚಾರ ಮಾಡಿಕೊಳ್ಳದೆ ಮರೆಯಾಗಿ ಬಹುದೂರ ಹೊರಟುಹೋದರು. ಅವರು ತಮ್ಮ ಆತ್ಮತೃಪ್ತಿಗೆ ಮಾಡುತ್ತಿರುವ ಎಲ್ಲಾ ಜನಸೇವಾ ಕೆಲಸಗಳನ್ನು ಅವರ ಪತ್ನಿ ಅಶ್ವಿನಿ ಹಾಗೂ ಅವರ ಮಕ್ಕಳು ಮುಂದುವರೆಸಬೇಕೆಂದು ನಿರ್ಧಾರ ಮಾಡಿದ್ದಾರೆ. ಪುನೀತ್ ಅವರು ಮುಂದಿನ ಜನ್ಮದಲ್ಲಿಯೂ ಕನ್ನಡನಾಡಿನಲ್ಲಿ ಜನಿಸಬೇಕು ಎನ್ನುವುದು ನಮ್ಮೆಲ್ಲರ ಆಶಯ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *