ರಜನೀಕಾಂತ್ ಒಬ್ಬ ಒಳ್ಳೆಯ ನಟ. ಇವರು ತಮ್ಮ ನಟನೆಗಿಂತ ತಮ್ಮ ಸರಳತೆಯಿಂದ ಸೂಪರ್ ಸ್ಟಾರ್ ಆಗಿದ್ದಾರೆ ಎಂದು ಹೇಳಬಹುದು. ಇವರು ಚಿತ್ರರಂಗಕ್ಕೆ ಬರುವ ಮೊದಲು ಬಹಳ ನೋವನ್ನು ಅನುಭವಿಸಿದ್ದಾರೆ. ಅವರ ಇತಿಹಾಸದ ಪುಟಗಳಲ್ಲಿ ಒಂದು ಗುಡಿಸಲು ಮನೆ ಅವರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅವಕಾಶವನ್ನು ಹುಡುಕಿಕೊಂಡು ರಜನೀಕಾಂತ್ ಅವರು ಮದ್ರಾಸ್ ಗೆ ಹೋಗಿದ್ದರು. ಅಲ್ಲಿ ಒಂದು ಬಿಲ್ಡಿಂಗ್ ನಲ್ಲಿ ಸಣ್ಣ ಗುಡಿಸಲನ್ನು ಬಾಡಿಗೆಗೆ ಪಡೆದರು. ಅಲ್ಲಿ ವಾಸ ಮಾಡಲು ಶುರು ಮಾಡಿದರು. ಸಿನೆಮಾದಲ್ಲಿ ನಟಿಸುವ ಅವಕಾಶ ಸಿಗದೇ ಅಲೆದಾಡುತ್ತಿದ್ದರು. ನಂತರ ಸಿನೆಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸ್ವಲ್ಪ ಹಣ ಸಿಗುವ ತನಕ ಆ ಗುಡಿಸಲಿನಲ್ಲಿಯೇ ವಾಸವಾಗಿದ್ದರು. ಹಣ ಸಿಕ್ಕ ಮೇಲೆ ಬೇರೆ ಕಡೆ ಮನೆ ಮಾಡಿದರು.

ಕಾಲಾನಂತರದಲ್ಲಿ ಹೀರೊ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ನಂತರ ಒಂದಷ್ಟು ಹಣ ಬಂದ ಮೇಲೆ ಅವರು ಮೊದಲು ವಾಸವಾಗಿದ್ದ ಗುಡಿಸಲಿನ ಬಿಲ್ಡಿಂಗ್ ನ್ನು ಖರೀದಿ ಮಾಡಿದರು. ಆದರೆ ಬಿಲ್ಡಿಂಗ್ ನ ಮಾಲೀಕ ಅದನ್ನು ಕೊಡಲು ಒಪ್ಪಿಕೊಂಡಿರಲಿಲ್ಲ. ಹಳೆಯ ನೆನಪಿಗಾಗಿ ಗುಡಿಸಲನ್ನು ಖರೀದಿ ಮಾಡಲು ಬಯಸಿದ್ದರು ಎಂದು ಎಲ್ಲರೂ ತಿಳಿದಿದ್ದರು. ಆದರೆ ಅವರ ಆಲೋಚನೆ ತುಂಬಾ ವಿಭಿನ್ನವಾಗಿ ಇತ್ತು. ಅದೇನೆಂದರೆ ತಾನು ಎಷ್ಟೇ ಎತ್ತರಕ್ಕೆ ಬೆಳೆದರೂ ತನಗೆ ಅಹಂಕಾರ ಬರಬಾರದು, ನನ್ನ ಮೂಲವನ್ನು ಮರೆಯಬಾರದು ಎಂದು ಈ ಗುಡಿಸಲನ್ನು ಖರೀದಿ ಮಾಡಲು ಬಂದಿದ್ದರು.

ಆದರೆ ಇದನ್ನು ಖರೀದಿ ಮಾಡಲು ಆಗದೇ ಇದ್ದಾಗ ಅಂತಹ ಗುಡಿಸಲನ್ನು ತಮ್ಮ ಮನೆಯ ಮೇಲೆ ಕಟ್ಟಿಸಿಕೊಂಡಿದ್ದರು. ಹೆಚ್ಚಾಗಿ ಆ ಗುಡಿಸಲಿನಲ್ಲಿಯೇ ಅವರು ಕಾಲ ಕಳೆಯುತ್ತಾರಂತೆ. ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಮೂಲವನ್ನು ಮರೆಯಬಾರದು. ಅಹಂಕಾರ ಬರಬಾರದು. ಇಂತಹ ಸರಳತೆ ನಟರಲ್ಲಿ ಇರುವುದು ಬಹಳ ಕಡಿಮೆ. ಇಂತಹ ಸರಳವಾದ ನಟರು ನಮ್ಮ ಭೂಮಿಯಲ್ಲಿ ಹೆಚ್ಚಾಗಲಿ ಎಂದು ಎಲ್ಲರೂ ಹಾರೈಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!