ಕಾರು ಕೊಳ್ಳಬೇಕು ಎಂಬುದು ಎಲ್ಲರ ಕನಸು. ಬೆಂಗಳೂರಿನಲ್ಲಿ ಕಾರುಕೊಳ್ಳುವವರಿಗೆ ಕುಮಾರ ಸ್ವಾಮಿ ಲೇಔಟ್ ನಲ್ಲಿರುವ ರಾಯಲ್ಸ್ ಕಾರ್ ನಲ್ಲಿ ಯಾವ ಯಾವ ಕಾರುಗಳ ಬೆಲೆ ಎಷ್ಟಿದೆ. ಹಾಗೂ ಯಾವ ಕಾರುಗಳು ಉತ್ತಮವಾಗಿದೆ, ಕಾರುಗಳ ವಾರಂಟಿ ಹಾಗೂ ಲೋನ್ ವಿಷಯಗಳ ಬಗೆಗಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.

ಮೊದಲನೆಯದಾಗಿ ಹ್ಯೂಂಡೈ ಐ20 ಕಾರಿನ ಬಗ್ಗೆ ಮಾಹಿತಿ ನೋಡೋಣ. ಹ್ಯೂಂಡೈ 2015 ರ ಮಾಡೆಲ್ ಆಗಿದೆ. ಇದರಲ್ಲಿ 1.4 ಲೀಟರ್ ಇಂಜಿನ್ ಇದೆ. ಈ ಕಾರು ಮ್ಯಾಗ್ನಾ ಆಪ್ಷನಲ್ ಕಾರು ಆಗಿದೆ. ಒಳ್ಳೆಯ ಬ್ರಾಂಡ್ ನ ಟೈಯರ್ ಹೊಂದಿದೆ. ಲೇದರ್ ಸೀಟ್ ಹೊಂದಿದೆ. ಪವರ್ ವಿಂಡೊ ಹೊಂದಿದೆ. 85 ಸಾವಿರ ರನ್ ಆಗಿದೆ. ಇನ್ಶುರೆನ್ಸ್‌ ಲಾಪ್ಸ್ ಆಗಿದೆ. ಈ ಕಾರಿಗೆ ಬೇರೆ ಯಾವುದೆ ಸೌಲಭ್ಯವನ್ನು ಮತ್ತೆ ಹಾಕಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಡಿಸೈಲ್ ಇಂಜಿನ್ ಹೊಂದಿದ್ದು, ಹೈವೆನಲ್ಲಿ 22 ಮೈಲೆಜ್ ಕೊಟ್ಟರೆ, ಸಿಟಿಯಲ್ಲಿ 18 ಮೈಲೆಜ್ ಕೊಡುತ್ತದೆ. ಕಾರಿನ ಕಂಡಿಷನ್ ಉತ್ತಮವಾಗಿದೆ. ಸರ್ವಿಸ್ ಎಲ್ಲವೂ ಮುಗಿದ ಈ ಕಾರಿಗೆ 4.5 ಲಕ್ಷ ಇದೆ. 4.3 ಲಕ್ಷಕ್ಕೆ ಕೊನೆಯ ಬೆಲೆ ಹೇಳುತ್ತಾರೆ. ಎರಡನೆಯದಾಗಿ ಪೋಲೊ ಕಾರಿನ ಮಾಹಿತಿ ತಿಳಿಯೋಣ. ಪೊಲೊ 2010 ಮಾಡೆಲ್ ಆಗಿದ್ದು ಸೆಕೆಂಡ್ ಓನರ್ ಕಾರಾಗಿದೆ. ಹೈಲೆನ್ ಕಾರಾಗಿದ್ದು, ಎರಡು ಏರ್ ಬ್ಯಾಗ್ ಇರುತ್ತದೆ. ಆ್ಯಂಡ್ರಾಯಿಡ್ ಸಿಸ್ಟಮ್ ಇದ್ದು, ಲೆದರ್ ಸೀಟ್ ಹೊಂದಿದೆ. 75 ಸಾವಿರ ಓಡಿದೆ. ಇನ್ಶುರೆನ್ಸ್‌ ಲಾಪ್ಸ್ ಆಗಿದೆ. ಸರ್ವಿಸ್ ಎಲ್ಲವು ಆಗಿದೆ. ಇನ್ಶುರೆನ್ಸ್‌ ಅವರೆ ಮಾಡಿಕೊಡುತ್ತಾರೆ. 1.2 ಲೀಟರ್ ಇಂಜಿನ್ ಹೊಂದಿದ್ದು, ಪೆಟ್ರೋಲ್ ಎಂಜಿನ್ ಆಗಿದೆ. ಹೈವೆಯಲ್ಲಿ 18 ಮೈಲೆಜ್ ಸಿಕ್ಕರೆ, ಸಿಟಿಯಲ್ಲಿ 14 ಮೈಲೆಜ್ ಸಿಗುತ್ತದೆ. ಈ ಪೋಲೊ ಕಾರಿನ ಬೆಲೆ 3.5 ಲಕ್ಷ ಇದೆ. 3.3 ಲಕ್ಷಕ್ಕೆ ಕೊನೆಯ ಬೆಲೆ ಹೇಳುತ್ತಾರೆ.

ಮೂರನೆಯದಾಗಿ ಹ್ಯೂಂಡೈ ವರ್ಣ ಕಾರು. ಇದು 2008 ಮಾಡೆಲ್ ಆಗಿದ್ದು, ಸೆಕೆಂಡ್ ಓನರ್ ಕಾರು. ಈ ಕಾರು 1.6 ಎಂಜಿನ್ ಹೊಂದಿದೆ. ಪವರ್ ವಿಂಡೊ ಹೊಂದಿದೆ. ಆಟೊ ಎಸಿ ಕೂಡ ಸಿಗುತ್ತದೆ. ನಾಲ್ಕು ಅಲೈಸ್ ಇರುತ್ತದೆ. ಪವರ್ ಸ್ಟೇರಿಂಗ್ ಹೊಂದಿದೆ. 1ಲಕ್ಷದ 30 ಸಾವಿರ ಓಡಿದೆ. ಇನ್ಶುರೆನ್ಸ್‌ ಚಾಲ್ತಿಯಲ್ಲಿದೆ ಕಾರಿಗೆ. ಡಿಸೈಲ್ ಎಂಜಿನ್ ಹೊಂದಿದ್ದು, ಹೈವೆಯಲ್ಲಿ 24ಮೈಲೆಜ್ ಹಾಗೂ ಸಿಟಿಯಲ್ಲಿ 20 ಮೈಲೆಜ್ ಕೊಡುತ್ತದೆ. ಸರ್ವಿಸ್ ಆಗಿದೆ. ಈ ಕಾರಿನ ಬೆಲೆ 2.85 ಲಕ್ಷ ಇದೆ. ಕೊನೆಯ ಬೆಲೆ 2.60 ಲಕ್ಷ ಹೇಳುತ್ತಾರೆ. ನಾಲ್ಕನೆಯದಾಗಿ ಪೋಲೊ ಜಿಟಿ ಕಾರು. ಈ ಕಾರು ಒಂದು ರೀತಿಯ ಸ್ಪೋರ್ಟ್ಸ್ ಕಾರಾಗಿದೆ. 1.6 ಲೀಟರ್ ಡಿಸೈಲ್ ಎಂಜಿನ್ ಹೊಂದಿದೆ. ಪೋಲೊ ಹೈಲೆನ್ ಕಾರಾಗಿದೆ. ಬೇಗ ಪಿಕಪ್ ಬೇಕು ಎನ್ನುವವರು ಹಾಗೂ ಕಾರ್ ರೇಸ್ ನ ಕ್ರೇಜ್ ಇರುವವರಿಗೆ ಹೇಳಿ ಮಾಡಿಸಿದಂತ ಕಾರಿದು. ಸ್ಟೇರಿಂಗ್ ಕಂಟ್ರೋಲ್‌ ಇದೆ. ಲೇದರ್ ಸೀಟ್ ಹೊಂದಿದೆ. ಡಬಲ್ ಏರ್ ಬ್ಯಾಗ್ ಹೊಂದಿದೆ. ಕೀ ಉಪಯೋಗಿಸಿ ಕಾರಿನ ಗ್ಲಾಸ್ ಏರಿಸಿ, ಇಳಿಸಿ ಮಾಡಬಹುದು. ಎಲ್ಲ ತರಹದ ಸೌಲಭ್ಯಗಳನ್ನು ಈ ಕಾರು ಹೊಂದಿದೆ. ಈ ಕಾರು ಹೈವೆಯಲ್ಲಿ 20 ಮೈಲೆಜ್ ಜೊತೆಗೆ ಸಿಟಿಯಲ್ಲಿ 17 ಮೈಲೆಜ್ ಕೊಡುತ್ತದೆ. ಇನ್ಶುರೆನ್ಸ್‌ ಚಾಲ್ತಿಯಲ್ಲಿದೆ . ಟೈಯರ್ ಕೂಡ ಒಳ್ಳೆಯ ಬ್ರಾಂಡ್ ಹೊಂದಿದೆ. ಈ ಕಾರಿನ ಬೆಲೆ 6.5 ಇದೆ, 6.3 ಕೊನೆಯ ಬೆಲೆ ಹೇಳುತ್ತಾರೆ.

ಐದನೆಯದಾಗಿ ಬಿ.ಎಮ್‌.ಡಬ್ಲ್ಯೂ ಕಾರು. ಬಿ.ಎಂ.ಡಬ್ಲ್ಯೂ 320ಡಿ ಕಾರು ಟಾಪ್ ಎಡಿಷನ್, 2008 ಮಾಡಲ್ ಕಾರಾಗಿದೆ. ಆಟೋ ಎಸಿ, ಸನ್ ರೂಫ್ ಹೊಂದಿದೆ. ಬಿ.ಎಂ.ಡಬ್ಲ್ಯೂ ಅವರ ಡಿಸ್ ಪ್ಲೇ ಕಾರಿನ ಒಳಗಡೆ ಸಿಗುತ್ತದೆ. ಸೀಟ್ ಅಡ್ಜಸ್ಟ್ ಮಾಡುವಂತ ಸೌಲಭ್ಯ ಇದೆ. ಏರ್ ಬ್ಯಾಗ್ ಎಂಟು ಇರುತ್ತದೆ. ಡಿಕ್ಕಿ ಆಟೋಮೆಟಿಕ್ ಓಪನ್ ಸೌಲಭ್ಯ ಇದೆ. ಹೈವೆಯಲ್ಲಿ 18 ಮೈಲೆಜ್ ಕೊಡುತ್ತದೆ. ಸಿಟಿಯಲ್ಲಿ 12 ಮೈಲೆಜ್ ಸಿಗುತ್ತದೆ. ಡಿಸೇಲ್ 2 ಲೀಟರ್ ಎಂಜಿನ್ ಆಗಿದೆ. 1,30,000 ಓಡಿದೆ. ಶೋರೂಮ್ ಬೆಲೆ 45 ಲಕ್ಷ ಇದೆ. ಥರ್ಡ್ ಓನರ್ ಕಾರು ಇದಾಗಿದೆ. ಈ ಕಾರಿನ ಬೆಲೆ 6.5 ಇದೆ. ಕೊನೆಯ ಬೆಲೆ 6.3 ಕೊಡುತ್ತಾರೆ. ಕೊನೆಯದಾಗಿ ಇನೋವಾ 2.5 ಜಿ ಎಡಿಷನ್. 2007 ಮಾಡೆಲ್ ಕಾರು ಇದಾಗಿದೆ. ಸೆಕೆಂಡ್ ಓನರ್ ಕಾರಾಗಿದ್ದು, 1,40,000 ಓಡಿದೆ. ಕಾರು ಸರ್ವಿಸ್ ಆಗಿದೆ. ಈ ಕಾರಿನ ಬೆಲೆ 5.10 ಇದೆ. ಕೊನೆಯ ಬೆಲೆ 4.7 ಗೆ ಕೊಡುತ್ತಾರೆ. ಇನ್ನೂ ಲೋನ್ ವಿಷಯದ ಬಗ್ಗೆ ತಿಳಿಯೋಣ. ರಾಯಲ್ ಕಾರ್ಸ ನಲ್ಲಿ ಲೋನ್ ಸೌಲಭ್ಯ ಇದೆ. ಹತ್ತು ಬ್ಯಾಂಕ್ ಗಳೊಂದಿಗೆ ಟೈ ಅಪ್ ಮಾಡಿಕೊಂಡಿದ್ದಾರೆ. 11 ಮಾಡೆಲ್ ಮೇಲೆ ಲೋನ್ ಕೊಡುತ್ತಾರೆ. ಗೇರ್ ಬಾಕ್ಸ್ ಮತ್ತು ಎಂಜಿನ್ ಮೇಲೆ ಒಂದು ವರ್ಷದ ವಾರಂಟಿ ಸಿಗುತ್ತದೆ.

ರಾಯಲ್ ಕಾರ್ ನವರು ಕಮಿಷನ್ ತೆಗೆದುಕೊಳ್ಳುವುದಿಲ್ಲ. ಒಳ್ಳೆಯ ರೀತಿಯ ಗಾಡಿಗಳನ್ನು ಮಾರುತ್ತಾರೆ. ಅದರೊಂದಿಗೆ ಯಾವುದೆ ಕಾರಿಗಾದರೂ ರಬ್ಬಿಂಗ್ ಹಾಗೂ ಪಾಲಿಶ್ ಉಚಿತವಾಗಿ ಮಾಡಿಕೊಡುತ್ತಾರೆ. ಈ ಮೇಲಿನ ಕಾರುಗಳು ಇವರ ಸ್ವಂತದ್ದಾಗಿರುತ್ತದೆ. ಜೊತೆಗೆ ಬೇರೆ ಕಸ್ಟಮರ್ ಗಳ ಕಾರನ್ನು ಮಾರಿಸಿ ಕೊಡುತ್ತಾರೆ. ಕಾರಿನ ಮಾಹಿತಿ ಇಷ್ಟವಾದಲ್ಲಿ ಖರೀದಿ ಮಾಡಬಹುದು.

Leave a Reply

Your email address will not be published. Required fields are marked *