ಕನ್ನಡ ಚಿತ್ರರಂಗದಲ್ಲಿ, ಕನ್ನಡ ಚಿತ್ರರಂಗದಿಂದ ಬೇರೆ ಭಾಷೆಯಲ್ಲಿ ನಟಿಸಿ ಹೆಸರು ಗಳಿಸಿದವರು ಇದ್ದಾರೆ. ಹಾಗೆಯೆ ಬೇರೆ ಭಾಷೆಯ ಚಿತ್ರರಂಗದಿಂದ ಬಂದು ಇಲ್ಲಿ ಹೆಸರು ಮಾಡಿದವರು ಇದ್ದಾರೆ. ಹೀಗೆ ಮಲಯಾಳಿ ಚಿತ್ರರಂಗದಿಂದ ಬಂದ ನಟಿ ರಾಧಾ ಅವರ ಮಗಳು ಕೂಡ ದೊಡ್ಡ ನಟಿ. ಆ ನಟಿ ರಾಧಾ ಅವರ ಮಗಳು ಎಂದು ಸುಮಾರು ಜನರಿಗೆ ಗೊತ್ತಿಲ್ಲ. ಅವರು ಯಾರು ಎಂಬುದನ್ನು ತಿಳಿಯೋಣ.
ಕನ್ನಡದಲ್ಲಿ ರವಿ ಚಂದ್ರನ್ ಹಾಗೂ ವಿಷ್ಣುವರ್ಧನ್ ಅಂತ ದಿಗ್ಗಜರ ಜೊತೆಗೆ ನಟಿಸಿದ್ದಾರೆ ನಟಿ ರಾಧಾ. ಸೌಭಾಗ್ಯಲಕ್ಷ್ಮಿ , ಉಷಾ, ಸಾವಿರ ಸು ಳ್ಳು ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ ಮಾಡಿದರೂ ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಮೂಲತಃ ಮಲಯಾಳಿ ಆಗಿದ್ದು, ತೆಲುಗು, ತಮಿಳು, ಕನ್ನಡ ಹಾಗೂ ಮಲೆಯಾಳಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಚಿತ್ರರಂಗದಲ್ಲಿ ಹೆಸರು ತಂದು ಕೊಟ್ಟ ಸಿನೆಮಾ ಎಂದರೆ ರಾಧಾ ಹಾಗೂ ವಿಷ್ಣುವರ್ಧನ್ ಅಭಿನಯದ ಸೌಭಾಗ್ಯಲಕ್ಷ್ಮಿ ಸಿನಿಮಾ. ಉದಯಾಚಂದ್ರಿಕಾ ಎಂಬುದು ರಾಧಾ ಅವರ ಮೊದಲ ಹೆಸರು. ರಾಧಾ ಎಂಬುದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ಇಟ್ಟುಕೊಂಡ ಹೆಸರು. ರಾಧಾ ಅವರ ಮಗಳೂ ಕೂಡಾ ಹೆಸರಾಂತ ನಟಿ.
ನಟಿ ರಾಧಾ 1991 ರಲ್ಲಿ ಉದ್ಯಮಿ ರಾಜಶೇಖರನ್ ನಾಯರ್ ಅವರನ್ನು ಮದುವೆಯಾದರು. ನಟಿ ರಾಧಾ ದಂಪತಿಗಳಿಗೆ ಮೂರು ಮಕ್ಕಳು. ದೊಡ್ಡವಳು ಕಾರ್ತಿಕಾ ನಾಯರ್, ಎರಡನೆಯವಳು ತುಳಸಿ ನಾಯರ್ ಹಾಗೂ ಮಗ ವಿಘ್ನೇಶ್ ನಾಯರ್. ನಟಿ ರಾಧಾ ಅಕ್ಕ ಅಂಬಿಕಾ ಕೂಡಾ ಖ್ಯಾತ ನಟಿಗಳಲ್ಲೊಬ್ಬರು. ಇದೀಗ ರಾಧಾ ಅವರ ಪ್ರಥಮ ಪುತ್ರಿ ಕಾರ್ತಿಕಾ ನಾಯರ್ ಅವರು ಚಿತ್ರರಂಗದಲ್ಲಿ ನಟಿಸಲು ಪ್ರಾರಂಭಿಸಿದ್ದಾರೆ. ಕಾರ್ತಿಕಾ ನಾಯರ್ ಮೊದಲು ತೆಲುಗಿನ ಜೋಶ್ ನಟಿಸಿ ಸಿನೆಮಾ ರಂಗಕ್ಕೆ ಪ್ರವೇಶ ಮಾಡಿದರು. ಕನ್ನಡದಲ್ಲಿ ಬೃಂದಾವನ ಚಿತ್ರದಲ್ಲಿ ದರ್ಶನ್ ಜೊತೆ ಕಾರ್ತಿಕಾ ನಾಯರ್ ಅಭಿನಯಿಸಿದ್ದಾರೆ. ಕಾರ್ತಿಕಾ ನಾಯರ್ ನಟಿ ರಾಧಾ ಅವರ ಪುತ್ರಿ ಎಂದು ಕೆಲವು ಜನರಿಗೆ ಗೊತ್ತಿಲ್ಲ. ಕಾರ್ತಿಕಾ ನಾಯರ್ ಇದೀಗ ಚಿತ್ರರಂಗದಿಂದ ಕೊಂಚ ದೂರ ಉಳಿದು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಿ ಚಿತ್ರರಂಗದಲ್ಲಿ ನಟಿಸಿದ್ದಾರೆ.
ನಟಿ ರಾಧಾ ಈಗ ಚೆನ್ನೈನಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ರಾಧಾ ಅವರ ಯಾವ ಮಕ್ಕಳು ಮತ್ತೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ ತಿಳಿದಿಲ್ಲ. ಆದರೆ ಕಾರ್ತಿಕಾ ನಾಯರ್ ಅವರು ಮಾತ್ರ ಒಳ್ಳೊಳ್ಳೆ ಚಿತ್ರಗಳ ಮೂಲಕ ಹೆಸರು ಪಡೆದಿದ್ದಾರೆ.