ನಿಮ್ಮ ತಾಲ್ಲೂಕ್ ಪಂಚಾಯ್ತಿಯ ಕೆಲಸಗಳೇನು? ನಿಮಗಿದು ಗೊತ್ತಿರಲಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪಂಚಾಯತಿಗಳು ಗ್ರಾಮ ತಾಲೂಕು ಹಾಗೂ ಜಿಲ್ಲೆಗಳಲ್ಲಿ ತನ್ನದೇ ಆದ ಕಾರ್ಯ ವೈಖರಿಯನ್ನು ಮಾಡುತ್ತದೆ ಜಿಲ್ಲೆ ತಾಲ್ಲೂಕು ಪಟ್ಟಣ ಮತ್ತು ಹಳ್ಳಿಗಳಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ನಡೆಸಲು ಚುನಾಯಿತ ಸ್ವರಾಜ್ಯ ಸಂಸ್ಥೆಗಳು ಅಸ್ತಿತ್ವದಲ್ಲಿ ಬಂದಿರುತ್ತವೆ ಅಂತೇಯೆ ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯತ್ ರಾಜ್ಯವೆಂಬ ಚುನಾಯಿತ ಸಂಸ್ಥೆ ಅಸ್ತಿತ್ವ ಪಡೆಯಿತು ಪಂಚಾಯತ್ ರಾಜ್ಯವು ಸ್ವತಂತ್ರ್ಯ ಭಾರತದ ಒಂದು ಪಹತ್ವದ ರಾಜಕೀಯ ಶೋಧನೆ ಎನ್ನಬಹುದು

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ದಿಟ್ಟ ಮತ್ತು ಕ್ರಾಂತಿಕಾರಿ ಹೆಜ್ಜೆ ಗ್ರಾಮದ ಸರ್ವತೋಮುಖ ಅಭಿವೃದ್ದಿ ಗ್ರಾಮ ಮಟ್ಟದಿಂದ ಆಗಬೇಕು ರಾಜ್ಯದ ರಾಜಧಾನಿಯಿಂದಲ್ಲ ಎಂಬ ಸತ್ಯವನ್ನು ಸ್ವತಂತ್ರ್ಯ ಪೂರ್ವದಲ್ಲಿಯೆ ಗಾಂಧೀಜಿಯವರು ಕಂಡಿದ್ದರು.ನಾವು ಈ ಲೇಖನದ ಮೂಲಕ ತಾಲೂಕು ಪಂಚಾಯತಿಯ ಕಾರ್ಯಗಳ ಬಗ್ಗೆ ತಿಳಿದುಕೊಳ್ಳೋಣ.

ಕರ್ನಾಟಕದಲ್ಲಿ ಮೂರು ಹಂತದಲ್ಲಿ ಪಂಚಾಯತಿ ಇರುತ್ತದೆ ಅದರಲ್ಲಿ ಗ್ರಾಮ ಪಂಚಾಯತಿ ವ್ಯವಸ್ಥೆ ಹಾಗೂ ತಾಲೂಕು ಪಂಚಾಯತಿ ವ್ಯವಸ್ಥೆ ಹಾಗೂ ಜಿಲ್ಲಾ ಪಂಚಾಯತಿ ವ್ಯವಸ್ಥೆಗಳು ಇರುತ್ತದೆ ಕೆಲವು ಜನರಿಗೆ ತಾಲೂಕು ಪಂಚಾಯತಿಯ ಬಗ್ಗೆ ಕಾರ್ಯ ವಿಧಾನದ ಮೂಲಕ ಗೊತ್ತಿರುವುದಿಲ್ಲ ಒಂದು ನಗರದಲ್ಲಿ ಹತ್ತು ಸಾವಿರ ಜನಸಂಖ್ಯೆಗೆ ಒಂದು ತಾಲೂಕು ಪಂಚಾಯತ್ ಇರುತ್ತದೆ.

ತಾಲೂಕು ಪಂಚಾಯತ್ ರಚನೆ ಆದ ಬಳಿಕ ಆಡಳಿತ ಕಚೇರಿ ಇರುತ್ತದೆ ಸರ್ಕಾರವು ಕೆ ಎ ಎಸ್ಆದ ಅಧಿಕಾರಿಗಳನ್ನೂ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಮಾಡುತ್ತದೆ ತಾಲೂಕಿನಲ್ಲಿ ಉಂಟಾದ ಪ್ರಕೃತಿ ವಿಕೋಪ ಸಮಯದಲ್ಲಿ ತಕ್ಷಣ ಪರಿಹಾರ ಇಡೀ ಗ್ರಾಮಗಳು ತಾಂಡಾಗಳು ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ ಎಲ್ಲ ಗ್ರಾಮಗಳ ನೀರಿನ ಸಮಸ್ಯೆಯನ್ನು ಸಂಭದಪಟ್ಟ ಪ್ರದೇಶಕ್ಕೆ ಸೌಲಭ್ಯ ಒದಗಿಸುತ್ತದೆ.

ಅಂದರೆ ಲಭ್ಯ ಇರುವ ಅನುದಾನದಲ್ಲಿ ಬಾವಿ ತೋಡಿಸುವುದು ಪೈಪ್ ಲೈನ್ ಮಾಡುವುದು ಹಾಗೂ ಕೊಳವೆ ಬಾವಿಯನ್ನು ತಾಲೂಕು ಪಂಚಾಯತ್ ಮಾಡುತ್ತದೆ ಕೇಂದ್ರ ಮತ್ತು ರಾಜ್ಯ ಪಂಚಾಯತಿಗಳ ಅನುದಾನವನ್ನು ಪ್ರತಿ ಗ್ರಾಮ ಪಂಚಾಯತಿಗಳಿಗೆ ಹಂಚಿಕೆ ಮಾಡುತ್ತಾರೆ ಸಂಬಂಧಪಟ್ಟ ಪ್ರತಿ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸೂಕ್ತ ಜಾಗದ ವುವಸ್ಥೆ ಮಾಡುವುದು ಸಹ ತಾಲೂಕು ಪಂಚಾಯತಿ ವ್ಯಾಪ್ತಿಗೆ ಬರುತ್ತದೆ ತನ್ನ ವ್ಯಾಪ್ತಿ ಪ್ರದೇಶಕ್ಕೆ ಬರುವ ಸರ್ಕಾರಿ ಕಟ್ಟಡಗಳನ್ನು ನಿರ್ವಹಣೆ ಮಾಡುವುದು ಸಹ ತಾಲೂಕು ಪಂಚಾಯತ್ ವ್ಯಾಪ್ತಿಗೆ ಬರುತ್ತದೆ

ತನ್ನ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತಿಗಳಲ್ಲಿ ಶೌಚಾಲಯ ನಿರ್ಮಿಸುವುದು ಸಹ ತಾಲೂಕು ಪಂಚಾಯತಿಗಳ ಹೊಣೆಗಾರಿಕೆ ಆಗಿದೆ ಹೀಗೆ ತಾಲೂಕು ಪಂಚಾಯತಿ ಗ್ರಾಮಗಳ ಏಳಿಗೆಯನ್ನು ಬಯಸುತ್ತದೆ ಗ್ರಾಮಗಳ ಏಳಿಗೆ ಜೊತೆಗೆ ಸರ್ವತೋಮುಖ ಏಳಿಗೆಯನ್ನು ಸಾಧಿಸಬಹುದು.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *