ನಮ್ಮ ಭಾರತ ದೇಶದಲ್ಲಿ ಒಬ್ಬ ವ್ಯಕ್ತಿ ಎಂಎಲ್ ಎ ಆಗುತ್ತಾರೆ ಎಂದರೆ ಅದು ಸುಲಭದ ಮಾತಲ್ಲ. ಅದಕ್ಕೆ ಕೋಟಿಗಟ್ಟಲೆ ಹಣ ಬೇಕು. ಒಂದು ಬಾರಿ ಎಂಎಲ್ ಎ ಆದರೆ ಸಾಕು ತಮ್ಮ ಮೊಮ್ಮಕ್ಕಳು ಬದುಕುವಷ್ಟು ಹಣ ಮಾಡುತ್ತಾರೆ ರಾಜಕಾರಣಿಗಳು.ಅಷ್ಟೇ ಅಲ್ಲದೆ ತನ್ನ ನಂತರ ತನ್ನ ಮನೆಯವರೇ ರಾಜಕಾರಣಿ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ವ್ಯಕ್ತಿ 5ಬಾರಿ ಎಂಎಲ್ ಎ ಆದರೂ ಹೇಗೆ ಬದುಕುತ್ತಿದ್ದಾರೆ ಗೊತ್ತಾ? ಇಲ್ಲಿ ನಾವು ಅಂತಹ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಯೋಣ.
ಈ ವ್ಯಕ್ತಿಯ ಹೆಸರು ಮುಮ್ಮಡಿ ನರಸಯ್ಯ. ತೆಲಂಗಾಣದ ಕಮ್ಮಮ್ ಜಿಲ್ಲೆಯ ಒಂದು ಕ್ಷೇತ್ರದಲ್ಲಿ MLA ಆಗಿ ಗೆದ್ದು ಸೇವೆ ಸಲ್ಲಿಸಿದ ವ್ಯಕ್ತಿ. ಎಂಎಲ್ಎ ಆಗಿದ್ದಾಗ ಕೋಟಿಗಟ್ಟಲೆ ಹಣ ಸಂಪಾದಿಸುವ ಅವಕಾಶ ಇದ್ದರೂ ನನಗೆ ಹಣ ಬೇಡ ಜನರ ಪ್ರೀತಿ ಬೇಕು ಎಂದು 25ವರ್ಷ MLA ಆಗಿದ್ದರೂ ಒಂದು ರೂಪಾಯಿಯನ್ನೂ ಸಹ ಕೆಟ್ಟ ರೀತಿಯಲ್ಲಿ ಸಂಪಾದನೆ ಮಾಡಿದವರಲ್ಲ.
ಈಗಲೂ ಅದೇ ಹಳೇಮನೆ, ಅದೇ ಸೈಕಲ್ ಹಾಗೂ ಎಲ್ಲಾದರೂ ಹೋಗಬೇಕಾದರೆ ಬಸ್ಟಾಂಡ್ ನಲ್ಲಿ ನಿಂತು ಬಸ್ ಹತ್ತುತ್ತಾರೆ. ಒಂದು ದಿನ ಸೈಕಲ್ ತೆಗೆದುಕೊಂಡು ಹೋಗುವಾಗ ಹಿಂದೆ ಬಂದ ಒಬ್ಬ ಬೈಕ್ ಸವಾರ ಇವರ ಬಗ್ಗೆ ತಿಳಿಯದೇ” ಏ ಮುದುಕ ಪಕ್ಕಕ್ಕೆ ಸರಿ” ಎಂದ.ಒಂದು ಚೂರು ಕೋಪ ಮಾಡಿಕೊಳ್ಳದೆ ವಿನಮ್ರತವಾಗಿ “ಆಯಿತು ಹೋಗು ತಮ್ಮ” ಎಂದು ಹೇಳಿದರು ಈ ನರಸಯ್ಯ.
ಹೀಗೆ ಸಾಮಾನ್ಯರಂತೆ ಬದುಕುತ್ತಿದ್ದಾರೆ ಇವರು.ನಮ್ಮ ಎಲ್ಲಾ ನಾಯಕರು ಹೀಗೆ ಇದ್ದಿದ್ದರೆ ಎಷ್ಟು ಚಂದ ಇರುತ್ತಿತ್ತು.ಇಂತಹವರ ಬಗ್ಗೆ ನಾವು ಮಾತನಾಡುತ್ತೇವೆಯೇ ಹೊರತು ಇವರ ಆದರ್ಶಗಳನ್ನು ಅನುಸರಿಸುವುದಿಲ್ಲ. ಆದರ್ಶವಾಗಿ ತೆಗೆದುಕೊಂಡಿದ್ದೆ ಆದಲ್ಲಿ ನಮ್ಮ ದೇಶ ಹೀಗೆ ಇರುತ್ತಿರಲಿಲ್ಲ. ದೇಶಕ್ಕಾಗಿ ಹೋರಾಡುವವರ ಸಂಖ್ಯೆ ಕಡಿಮೆ ಆಗಿದೆ.ತಮ್ಮ ಸ್ವಾರ್ಥಕ್ಕಾಗಿ ಬದುಕುವವರ ಸಂಖ್ಯೆ ಹೆಚ್ಚಾಗಿದೆ. ಇವರ ವ್ಯಕ್ತಿತ್ವ ಎಲ್ಲಾ ರಾಜಕಾರಣಿಗಳು ಮತ್ತು ನಾಯಕರಿಗೆ ಸ್ಫೂರ್ತಿ ಆಗಿದೆ.