ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಹೆಂಡತಿಯ ಮೇಲೆ ಅಗಾಧ ಪ್ರೀತಿ ಇರುತ್ತದೆ ಪ್ರೀತಿಯ ಸಂಕೇತವಾಗಿ ಉಡುಗೊರೆಯನ್ನು ಕೊಡಲಾಗುತ್ತದೆ. ಇತಿಹಾಸದಲ್ಲಿ ನೋಡಿದಂತೆ ಷಹಜಹಾನ್ ದೊರೆಯು ತನ್ನ ಪ್ರೀತಿಯ ಹೆಂಡತಿಗೆ ತಾಜಮಹಲ್ ಅನ್ನು ನಿರ್ಮಿಸಿದನು. ಅದೆ ರೀತಿ ತಾಜಮಹಲ್ ನಂತೆ ಕಾಣುವ ಸುಂದರ ಮನೆಯನ್ನು ತನ್ನ ಹೆಂಡತಿಗೆ ಉಡುಗೊರೆಯಾಗಿ ನೀಡಿರುವುದನ್ನು ಮಧ್ಯಪ್ರದೇಶದಲ್ಲಿ ನೋಡಬಹುದು. ಹಾಗಾದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ವ್ಯಕ್ತಿಯೊಬ್ಬರು ತನ್ನ ಪತ್ನಿ ಮೇಲಿನ ಪ್ರೀತಿಗೆ ತಾಜ್‍ಮಹಲ್ ರೀತಿಯಂತೆ ಮನೆಯನ್ನು ಕಟ್ಟಿಸಿ ಗಿಫ್ಟ್ ನೀಡಿದ್ದಾರೆ. ಷಹಜಹಾನ್ ತನ್ನ ಪ್ರೀತಿಯ ಮಡದಿ ಮುಮ್ತಾಜ್ ನಿಧನದ ನಂತರ ಪತ್ನಿ ಮೇಲಿನ ಪ್ರೀತಿಯ ಸಂಕೇತವಾಗಿ ಆಗ್ರಾದಲ್ಲಿ ತಾಜ್‍ಮಹಲ್ ಕಟ್ಟಿಸಿ ಉಡುಗೊರೆಯಾಗಿ ನೀಡಿದ ಕಥೆ ಎಲ್ಲರಿಗೂ ಗೊತ್ತಿದೆ. ಇದೆ ರೀತಿ ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ಬೆಲೆಬಾಳುವ ಮನೆಯನ್ನು ನಿರ್ಮಿಸಿ ಆನಂದ್ ಚೋಕ್ಸೆ ಅವರು ತಮ್ಮ ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಆನಂದ್ ಚೋಕ್ಸೆ ಅವರು ತಾಜ್ ಮಹಲ್ ಪ್ರತಿರೂಪದಂತೆ 4 ಬೆಡ್ ರೂಮ್‍ಗಳಿರುವ ಮನೆ ನಿರ್ಮಿಸಲು ಮೂರು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ.
ಮನೆ ಕಟ್ಟುವ ವೇಳೆ ಇಂಜಿನಿಯರ್ ಬಹಳ ಶ್ರಮಪಟ್ಟಿದ್ದಾರೆ, ಅವರು ತಾಜ್‍ಮಹಲ್ ಕುರಿತಂತೆ ಕೂಲಂಕುಷವಾಗಿ ಅಧ್ಯಯನ ನಡೆಸಿ, ಮನೆಯೊಳಗೆ ಕೆತ್ತನೆ ಮಾಡಲು ಬಂಗಾಳ ಮತ್ತು ಇಂದೋರ್‌ನಿಂದ ಕಲಾವಿದರನ್ನು ಕರೆಸಿದ್ದಾರೆ. ಈ ಮನೆಯ ಮೇಲಿರುವ ಗುಮ್ಮಟ 29 ಅಡಿ ಎತ್ತರವಿದೆ ಅಲ್ಲದೆ ಇದು ತಾಜ್ ಮಹಲ್ ರೀತಿ ಗೋಪುರ ಹೊಂದಿದೆ ಮತ್ತು ಮನೆಯ ನೆಲವನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಲಾಗಿದ್ದು, ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ.
ಈ ಮನೆಯಲ್ಲಿ ಒಂದು ದೊಡ್ಡ ಹಾಲ್, ಕೆಳಗೆ 2 ಬೆಡ್ ರೂಮ್, ಮೇಲಿನ ಮಹಡಿಯಲ್ಲಿ 2 ಬೆಡ್ ರೂಮ್, ಗ್ರಂಥಾಲಯ ಮತ್ತು ಧ್ಯಾನ ಕೊಠಡಿಯನ್ನು ನಿರ್ಮಿಸಲಾಗಿದೆ. ಅಷ್ಟೆ ಅಲ್ಲದೆ ಮನೆಯ ಒಳಗೂ, ಹೊರಗೂ ಲೈಟಿಂಗ್ಸ್ ಅಳವಡಿಸಲಾಗಿದೆ. ನಿಜವಾದ ತಾಜ್ ಮಹಲ್ ನಂತೆಯೆ ಈ ಮನೆಯೂ ಕತ್ತಲಲ್ಲಿ ಪಳ ಪಳ ಹೊಳೆಯುತ್ತದೆ. ತಾಜ್ ಮಹಲ್ ನಂತೆ ಇರುವ ಈ ಮನೆ ನೋಡಲು ಸುಂದರವಾಗಿದೆ. ಈ ಮನೆಯಲ್ಲಿ ಆನಂದ ಚೋಕ್ಸೆ ಅವರ ಪ್ರೀತಿ ಇದೆ. ಆನಂದ್ ಅವರ ಉಡುಗೊರೆಯಿಂದ ಅವರ ಹೆಂಡತಿಗೆ ಖುಷಿಯಾಗುತ್ತದೆ.