ಕೊಪ್ಪಳ ಜಿಲ್ಲೆ ಕುಷ್ಠಗಿಯಲ್ಲಿ ಎರಡು ವರ್ಷಗಳ ಹಿಂದೆ ಸರ್ಕಾರಿ ಕಚೇರಿಯಲ್ಲೇ ತಹಶೀಲ್ದಾರ್ ಗುರುಬಸವರಾಜ್ ತಮ್ಮ ಸಹೋದ್ಯೋಗಿಗೆ ಕಿಸ್ಸಿಂಗ್ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದು ಇದು ಸಾಕಷ್ಟು ವೈರಲ್ ಆಗಿದೆ. ಇದರ ಕುರಿತಾಗಿ ಟಿವಿ 9 ವಾಹಿನಿಯು ಕಿಸ್ಸಿಂಗ್ ರಾಜ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ವರದಿ ಮಾಡಿದ್ದು , ಈ ವರದಿಯನ್ನು ನೋಡಿಕೊಂಡು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈಗ ಗುರುಬಸವರಾಜ್ ಇವರನ್ನು ಕೆಲಸದಿಂದ ಅಮಾನತ್ತು ಮಾಡಿದ್ದರು. ತನ್ನ ಅಧಿಕಾರದ ದರ್ಪದಿಂದ ಮಹಿಳೆಯ ಜೊತೆ ಅಸಭ್ಯ ವರ್ತನೆ ತೋರಿದ ಗುರುಬಸವರಾಜ್ ನನ್ನು ಆತ ಮಾಡಿದ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆದಮೇಲೆ ಗಮನಿಸಿ ಕೆಲಸದಿಂದ ತೆಗೆಯಲಾಗಿದ್ದು , ಇದೊಂದು ಶ್ಲಾಘನೀಯ ವಿಷಯ ಎಂದು ಹೇಳುತ್ತಾರೆ. ಆದರೆ ಇದು ಎರಡು ವರ್ಷಗಳ ಹಿಂದಿನ ಪ್ರಕರಣ ಆಗಿದ್ದು ಈಗ ಬೆಳಕಿಗೆ ಬಂದಿದೆ.

ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿಗೆ ಕಚೇರಿಯ ಒಳಗೇ ಮುತ್ತು ಕೊಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯ ಮಹಿಳೆ ಗುರುಬಸವರಾಜ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ವರ್ಗಾವಣೆಯಾಗಿ ಈಗ ಅವರು ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗುರುಬಸವರಾಜ್ ಈ ವ್ಯಕ್ತಿ ಸಭ್ಯ ವ್ಯಕ್ತಿ ಎನು ಅಲ್ಲಾ ತಾನು ಕೆಲಸದ ಮೇಲೆ ಹೋದಲ್ಲೆಲ್ಲ ಅನುಕಂಪದ ಆಧಾರದ ಮೇಲೆ ಕೆಲಸ ಪಡೆದ ಹೆಣ್ಣುಮಕ್ಕಳನ್ನು ಗುರಿಯಾಗಿಟ್ಟುಕೊಂಡು ಅವರ ಜೊತೆಗೆ ಅಸಭ್ಯ ವರ್ತನೆ ಮಾಡಿ ತನ್ನ ಯಾವುದೇ ಪ್ರಕರಣ ಕೂಡಾ ಹೊರಗೆ ಬಾರದ ಹಾಗೆ ನೋಡಿಕೊಳ್ಳುತ್ತಿದ್ದ. ಆದರೆ ಯಾವಾಗ ಮಹಿಳೆಗೆ ಮುತ್ತಿಡುವ ಪ್ರಕರಣದ ವಿಡಿಯೋ ಬೆಳಕಿಗೆ ಬಂತೋ ಆಗ ಆ ವಿಡಿಯೋದಲ್ಲಿ ಇದ್ದ ಮಹಿಳೆ ಕುಷ್ಟಗಿ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದರು. ಇದಾದ ಮೂರು ತಿಂಗಳುಗಳ ನಂತರ ಅವನನ್ನು ಅಮಾನತ್ತು ಮಾಡಲಾಗಿದ್ದು , ಅಮಾನತ್ತು ಮಾಡದಂತೆಯೂ ಸಹ ಸಾಕಷ್ಟು ಬಾರಿ ಒತ್ತಡ ಹೇರಿದ್ದ ಎಂದೂ ಸಹ ಹೇಳಲಾಗುತ್ತದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಕೊಪ್ಪಳ ಜಿಲ್ಲಾಧಿಕಾರಿ ಗುರು ಬಸವರಾಜ್ ನನ್ನು ಅಮಾನತ್ತು ಮಾಡಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಹಿಳೆ ದೂರು ದಾಖಲಿಸಿದ್ದು ನ್ಯಾಯ ದೊರಕಿಸಿಕೊಡುವಂತೆ ಬೇಡಿಕೊಂಡಿದ್ದಾರೆ. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿ ಬಂದಾಗಿನಿಂದ ನನ್ನೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದ ಹಾಗೂ ಪ್ರತಿನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ನೊಂದ ಮಹಿಳೆ ಪ್ರಕರಣದಲ್ಲಿ ದಾಖಲಿಸಿದ್ದಾರೆ. ದೂರು ದಾಖಲಿಸಿ ಕೊಂಡ ಕುಷ್ಟಗಿ ಪೊಲೀಸರು ಐಪಿಸಿ ಕಲಂ 354(ಸ್ತ್ರೀ ಕಿರಿಕಿರಿ) 354(ಬಿ), 506 ಇವುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!