ನೋಡಲು ಸುಂದರವಾಗಿರುವ ಕಿರಿಕ್ ಪಾರ್ಟಿ, ಚಮಕ್, ಯಜಮಾನ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದ ಹಾಗೂ ಟೀಕೆ ಮಾಡುವವರು ಮಾಡುತ್ತಿರಲಿ ಎಂದು ಮುನ್ನುಗ್ಗಿದ ರಶ್ಮಿಕಾ ಮಂದಣ್ಣ ಅವರಿಗೆ ಗೂಗಲ್ ಕೂಡ ಮನಸೋತಿದೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕಿರಿಕ್​ ಬೆಡಗಿ, ಸುಂದರಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲಿಂದಲೇ ಕರ್ನಾಟಕ ಕ್ರಷ್​ ಅನ್ನುವ ಬಿರುದನ್ನ ತಮ್ಮದಾಗಿಸಿಕೊಂಡಿದ್ದಾರೆ. ನಂತರ ತೆಲುಗು ಚಿತ್ರರಂಗದಲ್ಲಿ ಆಫರ್ ಬಂತು, ಅಲ್ಲಿಯೇ ಹೆಚ್ಚಾಗಿ ನಟಿಸಿ ಫೇಮಸ್ ಆದರು. 2020ರ ಸಾಲಿನ ಫಿಮೇಲ್ ನ್ಯಾಷನಲ್​ ಕ್ರಷ್​ ಆಗಿ ಗೂಗಲ್​ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದೆ.

ಸದ್ಯ ಸಾಲು ಸಾಲು ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಬ್ಯೂಟಿ ಕ್ವೀನ್ ರಶ್ಮಿಕಾಗೆ ಗೂಗಲ್​ ಸರ್ಪ್ರೈಸ್​ ನೀಡಿದೆ. ಕರ್ನಾಟಕ ಕ್ರಷ್​ ನಿಂದ ನ್ಯಾಷನಲ್​ ಕ್ರಷ್ಗೆ ಗೂಗಲ್ ರಶ್ಮಿಕಾ ಅವರಿಗೆ ಬಡ್ತಿ ನೀಡಿದೆ. ತಮ್ಮ ಮುದ್ದು ಮುಖ ಹಾಗೂ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ರಶ್ಮಿಕಾ ಮಂದಣ್ಣ‌ ಅವರಿಗೆ ಸದ್ಯ ಗೂಗಲ್​ ಕೂಡ ಮನಸೋತಿದೆ. ರಶ್ಮಿಕಾ ಅವರು ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದ್ದು, ಬ್ಯುಸಿಯಾಗಿದ್ದಾರೆ. ಪ್ಯಾನ್​ ಇಂಡಿಯಾ ಸಿನಿಮಾ ಪುಷ್ಪದಲ್ಲಿ ರಶ್ಮಿಕಾ ಅವರು ಅಲ್ಲು ಅರ್ಜುನ್​ಗೆ ನಾಯಕಿಯಾಗಿ ನಟಿಸಲಿದ್ದಾರೆ, ಇದರ ಜೊತೆಗೆ ಸೂರ್ಯ ಅವರ ಜೊತೆಗೆ ಹೊಸ ತಮಿಳು ಸಿನಿಮಾದಲ್ಲೂ ಸಹ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ರಶ್ಮಿಕಾ ಅವರು ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *