ಚಿಕಿತ್ಸೆಗೆಂದು ಮುಂಬೈಗೆ ತೆರಳಿದ್ದ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರು ತನಗೆ ಚಿಕಿತ್ಸೆ ನೀಡಿದ ವೈದ್ಯೆಯ ಜೊತೆ ಸಪ್ತಪದಿ ತುಳಿದು ವಿವಾಹವಾಗಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರು ಮುಂಬೈಗೆ ಫಿಸಿಯೋತೆರಪಿ ಚಿಕಿತ್ಸೆ ಗೆ ಎಂದು ತೆರಳಿದ್ದರು. ಅಲ್ಲಿ ತನಗೆ ಚಿಕಿತ್ಸೆ ನೀಡುತ್ತಿದ್ದ ಮುಂಬೈನ ಫಿಸಿಯೊಥೆರಪಿಸ್ಟ್ ಜೊತೆ ಗುಟ್ಟಾಗಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ಡಾಕ್ಟರ್ ಹಿಮಾನಿ ಎಂಬ ಬಿಹಾರ ಮೂಲದ ವೈದ್ಯೆಯನ್ನು ಪ್ರಭುದೇವ ಅವರು ವಿವಾಹವಾಗಿದ್ದಾರೆ. ಪ್ರಭುದೇವ ಅವರು ಮುಂಬೈನಲ್ಲಿ ಎರಡನೇ ವಿವಾಹವಾಗಿರುವ ವಿಷಯವನ್ನು ಅವರ ಸಹೋದರ ಸುಂದರಂ ಈ ಜೋಡಿಯ ಮದುವೆಯ ವಿಷಯವನ್ನು ಖಚಿತ ಪಡಿಸಿದ್ದಾರೆ.

ಮೇ ತಿಂಗಳಿನಲ್ಲಿ ನಡೆದ ಇವರ ವಿವಾಹ ಕಾರ್ಯಕ್ರಮದಲ್ಲಿ ಹತ್ತಿರದ ಸಂಬಂಧಿಗಳಷ್ಟೇ ಭಾಗವಹಿಸಿದ್ದರು ಎನ್ನಲಾಗುತ್ತಿದೆ. ತಮ್ಮ ಮದುವೆಯ ಬಗ್ಗೆ ಪ್ರಭುದೇವ ಇಲ್ಲಿಯವರೆಗೆ ಎಲ್ಲಿಯೂ ಕೂಡಾ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಈ ಹಿಂದೆ ಈ ನಟ ರಮ್ಲತ ಅವರನ್ನು ಮದುವೆಯಾಗಿದ್ದರು. ಆದರೆ 2011ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು. ಪ್ರಭುದೇವ ದಕ್ಷಿಣ ಭಾರತದ ಖ್ಯಾತ ನಟಿ ನಯನಾತಾರಾ ಜೊತೆ ಕೂಡ ಕೆಲ ಕಾಲ ಡೇಟಿಂಗ್ ನಡೆಸಿದ್ದರು. ನಂತರ ಈ ಜೋಡಿ ಬೇರೆ ಆದರೂ ನಯನತಾರಾ ಅವರನ್ನು ಬಹುವಾಗಿ ಪ್ರೀತಿಸಿದ್ದ ಪ್ರಭುದೇವ ಅವರನ್ನು ಮದುವೆಯಾಗುವ ಯೋಚನೆ ಮಾಡಿದ್ದರು. ಆದರೆ ಅಷ್ಟರಲ್ಲೇ ಈ ಜೋಡಿ ಬೇರೆ ಆಗಿದ್ದರು.

Leave a Reply

Your email address will not be published. Required fields are marked *