ಕಾಲ ಕಳೆದಂತೆ ಹಲವು ಬದಲಾವಣೆ, ಅಭಿವೃದ್ಧಿಗಳನ್ನು ನಾವು ಕಾಣುತ್ತೇವೆ. ಜಗತ್ತು ಎಷ್ಟರಮಟ್ಟಿಗೆ ಬದಲಾಗಿದೆ ಎಂದರೆ ನಮಗೆ ಬೇಕಾದ ವಸ್ತುಗಳನ್ನು ನಾವೇ ಮಾರ್ಕೆಟಿಗೆ ಹೋಗಿ ತರುವ ಬದಲು ಮನೆಯಲ್ಲಿ ಆನ್ಲೈನ್ ಮೂಲಕ ಆರ್ಡರ್ ಮಾಡಿ ಬೇಕಾದ ವಸ್ತುಗಳು ಮನೆಗೆ ಬರುವಂತೆ ಮಾಡಬಹುದು, ಅಷ್ಟೇ ಅಲ್ಲದೆ ಒಂದು ದಿನ ಅಡುಗೆ ಮಾಡಲು ಕಷ್ಟವಾದರೆ ಅಡುಗೆಯನ್ನು ಸಹ ಸುರಕ್ಷಿತವಾಗಿ, ಸ್ವಚ್ಛತೆಯಿಂದ ತಂದು ಕೊಡುವ ವ್ಯವಸ್ಥೆಯನ್ನು ನೋಡಬಹುದು. ಇಂಥ ವ್ಯವಸ್ಥೆಯನ್ನು ಮಾಡಿದ ಸ್ವಿಗಿ ಕಂಪನಿಯ ಬಗ್ಗೆ, ಅದು ಬೆಳೆದು ಬಂದ ರೀತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಮೊದಲೆಲ್ಲಾ ನಾವು ಸಣ್ಣ ವಸ್ತು ತರುವುದಿದ್ದರೂ ಮಾರ್ಕೆಟಿಗೆ ಹೋಗಿ ತರಬೇಕಾಗಿತ್ತು ಆದರೆ ಇಂದು ನಾವು ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಆರ್ಡರ್ ಮಾಡಿ ನಾವು ಇದ್ದಲ್ಲಿಗೆ ವಸ್ತುಗಳನ್ನು ತರಿಸಿಕೊಳ್ಳಬಹುದು. ಈಗಿನ ಬ್ಯೂಸಿ ಜೀವನದಲ್ಲಿ ಆನ್ಲೈನಲ್ಲಿ ಫುಡ್ ಆರ್ಡರ್ ಮಾಡಿ ತರಿಸುವುದು ಜೀವನದ ಒಂದು ಭಾಗವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸ್ವಿಗಿ ಮತ್ತು ಜೊಮ್ಯಾಟೋದಂತಹ ಆಪ್ ಗಳ ಮೂಲಕ ಹಲವಾರು ರೆಸ್ಟೋರೆಂಟ್ ಗಳಲ್ಲಿ ನಮಗೆ ಇಷ್ಟವಾಗಿರುವ ರೆಸ್ಟೋರೆಂಟ್ ಆಹಾರವನ್ನು ಮನೆಗೆ ತರಿಸಿಕೊಳ್ಳಬಹುದು.
ಆನ್ಲೈನ್ ಫುಡ್ ಡೆಲಿವರಿ ಸರ್ವಿಸ್ ಕಂಪನಿಗಳಲ್ಲಿ ಪ್ರಸಿದ್ಧವಾದ ಸ್ವಿಗಿ ಕಂಪನಿ ಸ್ಥಾಪಕರು ಬೇರೆಬೇರೆ ಬಿಸಿನೆಸ್ ಪ್ರಾರಂಭಿಸಿ ಅದರಲ್ಲಿ ಗೆಲುವು ಕಾಣದೆ ನಂತರ ಈ ಸಂಸ್ಥೆಯನ್ನು ಹುಟ್ಟುಹಾಕುತ್ತಾರೆ. ರಾಹುಲ್ ಜೈಮಿನಿ, ಶ್ರೀಹರ್ಷ ಮೆಜೊಟಿಕ್, ನಂದನ್ ರೆಡ್ಡಿ ಸ್ವಿಗಿ ಕಂಪನಿಯನ್ನು ಪ್ರಾರಂಭಿಸುತ್ತಾರೆ. ಇವರಲ್ಲಿ ಶ್ರೀಹರ್ಷ ಹಾಗೂ ನಂದನ್ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಕಾಲೇಜಿನಲ್ಲಿ ಓದುತ್ತಿರುವಾಗ ಸ್ನೇಹಿತರಾಗುತ್ತಾರೆ.
ಗ್ರಾಜುಯೇಷನ್ ಮುಗಿಸಿ ಶ್ರೀಹರ್ಷ ಅವರು ಲಂಡನ್ನಿನಲ್ಲಿ ಒಂದು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ ಆದರೆ ಅವರಿಗೆ ಅಲ್ಲಿ ಕೆಲಸ ಮಾಡಲು ಮನಸ್ಸಿಲ್ಲದೆ ಭಾರತಕ್ಕೆ ಬಂದು ನಂದನ್ ಅವರ ಜೊತೆ ಬಿಸಿನೆಸ್ ಮಾಡಲು ಚರ್ಚೆ ನಡೆಸುತ್ತಿರುತ್ತಾರೆ. ರಿಸರ್ಚ್ ನಡೆಸಿ ಒಂದು ಬಿಸಿನೆಸ್ ಪ್ರಾರಂಭಿಸುತ್ತಾರೆ ಅದಕ್ಕೆ ಬಂಡಲ್ ಎಂದು ಹೆಸರಿಡುತ್ತಾರೆ ಆದರೆ ಇದರಲ್ಲಿ ಗೆಲುವು ಕಾಣದೆ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಲಾಸ್ ಆಗಿ 2014ರಲ್ಲಿ ಈ ಕಂಪನಿಯನ್ನು ಮುಚ್ಚುತ್ತಾರೆ. ಆಗ ಶ್ರೀಹರ್ಷ ಹಾಗೂ ನಂದನ್ ಅವರು ದುಃಖಿತರಾಗುತ್ತಾರೆ ಆದರೆ ಸೋಲನ್ನು ಒಪ್ಪಿಕೊಳ್ಳದೆ, ಹೊಸ ಬಿಸಿನೆಸ್ ಪ್ರಾರಂಭಿಸಲು ರಿಸರ್ಚ್ ಮಾಡುತ್ತಾರೆ.
ಫುಡ್ ಸೆಂಟರ್ ನಲ್ಲಿ ಏನಾದರೂ ಸಾಧಿಸಲು ಮನಸ್ಸು ಮಾಡುತ್ತಾರೆ. 2014 ಆಗಸ್ಟ್ ನಲ್ಲಿ ಸ್ವಿಗಿಯನ್ನು ಪ್ರಾರಂಭ ಮಾಡುತ್ತಾರೆ. ಆದರೆ ಈ ಕೆಲಸಕ್ಕೆ ಒಬ್ಬ ಟೆಕ್ನಿಕಲ್ ಜ್ಞಾನ ಉಳ್ಳವನು ಬೇಕಾಗಿರುತ್ತಾನೆ ಆದ್ದರಿಂದ ರಾಹುಲ್ ಅವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುತ್ತಾರೆ. ರಾಹುಲ್ ಅವರು ಐಐಟಿ ಖರಗಪುರದಲ್ಲಿ ಇಂಜಿನಿಯರಿಂಗ್ ಮುಗಿಸಿರುತ್ತಾರೆ. ಸ್ವಿಗಿಯು ಬೆಂಗಳೂರಿನ ಕೋರಮಂಗಲದಿಂದ ಆರಂಭವಾಗುತ್ತದೆ. ಪ್ರಾರಂಭದಲ್ಲಿ 6 ಜನ ಡೆಲಿವರಿ ಬಾಯ್ಸ್ ಹಾಗೂ 25 ರೆಸ್ಟೋರೆಂಟ್ ಗಳು ಮಾತ್ರ ಇರುತ್ತದೆ. ನಂತರ 2015ರಲ್ಲಿ ಸ್ವಿಗಿಯಲ್ಲಿ ಇಂಟ್ರೆಸ್ಟ್ ತೋರಿಸಿ ಇನ್ವೆಸ್ಟ್ ಮಾಡುತ್ತಾರೆ.
ಭಾರತದಲ್ಲಿ ಜಿಯೋ ಬಂದಾಗಿನಿಂದ ಇಂಟರ್ನೆಟ್ ಹೆಚ್ಚು ಬಳಸುತ್ತಿರುವುದರಿಂದ ಸ್ವಿಗಿಯನ್ನು ಸಹ ಹೆಚ್ಚು ಬಳಸುತ್ತಾರೆ. ನಂತರ 5000 ರೆಸ್ಟೋರೆಂಟ್ ಗಳು ನಂತರ 40,000 ರೆಸ್ಟೋರೆಂಟ್ ಗಳು ಅವರೊಂದಿಗೆ ಸೇರಿಕೊಳ್ಳುತ್ತದೆ. ಬೆಂಗಳೂರಿನ ಒಂದು ಸಣ್ಣ ಪ್ರದೇಶದಿಂದ ಪ್ರಾರಂಭವಾಗಿ ಇಂದು ಭಾರತದಾದ್ಯಂತ ತನ್ನ ವ್ಯಾಪ್ತಿಯನ್ನು ಹರಡಿಕೊಂಡಿದೆ. ಸ್ವಿಗಿ ಅಂತಹ ಹಲವು ಕಂಪನಿಗಳು ತಲೆಯೆತ್ತಿದರು, ಸ್ವಿಗಿಯನ್ನು ಹಿಂದೆ ಹಾಕಲು ಆಗಲಿಲ್ಲ. ಸ್ವಿಗಿ ಹೊರಗಡೆ ಜಾಬ್ ಮಾಡಿ ಮನೆಗೆ ಬಂದು ಸುಸ್ತಾಗಿ ಅಡುಗೆ ಮಾಡಲು ಕಷ್ಟವಾಗುವ ಬಹುತೇಕರಿಗೆ ಸಹಾಯವಾಗಿದೆ. ಕೊರೋನಾ ವೈರಸ್ ಬಂದಾಗಿನಿಂದ ಜನರಿಗೆ ಭಯ ಹೆಚ್ಚಾಗಿದೆ ಆದರೆ ಸ್ವಿಗಿ ಸ್ವಚ್ಛತೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದೆ.