ಈ ಒಂದು ಸಿಹಿಯನ್ನು ಮನೆಯಲ್ಲಿಯೇ ಮಾಡಬಹುದು. ಸುಲಭವಾಗಿ ರುಚಿಯಾಗಿ ಹಾಗೂ ಶುಚಿಯಾಗಿ ಹಾಗೂ ಕೇವಲ ಮೂರೇ ಮೂರು ಸಾಮಗ್ರಿಗಳನ್ನು ಬಳಸಿ ಮಾಡಬಹುದಾದ ಹಲ್ವಾ ರೆಸಿಪಿ ಇಲ್ಲಿದೆ. ಈ ಹಲ್ವಾ ಮಾಡೋಕೆ ಏನೆಲ್ಲ ಸಾಮಗ್ರಿಗಳು ಬೇಕು ಹಾಗೆ ಮಾಡೋದು ಹೇಗೆ ಅನ್ನೋದನ್ನ ನೋಡೋಣ.
ಬೇಕಾಗುವ ಸಾಮಗ್ರಿಗಳು :ಜೋಳದ ಹಿಟ್ಟು / ಕಾರ್ನ್ ಫ್ಲೋರ್ ಅರ್ಧ ಕಪ್, ಸಕ್ಕರೆ 1 ಕಾಲು ಕಪ್, ಫುಡ್ ಕಲರ್, ತುಪ್ಪ ಅಥವಾ ಎಣ್ಣೆ, ಪಿಸ್ತಾ, ಬಾದಾಮಿ, ಗೋಡಂಬಿ
ಮಾಡುವ ವಿಧಾನ: ಒಂದು ಬೌಲ್ ಗೆ ಅರ್ಧ ಕಪ್ ಕಾರ್ನ್ ಫ್ಲೋರ್ ತೆಗೆದುಕೊಂಡು ಅದಕ್ಕೆ 2 ಕಪ್ ನೀರು ಸೇರಿಸಿ ಚೆನ್ನಾಗಿ ಗಂಟು ಇಲ್ಲದ ಹಾಗೆ ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ನಂತರ ಪಾಕಕ್ಕೆ ಒಂದು ಪಾತ್ರೆಗೆ ಒಂದು ಕಾಲು ಕಪ್ ಸಕ್ಕರೆ ಹಾಗೂ ಒಂದು ಕಪ್ ನೀರು ಸೇರಿಸಿ, ಗಟ್ಟಿ ಪಾಕ ಬರಬೇಕು ಅಂದೇನೂ ಇಲ್ಲ.. ಸಕ್ಕರೆ ಕರಗಿ ಒಂದು ಕುದಿ ಬಂದರೆ ಸಾಕಗತ್ತೆ. ನಂತರ ಅದಕ್ಕೆ ಎರಡರಿಂದ ಮೂರು ಹನಿ ನಿಂಬೆ ರಸವನ್ನು ಹಾಕಿಕೊಂಡು ಒಮ್ಮೆ ಕೈ ಆಡಿಸಿ ನಂತರ ಅದಕ್ಕೆ ಮೊದಲೇ ರೆಡಿ ಮಾಡಿ ಇಟ್ಟುಕೊಂಡ ಕಾರ್ನ್ ಫ್ಲೋರ್ ಅನ್ನು ಹಾಕಿ ಸಣ್ಣ ಉರಿಯಲ್ಲಿ ಇಟ್ಟುಕೊಂಡು ಕೈ ಬಿಡದೆ ಗಂಟು ಆಗದ ರೀತಿ ತಿರುಗಿಸುತ್ತಾ ಇರಬೇಕು. ನಂತರ ಸ್ವಲ್ಪ ಸಮಯದ ನಂತರ ಅದು ಶೈನಿಂಗ್ ಆಗಿ ಗಟ್ಟಿ ಆಗತ್ತೆ ಆಗ ಅದಕ್ಕೆ ಕೇಸರಿ ಬಣ್ಣ ಅಥವಾ ಯಾವುದೇ ಆಹಾರಕ್ಕೆ ಹಾಕುವ ಬಣ್ಣವನ್ನು ಸೇರಿಸಿಕೊಳ್ಳಬಹುದು.
ಕಲರ್ ಇಲ್ಲವಾದಲ್ಲಿ ಹಾಗೆಯೇ ಮಾಡಲೂ ಬಹುದು. ಕಲರ್ ಸೇರಿಸಿ ಮಿಕ್ಸ್ ಮಾಡಿ ಮತ್ತೂ ಗಟ್ಟಿ ಆಗುವವರೆಗೂ ಕೈ ಆಡಿಸುತ್ತಲೇ ಇರಬೇಕು ನಂತರ ಅದಕ್ಕೆ 3 ಟೀ ಸ್ಪೂನ್ ಅಷ್ಟು ತುಪ್ಪ ಅಥವಾ ಎಣ್ಣೆಯನ್ನು ಮೊದಲು ಅರ್ಧದಷ್ಟು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಬೇಕು. ಸೈಡಿಗೆ ಇರುವ ಎಣ್ಣೆ ಅಥವಾ ತುಪ್ಪ ಚೆನ್ನಾಗಿ ಕೂಡಿಕೊಳ್ಳಬೇಕು ಹಾಗೆ ಕೈ ಆಡಿಸುತ್ತಾ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಮತ್ತೆ 3 ಚಮಚದಲ್ಲಿ ಹೆಚ್ಚು ಉಳಿದ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಮತ್ತೆ ಅದು ಹೊಂದಿಕೊಳ್ಳುವವರೆಗೂ ಮಿಕ್ಸ್ ಮಾಡಬೇಕು. ಗಟ್ಟಿ ಆದ ನಂತರ ಅದಕ್ಕೆ ಕಟ್ ಮಾಡಿಟ್ಟುಕೊಂಡ ಪಿಸ್ತಾ, ಬಾದಾಮಿ, ಗೋಡಂಬಿ ಎಲ್ಲವನ್ನೂ ಸೇರಿಸಿ ಮಿಕ್ಸ್ ಮಾಡಿ ಒಂದೆರಡು ನಿಮಿಷ ಕೈ ಆಡಿಸಿ ನಂತರ ಸ್ಟೋವ್ ಆಫ್ ಮಾಡಿ ಎಣ್ಣೆ ಅಥವಾ ತುಪ್ಪ ಸವರಿದ ಪಾತ್ರೆಗೆ ಹಾಕಿ ಎರಡು ಗಂಟೆಗಳ ಕಾಲ ತಣ್ಣಗಾಗಲು ಬಿಡಬೇಕು. ನಂತರ ಒಂದು ಪ್ಲೇಟ್ ಗೆ ಉಲ್ಟಾ ಮಾಡಿ ಹಾಕಿದ್ರೆ ಅದು ತಾನಾಗಿಯೇ ಬಿಟ್ಟುಕೊಳ್ಳುತ್ತೇ. ನಂತರ ಬೇಕಾದ ಸೈಜ್ ಹಾಗೂ ಬೇಕಾದ ಶೇಪ್ ಅಲ್ಲಿ ಕಟ್ ಮಾಡಿಕೊಳ್ಳಬಹುದು.