ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜನಪರ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಪಿ.ಎಂ.ಇ.ಜಿ.ಪಿ ಪ್ರಧಾನ ಮಂತ್ರಿ ಎಂಪ್ಲಾಯ್ಮೆಂಟ್ ಜನರೇಷನ್ ಪ್ರೋಗ್ರಾಮ್ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲಾತಿಗಳು ಬೇಕು, ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..
ಪ್ರಧಾನ ಮಂತ್ರಿ ಎಂಪ್ಲಾಯ್ಮೆಂಟ್ ಜನರೇಷನ್ ಪ್ರೋಗ್ರಾಂ ಪಿ.ಎಂ.ಇ.ಜಿ.ಪಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೊಸದಾಗಿ ಬಿಸಿನೆಸ್ ಪ್ರಾರಂಭಿಸುವವರು ಈ ಯೋಜನೆಯ ಮೂಲಕ ಸಾಲ ಸೌಲಭ್ಯ, ಸಬ್ಸಿಡಿ ಪಡೆಯಬಹುದಾಗಿದೆ. ಈ ಯೋಜನೆಯಡಿಯಲ್ಲಿ 25 ಲಕ್ಷ ರೂಪಾಯಿವರೆಗೂ ಸಾಲ ಮತ್ತು 35% ಸಬ್ಸಿಡಿ ಸಿಗುತ್ತದೆ.
ಈ ಯೋಜನೆಗೆ ಸ್ವಂತ ಬಿಸಿನೆಸ್ ಮಾಡುವವರು, ಸಣ್ಣ ಕೈಗಾರಿಕಾ ಘಟಕಗಳನ್ನು ಸ್ಥಾಪನೆ ಮಾಡುವವರು, ಸೇವಾ ಘಟಕಗಳ ಸ್ಥಾಪನೆ ಅಂದರೆ ಸರ್ವೀಸ್ ಕೊಡುವ ಬಿಸಿನೆಸ್ ಗಳನ್ನು ಪ್ರಾರಂಭಿಸಲು, ಸ್ವಸಹಾಯ ಗುಂಪುಗಳ ರಚನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು 18 ವರ್ಷ ವಯಸ್ಸಾಗಿರಬೇಕು. ಕೈಗಾರಿಕಾ ಘಟಕ ಸ್ಥಾಪನೆ ಮಾಡಲು 25 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.
ಸರ್ವಿಸ್ ಬಿಸಿನೆಸ್ ಮಾಡಲು 10 ಲಕ್ಷದವರೆಗೆ ಸಾಲ ಕೊಡಲಾಗುತ್ತದೆ. ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 10 ಲಕ್ಷಕ್ಕಿಂತ ಹೆಚ್ಚಿನ ಸಾಲ ಸೌಲಭ್ಯ ನೀಡಲಾಗುತ್ತದೆ. 8ನೇ ತರಗತಿಯನ್ನು ಪಾಸು ಮಾಡಿರಬೇಕು. ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೆ ಯೋಜನೆಗಳ ಸಾಲ ಸೌಲಭ್ಯ ಪಡೆದಿರಬಾರದು. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಸಾಮಾನ್ಯ ವರ್ಗದವರಿಗೆ 25% ಸಬ್ಸಿಡಿ ಇರುತ್ತದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಮಾಜಿ ಸೈನಿಕರು, ಅಂಗವಿಕಲರು, ಮಹಿಳಾ ಫಲಾನುಭವಿಗಳಿಗೆ 35% ಸಬ್ಸಿಡಿ ದೊರೆಯುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ದಾಖಲಾತಿಗಳು ಬೇಕಾಗುತ್ತದೆ. ಅಭ್ಯರ್ಥಿಯ ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಪ್ರಾರಂಭಿಸುವ ಬಿಸಿನೆಸ್ ನ ಯೋಜನಾ ವರದಿ, ಐಡಿ ಕಾರ್ಡ್, ಫೋಟೋ, ಬ್ಯಾಂಕ್ ಪಾಸ್ ಬುಕ್ ನ ಪ್ರತಿ, ಕಂಪ್ಯೂಟರ್ ಕೋರ್ಸ್ ಗೆ ಹೋಗಿದ್ದರೆ ಅದರ ಸರ್ಟಿಫಿಕೇಟ್, ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್ ಗ್ರಾಮೀಣ ಪ್ರದೇಶದವರಾಗಿದ್ದರೆ ಜನಸಂಖ್ಯೆ ಪ್ರಮಾಣ ಪತ್ರ ಬೇಕಾಗುತ್ತದೆ.
ಕೆವೈಸಿ ಅಫೀಷಿಯಲ್ ವೆಬ್ ಸೈಟ್ ನ್ನು ಓಪನ್ ಮಾಡಿ ಕೆವಿಐಸಿ ಆನ್ಲೈನ್ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಆನ್ಲೈನ್ ಅಪ್ಲಿಕೇಷನ್ ಎಂದು ಕಾಣಿಸುತ್ತದೆ. ಅದರ ಕೆಳಗಡೆ ಪಿ.ಎಂ.ಇ.ಜಿ.ಪಿ ಎಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ನಂತರ ಆನ್ಲೈನ್ ಅಪ್ಲಿಕೇಷನ್ ಫ್ರಮ್ ಫಾರ್ ಇಂಡಿಯೂಸವಲ್ ಮತ್ತು ಆನ್ಲೈನ್ ಅಪ್ಲಿಕೇಷನ್ ಪ್ರಮ್ ಫಾರ್ ನಾನ್ ಇಂಡಿಯೂಸವಲ್ ಎಂಬ ಆಪ್ಷನ್ ಕಾಣಿಸುತ್ತದೆ. ಒಬ್ಬರೆ ಅಪ್ಲಿಕೇಷನ್ ಹಾಕುತ್ತಿದ್ದರೆ ಇಂಡಿಯೂಸವಲ್ ಆಪ್ಷನ್ ಕ್ಲಿಕ್ ಮಾಡಬೇಕು. ಸಂಘ ಸಂಸ್ಥೆಗಳೊಂದಿಗೆ ಸೇರಿ ಅಪ್ಲಿಕೇಷನ್ ಹಾಕುತ್ತಿದ್ದಾರೆ ನಾನ್ ಇಂಡಿಯೂಸವಲ್ ಆಪ್ಷನ್ ಗೆ ಕ್ಲಿಕ್ ಮಾಡಬೇಕು.
ಆನ್ಲೈನ್ ಅಪ್ಲಿಕೇಷನ್ ಫ್ರಮ್ ಫಾರ್ ಇಂಡಿಯೂಸವಲ್ ಕ್ಲಿಕ್ ಮಾಡಿದಾಗ ಒಂದು ಫಾರ್ಮ್ ಓಪನ್ ಆಗುತ್ತದೆ ಅದರಲ್ಲಿ ಆಧಾರ್ ಕಾರ್ಡ್ ನಂಬರ್, ನೇಮ್ ಹಾಕಿ ವ್ಯಾಲಿಡಿಟಿ ಆಧಾರ ಕ್ಲಿಕ್ ಮಾಡಬೇಕು. ನಂತರ ಅಡ್ರೆಸ್, ಹುಟ್ಟಿದ ದಿನಾಂಕ, ಜಾತಿ, ಶಿಕ್ಷಣ, ಮೊಬೈಲ್ ನಂಬರ್, ಇಮೇಲ್ ಐಡಿ, ಬಿಸಿನೆಸ್ ಎಲ್ಲಿ ಪ್ರಾರಂಭಿಸುತ್ತಾರೆ ರೂರಲ್ ಅಥವಾ ಅರ್ಬನ್ ಎಂಬುದನ್ನು ಹಾಕಬೇಕು, ಯಾವ ರೀತಿಯ ಬಿಸಿನೆಸ್ ಪ್ರಾರಂಭಿಸಲಾಗುತ್ತದೆ, ಬ್ಯಾಂಕ್ ಬ್ಯಾಲೆನ್ಸ್ ನೋಡಬೇಕು ಐಎಫ್ಎಸ್ಸಿ ಕೋಡ್ ಬ್ರಾಂಚ್ ಅಡ್ರೆಸ್ ಹಾಕಬೇಕು. ನಂತರ ಡಿಕ್ಲರೇಷನ್ ಬಾಕ್ಸ್ ಅನ್ನು ಸೆಲೆಕ್ಟ್ ಮಾಡಿಕೊಂಡು ಪ್ರೀವಿಯರ್ ಡಿಪಿಆರ್ ಅನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ಈ ರೀತಿ ಪಿ.ಎಂ.ಇ.ಜಿ.ಪಿ ಯೋಜನೆಗೆ ಸಾಲ ಪಡೆಯಲು ಅರ್ಜಿ ಸಲ್ಲಿಸಬೇಕು.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430