ನಾವು ಸಾಮಾನ್ಯವಾಗಿ ನಮ್ಮ ಬೇಡಿಕೆಗಳನ್ನು ದೇವರ ಮುಂದೆ ಹೇಳಿಕೊಳ್ಳಲು ದೇವಸ್ಥಾನಕ್ಕೆ ಹೋಗುತ್ತೇವೆ. ದೇವಾಲಯದಲ್ಲಿ ದೇವರಿಗೆ ಇಂತಿಷ್ಟು ಹಣವನ್ನು ನಿನ್ನ ಹುಂಡಿಗೆ ಹಾಕುತ್ತೇವೆ ಇನ್ನಿತರ ಹರಕೆಗಳನ್ನು ಹೇಳುತ್ತೇವೆ. ಈ ದೇವಾಲಯದಲ್ಲಿ ಮಣ್ಣಿನ ಗೊಂಬೆಗಳ ಹರಕೆಯನ್ನು ಒಪ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಹಾಗಾದರೆ ಈ ಲೇಖನದಲ್ಲಿ ಮಣ್ಣಿನ ಗೊಂಬೆಗಳ ಹರಕೆಯನ್ನು ಒಪ್ಪಿಸುವ ದೇವಾಲಯದ ಬಗ್ಗೆ ನೋಡೋಣ.

ನಮ್ಮ ಇಷ್ಟಾರ್ಥಗಳನ್ನು, ಬೇಡಿಕೆಗಳನ್ನು ಈಡೇರಿಸು ಎಂದು ಕೇಳಿಕೊಳ್ಳಲು ದೇವಸ್ಥಾನಗಳಿಗೆ ಹೋಗುತ್ತೇವೆ. ನಾವು ದೇವಸ್ಥಾನಗಳಿಗೆ ಹರಕೆಯನ್ನು ಹೇಳಿಕೊಂಡು ನಮ್ಮ ಬೇಡಿಕೆ ಈಡೇರಿದ ನಂತರ ಹರಕೆಯನ್ನು ದೇವರಿಗೆ ಒಪ್ಪಿಸುತ್ತೇವೆ. ಧರ್ಮಸ್ಥಳದಿಂದ 13 ಕಿಮೀ ದೂರದಲ್ಲಿ ಶ್ರೀಸದಾಶಿವರುದ್ರ ದೇವಸ್ಥಾನವಿದೆ. 13ನೇ ಶತಮಾನದ ಈ ದೇವಸ್ಥಾನದಲ್ಲಿ ಸೂರ್ಯನಾರಾಯಣ ನೆಲೆಸಿದ್ದಾನೆ. ಒಂದು ದಿನ ಒಬ್ಬ ಮಹಿಳೆ ತಮ್ಮ ಹೊಲದಲ್ಲಿ ಕಳೆಯನ್ನು ಕೀಳಬೇಕಾದರೆ ಅವಳ ಕೊಡಲಿ ವಿಗ್ರಹಕ್ಕೆ ತಾಕಿ ರಕ್ತ ಚಿಮ್ಮುತ್ತದೆ. ಗಾಬರಿಯಿಂದ ಮಹಿಳೆ ತನ್ನ ಮಗ ಸೂರ್ಯನನ್ನು ಕರೆಯುತ್ತಾಳೆ. ಅಲ್ಲಿ ಜನ ಸೇರುತ್ತಾರೆ ಆದ್ದರಿಂದ ಈ ದೇವಾಲಯಕ್ಕೆ ಸೂರ್ಯ ನಾರಾಯಣ ದೇವಾಲಯ ಎಂದು ಕರೆಯುತ್ತಾರೆ.

ನಂತರದ ವರ್ಷಗಳಲ್ಲಿ ದೇವಾಲಯ ಅಭಿವೃದ್ಧಿಯಾಗಿ ದೇವಾಲಯ ವಿಶಾಲವಾಗಿದೆ. ಈ ದೇವಾಲಯಕ್ಕೆ ಮಣ್ಣಿನ ಗೊಂಬೆಗಳ ಹರಕೆಯನ್ನು ಹೇಳಿಕೊಂಡು ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ. ಸೂರ್ಯನಾರಾಯಣ ದೇವರನ್ನು ನೆನೆಸಿಕೊಂಡು ಭಕ್ತಿಯಿಂದ ಮನೆ ಕಟ್ಟಬೇಕು ಕಟ್ಟುವಂತಾದರೆ ನಿನಗೆ ಮಣ್ಣಿನ ಮನೆಯ ಹರಕೆಯನ್ನು ಒಪ್ಪಿಸುತ್ತೇನೆ ಎಂದು ಕೇಳಿಕೊಳ್ಳಬೇಕು. ಮನೆಯಲ್ಲಿ ದೇವರನ್ನು ನೆನೆದು ಹರಕೆ ಹೇಳಿಕೊಳ್ಳಬಹುದು. ಕೋರಿಕೆ ಈಡೇರಿದ ನಂತರ ಹರಕೆಯಂತೆ ಮಣ್ಣಿನ ಮನೆಯನ್ನು ದೇವಾಲಯಕ್ಕೆ ಒಪ್ಪಿಸಬೇಕು. ದೇವಾಲಯದ ಸುತ್ತಮುತ್ತ ಅಂಗಡಿಗಳಿವೆ ಅಲ್ಲಿ ಮಣ್ಣಿನ ಗೊಂಬೆಗಳು ಸಿಗುತ್ತದೆ ಅವುಗಳಿಗೆ ಇಂತಿಷ್ಟು ಚಾರ್ಜ್ ಎಂದು ಮಾಡಿರುತ್ತಾರೆ. ಈ ದೇವಸ್ಥಾನದಲ್ಲಿ ದಿನನಿತ್ಯ ಅನ್ನ ಪ್ರಸಾದ ಇರುತ್ತದೆ ದೇವಸ್ಥಾನಕ್ಕೆ ಬಂದವರು ಊಟ ಮಾಡಬಹುದು.

ದೇವಸ್ಥಾನದ ಪಕ್ಕದಲ್ಲಿ ಹರಕೆಯ ಬನ ಎಂಬುದಿದೆ ಭಕ್ತಾದಿಗಳು ತಾವು ಹರಕೆಯಾಗಿ ಹೇಳಿಕೊಂಡ ಮಣ್ಣಿನ ಗೊಂಬೆಗಳನ್ನು ಹರಕೆಯ ಬನದಲ್ಲಿ ಇಡಬೇಕಾಗುತ್ತದೆ, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹರಕೆಯ ಬನ ತೆರೆದಿರುತ್ತದೆ. ಬನದಲ್ಲಿ ಕಲ್ಯಾಣಿ ಇದೆ ಬಹಳ ಕ್ಲೀನಾಗಿದೆ ಮತ್ತು ನಿಶ್ಯಬ್ಧವಾಗಿದೆ. ಈ ಬನದಲ್ಲಿ ರಾಶಿ ರಾಶಿ ಹಲವು ರೀತಿಯ ಗೊಂಬೆಗಳನ್ನು ನೋಡಬಹುದು ಅಲ್ಲದೆ ಈ ಬನ ನೋಡಲು ಸುಂದರವಾಗಿದೆ, ರಮಣೀಯವಾಗಿದೆ. ಧರ್ಮಸ್ಥಳಕ್ಕೆ ಭೇಟಿ ಕೊಟ್ಟರೆ ಹತ್ತಿರವಿರುವ ಶ್ರೀಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ಕೊಡಬೇಕು. ಈ ದೇವಾಲಯದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ, ದೇವರ ದರ್ಶನ ಮಾಡಿ ಪುನೀತರಾಗಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!