ವಿಧಿ ವಿಧವಾದ ಸೀರೆಗಳು ಎಲ್ಲಿ ಸಿಗುತ್ತದೆ ಹಾಗೂ ಹೋಲ್ ಸೇಲ್ ಎಲ್ಲಿ ದೊರೆಯುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸೂರತ್ ನ ರಘುಕುಲ ಟೆಕ್ಸ್ ಟೈಲ್ ಮಾರ್ಕೆಟ್ ನಲ್ಲಿ 3 ನೇ ಫ್ಲೋರ್ ಅಜ್ಮೀರ್ ಫ್ಯಾಷನ್ ಇಲ್ಲಿ ಸುಮಾರು 130 ಜನ ಕೆಲಸಗಾರರು ಇದ್ದಾರೆ. ಇಲ್ಲಿ ಡ್ರೆಸ್ ಮಟೀರಿಯಲ್ ಮತ್ತು ಸೀರೆ 45 ರೂಪಾಯಿಯಿಂದ ಸಿಗುತ್ತದೆ. ಸೀರೆಗಳನ್ನು ಪೋಲ್ಡ್ ಮಾಡಿ ದಾರಾ ಕಟ್ಟಿ ಇಡುತ್ತಾರೆ. ಒಂದೇ ರೀತಿಯ ಸೀರೆಗಳು ಇಲ್ಲಿ ಬಹಳಷ್ಟು ಸಿಗುತ್ತದೆ. ಅಲ್ಲದೇ ಕಸ್ಟಮರ್ ಸರ್ವಿಸ್ ಸೆಂಟರ್ ಕೂಡ ಇದೆ ಆನ್ ಲೈನ್ ಪರ್ಚೆಸ್ ಮಾಡಬಹುದು ಕಸ್ಟಮರ್ಸ್ ಪ್ರಶ್ನೆಗಳನ್ನು ಕೇಳಬಹುದು ಅದಕ್ಕೋಸ್ಕರ ಹಲವಾರು ಜನ ಕೆಲಸ ಮಾಡುತ್ತಿರುತ್ತಾರೆ ಸೀರೆ ಡ್ಯಾಮೇಜ್ ಆದರೆ ಅವರೆ ಜವಾಬ್ದಾರಿ. ಹೋಲ್ ಸೇಲ್ ಬೇಕಾದರೆ ಒಂದು ಬಂಡಲ್ ತೆಗೆದುಕೊಳ್ಳಬೇಕು ಇಲ್ಲಿ ರಿಟೇಲ್ ಸಿಗುವುದಿಲ್ಲ. ಹಲವಾರು ರೀತಿಯ ಸೀರೆಗಳನ್ನು ಇಲ್ಲಿ ನೋಡಬಹುದು. ದಿನನಿತ್ಯ ಬಳಸುವ ಸೀರೆಗಳು ಇಲ್ಲಿ ಸಿಗುತ್ತದೆ. ಪ್ರಿಂಟೆಡ್ ಸೀರೆ 190ರೂ ಇಂದ ಸಿಗುತ್ತದೆ. ಬೇರೆ ಬೇರೆ ಬಾರ್ಡರ್ ಸೀರೆ ಸಿಗುತ್ತದೆ. ಇದು ಸಹ ಒಂದು ಪ್ಯಾಕ್ ನಲ್ಲಿ 8-10 ಬೇರೆ ಬೇರೆ ಡಿಸೈನ್ ಸೀರೆಗಳಿರುತ್ತವೆ.
ಕೋರಿಯರ್ ವ್ಯವಸ್ಥೆಯು ಇಲ್ಲಿದೆ 40-70 ಸೀರೆಗಳಿದ್ದರೆ ಕೋರಿಯರ್ ಮಾಡುತ್ತಾರೆ. ಪೋನಿನಲ್ಲಿ ಅವರು ಸಂಪೂರ್ಣ ಮಾಹಿತಿಯನ್ನು ಕೊಡುತ್ತಾರೆ. ಇಬ್ಬರು ಕನ್ನಡ ಬರುವವರು ಸೇಲ್ಸ್ ಮ್ಯಾನ್ ಗಳಿದ್ದಾರೆ ಹಾಗಾಗಿ ಕರ್ನಾಟಕದಿಂದ ಹೋದವರಿಗೆ ಸಹಾಯವಾಗುತ್ತದೆ. ಇಲ್ಲಿ ರೆಡಿಮೇಡ್ ಸೀರೆ ಹಾಗೂ ಬ್ಲೌಸ್ ಕೂಡ ಸಿಗುತ್ತದೆ. ಹ್ಯಾಂಡ್ ವರ್ಕ್ ಸೀರೆಗಳು ಇಲ್ಲಿ ಸಿಗುತ್ತದೆ ಇದು 500-1000 ದವರೆಗೂ ಸಿಗುತ್ತದೆ. ಹೆವ್ವಿ ಸೀರೆಗಳು ಇವೆ ಅವು 900-1000 ರೂ ವರೆಗೆ ಸಿಗುತ್ತದೆ. ಆನಲೈನ್ ವೆಬ್ ಸೈಟ್ ಮೂಲಕ ಖರೀದಿ ಮಾಡಬಹುದು. ಸಿಲ್ಕ್ ಸೀರೆಗಳಾದರೆ 500-2,000 ರೂ ವರೆಗೆ ಸಿಗುತ್ತದೆ. ಸಿಂಥೆಟಿಕ್ ಕಾಟನ್ ಸೀರೆಗಳು ಸಿಗುತ್ತದೆ ಇವು 400ರೂಪಾಯಿಯಿಂದ ಸಿಗುತ್ತದೆ. ಬೆಂಗಳೂರಿಯನ್ ಪ್ಯಾಟರ್ನ್ ಸೀರೆಗಳು ಸಿಗುತ್ತದೆ. ಡಿಜಿಟಲ್ ಪ್ರಿಂಟ್ ಸೀರೆಗಳು ಸಿಗುತ್ತದೆ. ಆನಲೈನ್ ಬಗ್ಗೆ ಗೊತ್ತಿರದ ಹಳ್ಳಿ ಜನರು ಕಸ್ಟಮರ್ ಕೇರ್ ನಂಬರ್ ಇರುತ್ತದೆ ಆ ನಂಬರ್ ಗೆ ಕರೆ ಮಾಡಿದರೆ ಮಾಹಿತಿಯನ್ನು ಕೊಡುತ್ತಾರೆ ಮತ್ತು ಆರ್ಡರ್ ತೆಗೆದುಕೊಂಡು ಸೀರೆಗಳನ್ನು ಕೋರಿಯರ್ ಮಾಡುತ್ತಾರೆ. ಇಲ್ಲಿ ಸಿಗದೆ ಇರುವ ಸೀರೆ ಡಿಸೈನ್, ಕಲರ್ ಗಳೆ ಇಲ್ಲ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.