ಒಂದೇ ಮಷೀನ್ ನಲ್ಲಿ ಮನೆಯಲ್ಲಿಯೇ ಸುಲಭವಾಗಿ 10-15 ಬಿಸಿನೆಸ್ ಮಾಡಬಹುದು ಮಷೀನ್ ಬಗ್ಗೆ ಹಾಗೂ ಯಾವ ರೀತಿ ಬಿಸಿನೆಸ್ ಮಾಡಬೇಕೆಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಹೀಟ್ ಪ್ರೆಸ್ಸ್ ಮಷೀನ್ ಇದರಲ್ಲಿ ಟಿ ಶರ್ಟ್, ಪ್ಲೇಟ್ಸ್, ಕಪ್ಸ್, ಕ್ಯಾಪ್, ಮಾಸ್ಕ್, ಬ್ಯಾಗ್, ಬ್ಲಾಂಕೆಟ್, ಬೊಟ್ಟಲ್, ಟೈಲ್ಸ್, ಮೊಬೈಲ್ ಕವರ್ ಪ್ರಿಂಟಿಂಗ್ ಮಾಡಬಹುದು. ಒಂದೇ ಮಷೀನ್ ನಲ್ಲಿ ಇವೆಲ್ಲ ಪ್ರಿಂಟ್ ಮಾಡಬಹುದು. ಸಬ್ಲಿಮೇಷನ್ ಪೇಪರ್ ಮೇಲೆ ಬೇಕಾಗಿರುವ ಫೋಟೋವನ್ನು ಸಬ್ಲಿಮೇಷನ್ ಇಂಕ್ ಬಳಸಿ ಪ್ರಿಂಟ್ ಮಾಡಿ ಇದನ್ನು ಟೀ ಶರ್ಟ್ ಮೇಲೆ ಇಟ್ಟು ಹೀಟ್ ಪ್ರೆಸ್ಸ್ ಮಷೀನ್ 300 ಡಿಗ್ರಿ ಸೆಲ್ಸಿಯಸ್ ಇಟ್ಟುಕೊಂಡು ಪ್ರೆಸ್ಸ್ ಮಾಡಿ 30 ಸೆಕೆಂಡ್ಸ್ ಟೈಮ್ ಇಡಬೇಕು ನಂತರ ತೆಗೆದರೆ ಟೀ ಶರ್ಟ್ ಮೇಲೆ ಪ್ರಿಂಟ್ ಆಗುತ್ತದೆ. ಪ್ಲೇಟ್ಸ್ ಪ್ರಿಂಟ್ ಮಾಡುವಾಗ 350 ಡಿಗ್ರಿ ಸೆಲ್ಸಿಯಸ್ ಟೆಂಪರೇಚರ್ ಇರಬೇಕು ಹಾಗೂ 80 ಸೆಕೆಂಡ್ಸ್ ಟೈಮ್ ಇಟ್ಟು ಪ್ಲೇಟ್ ಮೇಲೆ ಪ್ರಿಂಟ್ ತೆಗೆದ ಸಬ್ಲಿಮೇಷನ್ ಪೇಪರ್ ಇಟ್ಟು ಪ್ರೆಸ್ಸ್ ಮಾಡಬೇಕು. ಕಪ್ಸ್ ಪ್ರಿಂಟ್ ಮಾಡುವಾಗ 350 ಡಿಗ್ರಿ ಸೆಲ್ಸಿಯಸ್ ಟೆಂಪರೇಚರ್ ಮತ್ತು 120 ಸೆಕೆಂಡ್ಸ್ ಟೈಮ್ ಇಟ್ಟು ಪ್ರಿಂಟ್ ತೆಗೆದ ಸಬ್ಲಿಮೇಷನ್ ಪೇಪರ್ ನ್ನು ಕಪ್ ಮೇಲೆ ಅಟ್ಯಾಚ್ ಮಾಡಿ ಪ್ರೆಸ್ ಮಾಡಬೇಕು.

ಕ್ಯಾಪ್ ಪ್ರಿಂಟ್ ಮಾಡುವಾಗ ಮಷೀನ್ ಸೆಟ್ ಮಾಡಿ 350 ಡಿಗ್ರಿ ಸೆಲ್ಸಿಯಸ್ ಟೆಂಪರೇಚರ್ ಮತ್ತು 80 ಸೆಕೆಂಡ್ಸ್ ಟೈಮ್ ಇಟ್ಟು ಕ್ಯಾಪ್ ಮೇಲೆ ಪ್ರಿಂಟ್ ತೆಗೆದ ಸಬ್ಲಿಮೇಷನ್ ಪೇಪರ್ ಇಟ್ಟು ಪ್ರೆಸ್ ಮಾಡಬೇಕು ನಂತರ 80 ಸೆಕೆಂಡ್ಸ್ ಆದ ನಂತರ ಪೇಪರ್ ತೆಗೆಯಬೇಕು. ಮಾಸ್ಕ್ ಪ್ರಿಂಟ್ ಮಾಡುವಾಗ 350 ಡಿಗ್ರಿ ಸೆಲ್ಸಿಯಸ್ ಟೆಂಪರೇಚರ್ ಮತ್ತು 60 ಸೆಕೆಂಡ್ಸ್ ಟೈಮ್ ಇಟ್ಟು ಮಾಸ್ಕ್ ಮೇಲೆ ಪ್ರಿಂಟ್ ತೆಗೆದ ಸಬ್ಲಿಮೇಷನ್ ಪೇಪರ್ ಇಟ್ಟು ಪ್ರೆಸ್ ಮಾಡಬೇಕು. ಮಷೀನ್ 15,500 ರೂ ಗೆ ಸಿಗುತ್ತದೆ. ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಇಲ್ಲದಿದ್ದರೆ 9,800ರೂ ಗೆ ಅಮೇಜಾನ್ ನಲ್ಲಿ ಸಿಗುತ್ತದೆ. ಸಬ್ಲಿಮೇಷನ್ ಪ್ರಿಂಟರ್ ಹಾಗೂ ಇಂಕ್ ಬೇಕಾದರೆ 25,000ರೂ ಖರ್ಚಾಗುತ್ತದೆ. ಪ್ಲೇನ್ ಟೀ ಶರ್ಟ್, ಪ್ಲೇಟ್ಸ್, ಕಪ್ಸ್ ಗಳನ್ನು ಹೋಲ್ ಸೇಲ್ ನಲ್ಲಿ ಖರೀದಿ ಮಾಡಬಹುದು. ಇದರಿಂದ ಹೆಚ್ಚು ಲಾಭವನ್ನು ಗಳಿಸಬಹುದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *