ಸಾಮಾನ್ಯವಾಗಿ ಹೆಣ್ಣುಮಕ್ಕಳು ಬಟ್ಟೆ ಖರೀದಿಸಲು ಹೋದರೆ ಅಂಗಡಿಗಳಲ್ಲಿ ನೂರೆಂಟು ಡಿಸೈನ್, ನೂರೆಂಟು ಕಲರ್ ತೋರಿಸಬೇಕಾಗುತ್ತದೆ, ತೋರಿಸಿದ ಮೇಲೂ ಇಷ್ಟವಾಗಲಿಲ್ಲ ಎನ್ನುವವರೇ ಹೆಚ್ಚು. ಬಟ್ಟೆ ತಯಾರಿಕೆಗೆ ಫೇಮಸ್ಸಾದ ಸೂರತ್ ನಲ್ಲಿ ಸಾಯಿ ಧನ್ ಎನೆಕ್ಸ್ ಎಂಬ ಬೃಹತ್ ಅಂಗಡಿಯಲ್ಲಿ ವಿವಿಧ ರೀತಿಯ ಡಿಸೈನ್, ಕಲರ್ ನ ಹೆಣ್ಣುಮಕ್ಕಳು ಧರಿಸುವ ಲೆಗ್ಗಿಂಗ್ಸ್, ಕುರ್ತಾ ಪ್ಲಾಸೋ, ಸೀರೆಗಳು ಸಿಗುತ್ತವೆ. ಹಾಗಾದರೆ ಸಾಯಿ ದನ್ ಎನೆಕ್ಸ್ ಅಂಗಡಿಯಲ್ಲಿ ಯಾವ ಯಾವ ರೀತಿಯ ಡ್ರೆಸ್ ಗಳು ಸಿಗುತ್ತವೆ ಹಾಗೂ ಖರೀದಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಸೂರತ್ ಬಗ್ಗೆ ಎಲ್ಲರೂ ಕೇಳಿರುತ್ತೇವೆ, ಅಲ್ಲಿಯ ಸಾಯಿ ಧನ್ ಎನೆಕ್ಸ್ ಅಂಗಡಿಯಲ್ಲಿ ಹೆಣ್ಣುಮಕ್ಕಳು ಧರಿಸುವ ಕೂರ್ತಿಸ್, ಚೂಡಿದಾರ್, ಸೀರೆಗಳು ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಇಲ್ಲಿ ಹಲವಾರು ಕೆಟಲಾಗ್ ಇದ್ದು ಒಂದೊಂದು ಕೆಟಲಾಗ್ ನಲ್ಲಿ ಬೇರೆ ಬೇರೆ ಕಲರ್, ಬೇರೆ ಬೇರೆ ಡಿಸೈನ್ ಬರುತ್ತದೆ. ಕಾಟನ್ ಬಟ್ಟೆಯ ಮೇಲೆ ಡಿಜಿಟಲ್ ಪ್ರಿಂಟ್ ಸುಂದರವಾಗಿ ಕಾಣಿಸುತ್ತದೆ. ಇಲ್ಲಿ ಸಿಗುವ ಎಲ್ಲಾ ಬಟ್ಟೆಗಳು ಬ್ರಾಂಡೆಡ್ ಆಗಿರುತ್ತದೆ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಯಾವ ರೀತಿಯ ಡಿಸೈನ್ ಕಲರ್, ಪ್ಯಾಟರ್ನ್ ಬೇಕು ಆ ರೀತಿಯ ಬಟ್ಟೆಗಳು ಇಲ್ಲಿ ಸಿಗುತ್ತದೆ. ಹಬ್ಬ-ಹರಿದಿನಗಳಲ್ಲಿ ಹಾಕಿಕೊಳ್ಳುವಂತಹ ಗ್ರ್ಯಾಂಡ್ ಡ್ರೆಸ್ ಗಳು ಕೂಡ ಸಿಗುತ್ತದೆ. ಬಟ್ಟೆಯ ಮೇಲೆ ಹ್ಯಾಂಡ್ ವರ್ಕ್, ಎಂಬ್ರಾಯಿಡರಿ ವರ್ಕ್ ಇರುತ್ತದೆ. ಸೀರೆಗಳು, ಪ್ಲಾಸೋ, ಕುರ್ತಾ ಹೀಗೆ ಹೆಣ್ಣುಮಕ್ಕಳು ಧರಿಸುವ ಎಲ್ಲಾ ರೀತಿಯ ಬಟ್ಟೆಗಳು ಇಲ್ಲಿ ಸಿಗುತ್ತದೆ. ಕುರ್ತಾ ಮೇಲೆ ಡಿಸೈನ್ ಬೇಕಾದರೂ ಇರುತ್ತದೆ ಅಥವಾ ಪ್ಲೇನ್ ಕುರ್ತಾ ಕೂಡ ಸಿಗುತ್ತದೆ.
ಇಲ್ಲಿ ಸಿಗುವ ಎಲ್ಲಾ ಬಟ್ಟೆಗಳು ಕ್ವಾಲಿಟಿ ಬಟ್ಟೆಗಳಾಗಿರುತ್ತವೆ. ಬೇರೆ ಬೇರೆ ರಾಜ್ಯ, ದೇಶಗಳಿಗೆ ಇಲ್ಲಿ ತಯಾರಾಗುವ ಬಟ್ಟೆಗಳು ರಫ್ತಾಗುತ್ತವೆ. ಕಾಟನ್ ಬಟ್ಟೆಯ ಮೇಲೆ ಸಿಲ್ಕ್ ನಿಂದ ಮಾಡಿದ ಡಿಸೈನ್ ಗಳನ್ನು ಇಲ್ಲಿ ನೋಡಬಹುದು. ಕುರ್ತಾ ಕೆಳಗಡೆ ಸಣ್ಣ ಬಾರ್ಡರ್, ಕುತ್ತಿಗೆಯ ಭಾಗದಲ್ಲಿ ಬಾರ್ಡರ್, ಉಳಿದಂತೆ ಪ್ಲೇನ್ ಇರುತ್ತದೆ. ಇಲ್ಲಿ ಸಿಗುವ ಕುರ್ತಾ, ಚೂಡಿದಾರ್ ಗಳು ಸಣ್ಣ ಸೈಜಿನಲ್ಲಿ ಇರುವುದಿಲ್ಲ ಬೇಕಾದಷ್ಟು ದೊಡ್ಡ ಸೈಜಿನಲ್ಲಿ ಸಿಗುತ್ತದೆ. ಇಲ್ಲಿ ಸಂಪ್ರದಾಯಿಕವಾಗಿರುವ ಡ್ರೆಸ್ ಗಳು ಸಿಗುತ್ತದೆ, ಫ್ಯಾನ್ಸಿ ಆಗಿರುವ ಡ್ರೆಸ್ ಗಳು ಸಿಗುತ್ತದೆ. ಹೆವಿ ವರ್ಕ್ ಇರುವ ಡ್ರೆಸ್ ಗಳು ಸಿಗುತ್ತವೆ, ಸಿಂಪಲ್ ಆಗಿರುವ ಡ್ರೆಸ್ ಗಳು ಕೂಡ ಇಲ್ಲಿ ಸಿಗುತ್ತವೆ. ಇಲ್ಲಿ ಬನಾರಸ್ ದುಪಟ್ಟಾ, ಕುರ್ತಾ ಕೂಡ ಸಿಗುತ್ತದೆ ಈ ರೀತಿಯ ಬಟ್ಟೆಗಳು ಖಂಡಿತ ಹೆಣ್ಣುಮಕ್ಕಳಿಗೆ ಇಷ್ಟವಾಗುತ್ತದೆ. ಒಂದು ಡ್ರೆಸ್ ಮಟೀರಿಯಲ್ ಗಿಂತ ಇನ್ನೊಂದು ಡ್ರೆಸ್ ಮಟೀರಿಯಲ್ ನೋಡಲು ಸುಂದರವಾಗಿದೆ ಹಾಗೂ ಉತ್ತಮ ಕ್ವಾಲಿಟಿ ಹೊಂದಿದೆ. ಡಾರ್ಕ ಕಲರ್ ಡ್ರೆಸ್ ಮಟೀರಿಯಲ್ ಕೂಡ ಸಿಗುತ್ತದೆ, ಲೈಟ್ ಕಲರ್ ಡ್ರೆಸ್ ಮಟೀರಿಯಲ್ ಮೇಲೆ ಗ್ರ್ಯಾಂಡ್ ಡಿಸೈನ್ ಇರುವಂತಹ ಡ್ರೆಸ್ ಮಟೀರಿಯಲ್ ಗಳು ಕೂಡ ಸಿಗುತ್ತದೆ. ಸಣ್ಣದಾಗಿರುವ ಬಾರ್ಡರ್ ಇರುವ ಡ್ರೆಸ್ ಮಟೀರಿಯಲ್ ಕೂಡ ಸಿಗುತ್ತದೆ, ಹೆಚ್ಚಿನ ಪ್ರಮಾಣದಲ್ಲಿ ಬಾರ್ಡರ್ ಇರುವಂತಹ ಡ್ರೆಸ್ ಮಟೀರಿಯಲ್ ಗಳು ಕೂಡ ಸಿಗುತ್ತದೆ. ಕುರ್ತಾ ಮತ್ತು ಪ್ಯಾಂಟ್ ಡಿಸೈನ್ ಇದ್ದು ದುಪಟ್ಟಾ ಪ್ಲೇನ್ ಇದ್ದು ಸಣ್ಣ ಬಾರ್ಡರ್ ಇರುತ್ತದೆ ಮತ್ತು ಕುರ್ತಾ ಮತ್ತು ಪ್ಯಾಂಟ್ ಪ್ಲೇನ್ ಆಗಿದ್ದು ದುಪಟ್ಟಾ ಹೆವಿ ಡಿಸೈನ್ ಇಂದ ಕೂಡಿರುತ್ತದೆ.
ಕೆಲವು ಡ್ರೆಸ್ ಮಟೀರಿಯಲ್ ಸಾಫ್ಟ್ ಬಟ್ಟೆ ಆಗಿದ್ದರೆ, ಇನ್ನು ಕೆಲವು ಕಾಟನ್ ಬಟ್ಟೆ ಆಗಿರುತ್ತದೆ. ಇಲ್ಲಿ ಸಿಗುವ ಕಲರ್, ಡಿಸೈನ್ ಮತ್ತೆಲ್ಲೂ ಸಿಗುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಇಲ್ಲಿ 150 ರೂಪಾಯಿಂದ ಸ್ಟಾರ್ಟ್ ಆಗುತ್ತದೆ. ಕೋವಿಡ್ 19 ಇರುವುದರಿಂದ ಸೂರತ್ ಗೆ ಹೋಗಿ ಬಟ್ಟೆ ಪರ್ಚೆಸ್ ಮಾಡಲು ಆಗದೆ ಇದ್ದರೆ ಮನೆಯಿಂದಲೇ ವಾಟ್ಸಪ್ ಮೂಲಕ, ಇನ್ಸ್ಟಾಗ್ರಾಮ್ ಮೂಲಕ ಆರ್ಡರ್ ಮಾಡಬಹುದು. ನಿಮಗೆ ಬೇಕಾದ ಕುರ್ತಾದ ಫೋಟೋವನ್ನು ಹೊಡೆದು ಅವರಿಗೆ ಕಳುಹಿಸಿದರೆ ಅವರು ನಿಮ್ಮ ಮನೆಗೆ ತಲುಪಿಸುತ್ತಾರೆ. ಆನ್ಲೈನ್ ಆರ್ಡರ್ ಮಾಡುವ ಮೂಲಕ ಯಾವುದೇ ರೀತಿಯಲ್ಲಿ ನಿಮಗೆ ಮೋಸ ಆಗುವುದಿಲ್ಲ. ಈ ಫ್ಯಾಕ್ಟರಿಯಲ್ಲಿ ಎಲ್ಲಾ ರೀತಿಯ ಬಟ್ಟೆಗಳು ತಯಾರಾಗುವುದರಿಂದ ಹೆಣ್ಣುಮಕ್ಕಳಿಗೆ ಇಲ್ಲಿಯ ಬಟ್ಟೆಗಳು ಖಂಡಿತ ಇಷ್ಟವಾಗುತ್ತದೆ. ಮದುವೆ, ಸಮಾರಂಭಗಳಿದ್ದಾಗ ಈ ಫ್ಯಾಕ್ಟರಿಯಿಂದ ಬಟ್ಟೆ ಖರೀದಿಸುವುದರಿಂದ ಕಡಿಮೆ ಬೆಲೆಯಲ್ಲಿ ಹೆಚ್ಚು ಬಟ್ಟೆಗಳನ್ನು ಖರೀದಿಸಬಹುದು. ಈ ಫ್ಯಾಕ್ಟರಿಯಲ್ಲಿ ಡಿಸ್ಕೌಂಟ್ ಕೂಡ ಚೆನ್ನಾಗಿದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲಾ ಹೆಣ್ಣುಮಕ್ಕಳಿಗೆ ತಿಳಿಸಿ ಹಾಗೆಯೇ ಸೂರತ್ ಕಡೆ ಹೋಗುವ ಅನುಕೂಲವಿದ್ದರೆ ಅಥವಾ ಸೂರತ್ ಗೆ ಹೋಗುವ ಕೆಲಸವಿದ್ದರೆ ಒಮ್ಮೆ ಸಾಯಿ ಧನ್ ಎನೆಕ್ಸ್ ಅಂಗಡಿಗೆ ಭೇಟಿ ನೀಡಿ.