ಸರ್ಕಾರವು ಸಾರ್ವಜನಿಕರಿಗಾಗಿ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಗಳಲ್ಲಿ ಇದರ ಸೌಲಭ್ಯವಿರುತ್ತದೆ ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಹೆಣ್ಣು ಮಕ್ಕಳಿಗೋಸ್ಕರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮತ್ತು ಎಲ್ಲಾ ವ್ಯಕ್ತಿಗಳಿಗೆ ಸಾರ್ವಜನಿಕ ಭವಿಷ್ಯ ನಿಧಿ ಎನ್ನುವ ಎರಡು ಯೋಜನೆಗಳನ್ನು ಸರಕಾರವು ಜಾರಿಗೆ ತಂದಿದೆ ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುತ್ತದೆ ಯೋಜನೆಯಲ್ಲಿ ಹೆಣ್ಣು ಮಕ್ಕಳು ಮಾತ್ರ ಖಾತೆಯನ್ನು ತೆಗೆಯಬೇಕಾಗುತ್ತದೆ ಒಂದು ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳಿದ್ದರೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಖಾತೆಯನ್ನು ತೆಗೆಯಬಹುದು

ಸುಕನ್ಯಾ ಯೋಜನೆ 10 ವರ್ಷದ ಒಳಗಿನ ಹೆಣ್ಣುಮಕ್ಕಳು ಖಾತೆಯನ್ನು ತೆಗೆಯಬಹುದು ಮತ್ತು ತಮ್ಮನಾಮಿನಿಯನ್ನು ಸಹ ನೀಡಬಹುದು ಇನ್ನೂ ಈ ಯೋಜನೆಯ ಮುಕ್ತಾಯ ಅವಧಿ ಇಪ್ಪತ್ತೊಂದು ವರ್ಷಗಳ ತನಕ ಇರುವುದು ಹಾಗೂ ಖಾತೆಯಲ್ಲಿ ಹೂಡಿಕೆಯನ್ನು ಹದಿನಾಲ್ಕು ವರ್ಷ ಹಾಕಬೇಕು ಈ ಯೋಜನೆಯಲ್ಲಿ ಕಡಿಮೆ ದರ ಅಂದ್ರೆ 250 ರೂಪಾಯಿಯಿಂದ ಗರಿಷ್ಟ ಒಂದೂವರೆ ಲಕ್ಷ ತನಕ ಖಾತೆಯಲ್ಲಿ ಹೂಡಿಕೆ ಮಾಡಬಹುದು ಪ್ರತಿ ತಿಂಗಳು ಇಲ್ಲವೇ ವರ್ಷಕ್ಕೆ ಒಂದೇ ಸಲ ಆದರೂ ಠೇವಣಿಯನ್ನು ಮಾಡಬಹುದು

ಈ ಹಣದ ಮೇಲೆ ಯಾವುದೇ ಲೋನ್ ಗಳನ್ನು ತೆಗೆದು ಕೊಳ್ಳಲು ಸಾಧ್ಯವಿಲ್ಲ ಒಮ್ಮೆ ಖಾತೆದಾರ ಹದಿನೆಂಟು ವರ್ಷ ತುಂಬಿದ ಬಳಿಕ ಉನ್ನತ ವಿದ್ಯಾಭ್ಯಾಸ ಸಲುವಾಗಿ ಇಲ್ಲವೇ ಮದುವೆಯ ಸಲುವಾಗಿ 50% ಹಣವನ್ನು ತೆಗೆದುಕೊಳ್ಳುವ ಅವಕಾಶ ಇರುವುದು ಹೊಡಿಕೆಯ ಹಣದ ಮೇಲೆ 7.6% ಬಡ್ಡಿದರ ಹೊಂದಿದೆ ತಿಂಗಳು 12500 ಠೇವಣಿ ಮಾಡಿದ್ದಲ್ಲಿ ವರ್ಷಕ್ಕೆ ಒಂದು ಲಕ್ಷದ ಐವತ್ತು ಸಾವಿರ ಆಗುವುದು

ಹಾಗಾದರೆ ನಮಗೆ ಹದಿನಾಲ್ಕು ವರ್ಷ ಒಟ್ಟು ಹೊದಿಕೆ 2100000 ಇನ್ನೂ ಬಡ್ಡಿಯೂ 4037260 ಒಟ್ಟಾಗಿ 21 ವರ್ಷದ ಬಳಿಕ ಖಾತೆಯಲ್ಲಿ 6137260 ಜಮೆ ಆಗಿರುವುದು ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಇಲ್ಲ ಯಾವುದೇ ಅಂಚೆ ಕಚೇರಿ ಹಾಗೂ ಎಲ್ಲಾ ಬ್ಯಾಂಕ್ ಗಳಲ್ಲಿ ಯಾವುದೇ ಭಾಗದಲ್ಲಿ ಇದ್ದರೂ ಕೂಡ ತೆರೆಯಬಹುದು ಮತ್ತು ವರ್ಗಾವಣೆಯನ್ನು ಸಹ ಮಾಡಬಹುದು ಇದು ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತ

ಸಾರ್ವಜನಿಕ ಭವಿಷ್ಯ ಯೋಜನಾ ನಿಧಿ ಅಡಿಯಲ್ಲಿ ಯಾವುದೇ ವಯೋಮಿತಿ ಇರುವುದಿಲ್ಲ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸು ಆದವರು ಕೂಡ ತೆರೆಯಬಹುದು ಹಾಗೂ ಈ ಯೋಜನೆಯ ಮುಕ್ತಾಯದ ಅವಧಿ ಹದಿನೈದು ವರ್ಷ ಬೇಕಾದಲ್ಲಿ ಐದು ವರ್ಷ ವಿಸ್ತರಿಸಬಹುದು ಇನ್ನೂ ಹೂಡಿಕೆ ಕಡಿಮೆ ಅಂದರೆ 500 ರೂಪಾಯಿಯಿಂದ ಗರಿಷ್ಟ ಒಂದೂವರೆ ಲಕ್ಷದ ತನಕ ಮಾಡಬಹುದು ಪ್ರತಿ ತಿಂಗಳು ಇಲ್ಲವೇ ವರ್ಷಕೊಮ್ಮೆ ಹೂಡಿಕೆ ಮಾಡಬಹುದು ಇನ್ನು ಹೂಡಿಕೆ ಮಾಡಿದ ಹಣದ ಮೇಲೆ ಲೋನ್ ಅನ್ನು ಕೂಡ ತೆಗೆದುಕೊಳ್ಳಬಹುದು

ಈ ಯೋಜನೆಯಲ್ಲಿ ಖಾತೆದಾರ ಐದು ವರ್ಷ ಆದಮೇಲೆ ಲೋನ್ ಅನ್ನು ಐದು ವರ್ಷ ಆದಮೇಲೆ ಹಣವನ್ನು ತೆಗೆದುಕೊಳ್ಳುವ ಅವಕಾಶ ಹೂಡಿಕೆಯ ಮೇಲೆ 7.1% ಅಷ್ಟು ಬಡ್ಡಿದರ ವನ್ನು ಹೊಂದಿದೆ ಪ್ರತಿ ತಿಂಗಳು 12500 ಹಣವನ್ನು ಜಮೆ ಮಾಡಿದ್ದಲ್ಲಿ ಒಟ್ಟು ಹೂಡಿಕೆ 2250000 ಹಾಗೂ ಬಡ್ಡಿಯೂ 1818209 ಆಗುವುದು ಒಟ್ಟಾಗಿ ಕೊನೆಗೆ 4068209 ಹಣವು ನಮ್ಮ ಖಾತೆಯಲ್ಲಿ ಜಮೆ ಆಗುವುದು ಒಟ್ಟಾರೆ ಈ ಎರಡು ಯೋಜನೆ ಅನ್ನು ನೋಡಿದ್ದಲ್ಲಿ ಸುಕನ್ಯಾ ಸಮೃದ್ಧ ಯೋಜನೆ ಅಲ್ಲಿ ನಮಗೆ ಜಾಸ್ತಿ ಲಾಭ ಗಳಿಸಬಹುದು ಆದಷ್ಟು ಇದರ ಉಪಯೋಗ ಪಡೆಯಬಹುದು ಒಮ್ಮೆ ಹತ್ತಿರದ ಅಂಚೆ ಕಚೇರಿ ಇಲ್ಲವೇ ಬ್ಯಾಂಕ್ ಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದು ಈ ಯೋಜನೆಯ ಸದುಪಯೋಗ ಪಡೆಯಿರಿ.

Leave a Reply

Your email address will not be published. Required fields are marked *