ಕಬ್ಬಿನ ಹಾಲು ಅಥವಾ ಕಬ್ಬಿನ ರಸ ದೇಹದ ಶಾಖದ ಪ್ರತಿಕ್ರಿಯೆಯನ್ನು ನಿರ್ವಹಿಸುತ್ತದೆ ಇದು ಹೊಟ್ಟೆಯನ್ನು ತಂಪಾಗಿರುವಂತೆ ಮಾಡುತ್ತದೆ. ಕೇವಲ ಹತ್ತು ಅಥವಾ ಹದಿನೈದು ರೂಪಾಯಿಗೆ ದೊರೆಯುವ ಪೋಷಕಾಂಶಗಳ ಪಾನೀಯವನ್ನು ಆರೋಗ್ಯದ ದೃಷ್ಟಿಯಿಂದ ಕುಡಿಯುವುದು ಒಳ್ಳೆಯದು. ಕಬ್ಬಿನ ರಸವು ಕರುಳನ್ನು ತೆರವುಗೊಳಿಸುವುದಕ್ಕೆ ಸಹಾಯ ಮಾಡುವುದಲ್ಲದೆ ಚಯಾಪಚಯವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ ಚಳಿಗಾಲದಲ್ಲಿ ಕಬ್ಬಿನ ರಸವು ಅತ್ಯುತ್ತಮವಾದ ಪಾನೀಯವಾಗಿದೆ. ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ನೀರನ್ನು ಕುಡಿಯುವುದನ್ನು ಸಂಪೂರ್ಣವಾಗಿ ಮರೆಯುತ್ತಾರೆ.
ಅಂತವರು ದ್ರವ ಪದಾರ್ಥದಲ್ಲಿರುವ ಕಬ್ಬಿನ ರಸವನ್ನು ಕುಡಿಯುವುದರಿಂದ ಏನೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಕಬ್ಬಿನ ರಸವನ್ನು ಕೇವಲ ಬೇಸಿಗೆಗಾಲದಲ್ಲಿ ಮಾತ್ರವಲ್ಲ ಚಳಿಗಾಲದಲ್ಲಿಯು ಕುಡಿಯುವುದಕ್ಕೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಕಬ್ಬಿನರಸವನ್ನು ಕುಡಿಯುವುದು ಒಳ್ಳೆಯದು. ಚಳಿಗಾಲದಲ್ಲಿ ಕೆಲವರು ನೀರು ಕುಡಿಯುವುದನ್ನು ಕೈಬಿಟ್ಟಿರುತ್ತಾರೆ ಅಂತವರು ಬೆಳಿಗ್ಗೆ ಒಂದು ಲೋಟ ಕಬ್ಬಿನ ರಸವನ್ನು ಕುಡಿಯುವುದರಿಂದ ಅನೇಕ ಲಾಭವನ್ನು ಪಡೆಯುವುದುಕೊಳ್ಳಬಹುದು. ವಾಸ್ತವವಾಗಿ ಕಬ್ಬಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಆದ್ದರಿಂದ ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದರಲ್ಲಿ ಕಬ್ಬಿಣ ಮ್ಯಾಗ್ನಿಶಿಯಂಗಳು ಕ್ಯಾಲ್ಸಿಯಂ ಗಳು ಸಮೃದ್ಧವಾಗಿರುತ್ತವೆ ಹಾಗಾಗಿ ಇದು ನಿರ್ಜಲೀಕರಣಕ್ಕೆ ಅತ್ಯುತ್ತಮವಾಗಿದೆ. ಕಬ್ಬಿನ ಹಾಲು ಚಳಿಗಾಲದಲ್ಲಿ ಉಂಟಾಗುವ ಶೀತ ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡುತ್ತದೆ. ದೇಹದ ಪ್ರೋಟೀನ್ ಮಟ್ಟವನ್ನು ಹೆಚ್ಚಿಸಿ ಜ್ವರ ಬರದಂತೆ ಕಾಪಾಡುತ್ತದೆ ಕಬ್ಬಿನ ರಸವು ಶಕ್ತಿ ಪಾನೀಯವಾಗಿ ಕೆಲಸವನ್ನು ನಿರ್ವಹಿಸುತ್ತದೆ. ಒಂದು ಲೋಟ ತಾಜಾ ಕಬ್ಬಿನ ರಸ ದೇಹದಲ್ಲಿ ಕ್ಷೀಣಿಸುತ್ತಿರುವ ಶಕ್ತಿಯ ಮಟ್ಟವನ್ನು ಪುನಹ ನಿರ್ಮಿಸಲು ಸಹಾಯ ಮಾಡುತ್ತದೆ. ಅಲ್ಲದೆ ಉತ್ಕರ್ಷಣ ನಿರೋಧಕಗಳಲ್ಲಿ ಶ್ರೀಮಂತವಾಗಿದ್ದು ಮೂತ್ರ ವರ್ಧಕವಾಗಿ ಕೆಲಸ ಮಾಡುತ್ತದೆ. ನಿಮ್ಮ ಯಕೃತ್ತಿನ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಆಯುರ್ವೇದದ ಪ್ರಕಾರ ನೀರು ಅಥವಾ ಜ್ಯೂಸ್ ಯಾವುದೇ ಆಗಲಿ ನಿಂತು ಕುಡಿಯಬಾರದು ಬದಲಾಗಿ ಕುಳಿತು ಕುಡಿಯಬೇಕು.
ಮುಖ್ಯವಾಗಿ ಕಬ್ಬಿನ ರಸವನ್ನು ಮಧ್ಯಾಹ್ನದ ಮೊದಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ ಪೌಷ್ಟಿಕ ತಜ್ಞರು ಇನ್ನು ಕಬ್ಬಿನ ಹಾಲನ್ನು ಮಧುಮೇಹ ಹೊಂದಿರುವವರು ಕುಡಿಯಬಹುದೇ ಎಂಬ ಸಂದೇಹ ಕೆಲವರಲ್ಲಿರುತ್ತದೆ. ಮಧುಮೇಹ ಇರುವವರು ನಿಸ್ಸಂದೇಹವಾಗಿ ಕಬ್ಬಿನ ಹಾಲಿನ್ನು ಕುಡಿಯಬಹುದು ಯಾಕೆಂದರೆ ಇದು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ತೀವ್ರವಾಗಿ ಬದಲಾವಣೆ ಮಾಡುವುದಿಲ್ಲ ಎಂದು ಅಧ್ಯಯನವು ಸಾಬೀತುಪಡಿಸಿದೆ. ಮಧುಮೇಹ ಹೊಂದಿರುವ ವ್ಯಕ್ತಿಯಿಂದ ವ್ಯಕ್ತಿಗೆ ಅದು ಬದಲಾಗುವುದರಿಂದ ವೈದ್ಯರಿಂದ ಸಲಹೆ ಪಡೆದು ಕುಡಿಯಬಹುದು. ಇದೊಂದು ಮೂತ್ರವರ್ಧಕ ವಾಗಿರುವುದಿಲ್ಲದೆ ಅತ್ಯುತ್ತಮವಾದ ಚಿಕಿತ್ಸೆಯನ್ನು ನೀಡುತ್ತದೆ ಮುಖ್ಯವಾಗಿ ಮೂತ್ರನಾಳದ ಸೋಂಕುಗಳು ಮೂತ್ರಪಿಂಡದ ಕಲ್ಲುಗಳಿಗೆ ಅತ್ಯುತ್ತಮವಾದ ಚಿಕಿತ್ಸಕವಾಗಿದೆ.
ಆಯುರ್ವೇದದ ಪ್ರಕಾರ ಕಬ್ಬಿನರಸ ಯಕೃತ್ತಿನ್ನು ಬಲಪಡಿಸಲು ಸಹಾಯ ಮಾಡುತ್ತದೆ ಕಾಮಲೆ ಕಾಯಿಲೆಗೆ ಕಬ್ಬಿನಹಾಲು ಒಳ್ಳೆಯದು. ಕಬ್ಬಿನಹಾಲು ನಿಮ್ಮ ದೇಹ ಕಳೆದುಕೊಂಡಿರುವ ಪ್ರೋಟೀನ್ ಗಳನ್ನು ನೀಡಿ ತ್ವರಿತವಾಗಿ ಚೇತರಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ರೀತಿಯಾಗಿ ಕಬ್ಬಿನಹಾಲು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು ಆರೋಗ್ಯಕ್ಕೆ ತುಂಬಾ ಪೂರಕವಾಗಿದೆ ನೀವು ಕೂಡ ಕಬ್ಬಿನ ಹಾಲನ್ನು ಉಪಯೋಗಗಳನ್ನು ಪಡೆದುಕೊಳ್ಳಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.