ಸರಳ, ಸಜ್ಜನಿಕೆಯ ಸಾಕಾರ ಮೂರ್ತಿ ಸುಧಾಮೂರ್ತಿ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಸುಧಾಮೂರ್ತಿ ಅವರು ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಸುಧಾಮೂರ್ತಿ ಅವರ ಕುಟುಂಬದವರ ಬಗ್ಗೆ, ಅವರ ಮಕ್ಕಳು, ಮೊಮ್ಮಕ್ಕಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಸುಧಾಮೂರ್ತಿ ಅವರು ಕೇವಲ ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಚಿರಪರಿಚಿತರು. ಅವರನ್ನು ಈಗಿನ ಮದರ್ ಥೆರೇಸಾ ಎಂದರೆ ತಪ್ಪಾಗಲಾರದು. ಈಗಿನ ಯುವ ಜನತೆಗೆ ರೋಲ್ ಮಾಡೆಲ್ ಆಗಿರುವ ಅವರನ್ನು ಕರ್ನಾಟಕದ ಜನತೆ ಪ್ರೀತಿಯಿಂದ ಸುಧಾ ಅಮ್ಮಾ ಎಂದು ಕರೆಯುತ್ತಾರೆ, ಹೆಸರಿಗೆ ತಕ್ಕಂತೆ ಇವರು ಮಾತ್ರ ಸ್ವರೂಪಿಣಿ. ಬಡವರಿಂದ ಹಿಡಿದು ಭಿಕ್ಷುಕರು, ದೇವದಾಸಿಯರಿಗೆ ಇವರ ಸಹಾಯ ಹಸ್ತ ಯಾವಾಗಲೂ ಇರುತ್ತದೆ. ಇನ್ಫೋಸಿಸ್ ಫೌಂಡೇಶನ್ ಮೂಲಕ ಭಾರತದ ಯಾವುದೇ ಭಾಗದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಸುಧಾ ಮೂರ್ತಿ ಅವರು ಸಹಾಯದೊಂದಿಗೆ ಹಾಜರಾಗುತ್ತಾರೆ. ಸಜ್ಜನಿಕೆಯ ಸಾಕಾರ ಮೂರ್ತಿ, ಮಾತ್ರ ಹೃದಯಿ ಮತ್ತು ಅಷ್ಟೇ ಸರಳ ಉಡುಗೆ, ತೋಡುಗೆಯ ಸುಧಾ ಅಮ್ಮಾ ಕನ್ನಡಿಗರ ಕಣ್ಮಣಿ ಎಂತಲೆ ಹೇಳಬಹುದು. ಸುಧಾಮೂರ್ತಿ ಅಮ್ಮಾ ಅವರು 1950ರಲ್ಲಿ ಹಾವೇರಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರಿಗೆ ಈಗ ಎಪ್ಪತ್ತು ವರ್ಷ ವಯಸ್ಸು. ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರು ಮೊದಲು ಒಂದು ಕಂಪನಿಯಲ್ಲಿ ಭೇಟಿಯಾದರು ಪ್ರೀತಿಸಿ ನಂತರ ಮದುವೆಯಾದರು.
ಇವರಿಗೆ ರೋಹನ್ ಮತ್ತು ಅಕ್ಷತಾ ಮೂರ್ತಿ ಎಂಬ ಇಬ್ಬರು ಮಕ್ಕಳಿದ್ದಾರೆ. ರೋಹನ್ ಅವರು ಸ್ಟ್ಯಾಂಡ್ ಫೋರ್ಡ್ ಯೂನಿವರ್ಸಿಟಿಯಲ್ಲಿ ಪಿಎಚ್ ಡಿ ಮಾಡಿದ್ದು, ಬರೋಬ್ಬರಿ ಮೂರು ಸಾವಿರದ ಐನೂರು ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ರೋಹನ್ ಮೂರ್ತಿ ಅವರು 2011ರಲ್ಲಿ ಟಿವಿಎಸ್ ಕಂಪನಿಯ ಓನರ್ ಮಗಳಾದ ಲಕ್ಷ್ಮೀ ವೇಣು ಎಂಬುವವರನ್ನು ಮದುವೆಯಾಗಿದ್ದರು ಆದರೆ 2015ರಲ್ಲಿ ಪರಸ್ಪರ ಒಪ್ಪಿಗೆಯಿಂದ ಡೈವೋರ್ಸ್ ಪಡೆದಿದ್ದಾರೆ. ನಂತರ 2019ರಲ್ಲಿ ಅಪರ್ಣಾ ಕೃಷ್ಣನ್ ಅವರನ್ನು ಮದುವೆಯಾಗಿದ್ದಾರೆ. ಇನ್ನು ಸುಧಾ ಅಮ್ಮನವರ ಮಗಳು ಅಕ್ಷತಾ ಮೂರ್ತಿ ಅವರು ರಿಷಿ ಎಂಬುವವರನ್ನು ಮದುವೆಯಾಗಿದ್ದಾರೆ, ಇವರು ಸ್ಟ್ಯಾಂಡ್ ಫೋರ್ಡ್ ಯೂನಿವರ್ಸಿಟಿಯಲ್ಲಿ ವಿಧ್ಯಾಭ್ಯಾಸ ಮಾಡುವಾಗ ಭೇಟಿಯಾಗಿದ್ದರು, ನಂತರ ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆಯಾಗಿದ್ದಾರೆ. ರಿಷಿ ಅವರು ಬ್ರಿಟನ್ ನ ಹಣಕಾಸು ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸುಧಾ ಮೂರ್ತಿ ಅಮ್ಮನವರು ಇನ್ಫೋಸಿಸ್ ಫೌಂಡೇಶನ್ ಮೂಲಕ ವಿದ್ಯಾಭ್ಯಾಸ, ಆರೋಗ್ಯ, ಗ್ರಾಮೀಣ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದ್ದಾರೆ.
ಸುಧಾ ಮೂರ್ತಿ ಅವರು ಬಹಳಷ್ಟು ಆಸ್ತಿ ಹೊಂದಿದ್ದರು ಅವರು ಯಾವಾಗಲೂ ಬಂಗಾರವನ್ನು ಹಾಕುವುದಿಲ್ಲ. ನಾರಾಯಣ್ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ತಮ್ಮ ಸರಳತೆಯಿಂದ, ಸಮಾಜ ಸೇವೆಯಿಂದ ಫೇಮಸ್ ಆಗಿದ್ದಾರೆ. ಸುಧಾ ಮೂರ್ತಿ ಅವರು ಚಿಕ್ಕ ವಯಸ್ಸಿನಿಂದಲೆ ಧೈರ್ಯಶಾಲಿಯಾಗಿದ್ದರು ಅವರು ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್ ಓದುತ್ತಾರೆ. ಸುಧಾ ಮೂರ್ತಿ ಅವರು ಎಂಜಿನಿಯರಿಂಗ್ ಓದುವಾಗ ನೂರು ಜನ ಹುಡುಗರಲ್ಲಿ ಒಬ್ಬರಾಗಿ ಬಹಳ ಸಮಸ್ಯೆಯನ್ನು ಎದುರಿಸಿ ಎಂಜಿನಿಯರಿಂಗ್ ಓದುತ್ತಾರೆ. ಬಹಳ ಕಷ್ಟಪಟ್ಟು ನಾರಾಯಣ್ ಮೂರ್ತಿ ಹಾಗೂ ಸುಧಾ ಮೂರ್ತಿ ಅವರು ಇನ್ಫೋಸಿಸ್ ಕಂಪನಿಯನ್ನು ಪ್ರಾರಂಭಿಸುತ್ತಾರೆ. ಇಂದು ಬೃಹತ್ ಕಂಪನಿಯಾಗಿ ಹೊರ ಹೊಮ್ಮಿದೆ. ಸರಳಜೀವಿಯಾದ ಸುಧಾ ಮೂರ್ತಿಯವರ ಜೀವನ ನಿಜಕ್ಕೂ ಮಾದರಿಯಾಗಿದೆ.