Success Story Kannada: ಹೆಸರು ದೀಪಾಲಿ ಈಕೆ ಹುಟ್ಟಿದ್ದು ಗ್ವಾಲಿಯಾರ್ ನಲ್ಲಿ,ಇವರ ತಂದೆ ಇವರನ್ನು ತುಂಬಾ ಮುದ್ದಿನಿಂದ ಬೆಳೆಸಿದ್ದರು, ಹಾಗೆ ತುಂಬಾ ಚನ್ನಾಗಿ ಓದಿಸುತ್ತಿದ್ದರು,ದೀಪಾಲಿ ಗೆ ಐಎಎಸ್ (IAS )ಆಗಬೇಕೆಂಬ ಆಸೆ ಬಹಳಷ್ಟಿತ್ತು ಆದರೆ  ದೀಪಾಲಿ ಪಿಯುಸಿ (PUC) ಓದುವಾಗ ತನ್ನ ತಂದೆಯ ವ್ಯವಹಾರ ನಷ್ಟದಲ್ಲಿತ್ತು. ಮಗಳನ್ನು ಓದಿಸಲು ಕೂಡ ಆಶಕ್ತರಾಗಿದ್ದರು. ತನ್ನನ್ನು ಓದಿಸಲು ಆಗದ  ತಂದೆಯ ಸಂಕಷ್ಟದ ಸ್ಥಿತಿಯನ್ನು ಕಂಡ ದೀಪಾಲಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಟಿಫನ್ ತಯಾರಿ ಮಾಡಿ ಬೀದಿಗಳಲ್ಲಿ ಮಾರುತಿದ್ದಳು. ಅದರ ಜೊತೆ ಹಾಸ್ಟೆಲ್ಗಳಲ್ಲಿ ಅಡುಗೆ ಮಾಡಿ ಕೊಟ್ಟು ಬಂದ ಹಣದಲ್ಲಿ ಮನೆಯ ಖರ್ಚು ವೆಚ್ಚಗಳನ್ನು ಸಂಭಾಳಿಸುತ್ತಿದ್ದಳು.

ದೀಪಾಲಿ ಎಷ್ಟೇ ಕಷ್ಟ ಪಟ್ಟು ಏನೇಲ್ಲ ಕೆಲಸ ಮಾಡಿದರು ಕೈಯಲ್ಲಿ ಬಿಡಿಗಾಸು ಕೂಡ ನಿಲ್ಲುತ್ತಿರಲಿಲ್ಲ. ಆಗ ಮತ್ತೊಂದು ಕೆಲಸ ಹುಡುಕಿಕೊಂಡು ಇಂಧೋರ್ ಗೆ ಹೋದ ಈಕೆ ದಾಸ್ತಾನು ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಳು.. ಹೀಗೆ ಕೆಲವು ತಿಂಗಳುಗಳ ಕಳೆದ ದೀಪಾಲಿಗೆ ಒಂದು ಭರ್ಜರಿ ಉಪಾಯ ಹೊಳೆಯಿತು,ಪ್ರತಿ ದಿನ ಮಾರುಕಟ್ಟೆಯನ್ನು ನೋಡುತಿದ್ದ ಈಕೆ ಅದರಲ್ಲಿನ ಆಗೂ ಹೋಗುಗಳನ್ನು ಚನ್ನಾಗಿ ತಿಳಿದುಕೊಂಡಿದ್ದಳು, ಹಾಗಾಗಿ ನಾನ್ಯಾಕೆ ಮದ್ಯಾವರ್ತಿ ಕೆಲಸ ಮಾಡಿ ವ್ಯಾಪಾರ ಮಾಡಬಾರದು ಎನ್ನುವ ಆಲೋಚನೆ ಬಂದು ಗೋದಿ ವ್ಯಾಪಾರದಲ್ಲಿ ಬ್ರೋಕರ್ ಕೆಲಸ ಶುರು ಮಾಡಿದಳು.

ಬರೀ ಗಂಡಸರಿಗಷ್ಟೇ ಸೀಮಿತವಾಗಿದ್ದ ಟ್ರೇಡಿಂಗ್ ಕೆಲಸವನ್ನು ಹೆಣ್ಣು ಹುಡುಗಿಯಾಗಿ ತಾನು ಕೂಡ ಶುರು ಮಾಡಿದಳು.ಆಗ ಯಾರೊಬ್ಬರೂ ಈಕೆಯ ಬೆನ್ನ ಹಿಂದೆ ನಿಂತು ಹುರಿದುಂಬಿಸದೆ ಇವಳ ಕೈಲಿ ಆಗುವುದಿಲ್ಲವೆಂದು ಗೇಲಿ ಮಾಡಿ ನಗಾಡುತ್ತಿದ್ದರು.ಆದರೆ ಅದನ್ನೆಲ್ಲ ಬದಿಗಿಟ್ಟು ದಿನೇ ದಿನೇ ತಾನಂದುಕೊಂಡಿದ್ದ ಕೆಲಸವೆಲ್ಲ ಮಾಡುತ್ತ ಅದರಲ್ಲಿ ಜಯ ಗಳಿಸುತ್ತ ಒಂದೊಂದೇ ಮೆಟ್ಟಿಲನ್ನು ಸರಾಗವಾಗಿ ಹತ್ತಿ ಸ್ವತಃ ತಾನೇ ಒಂದು ಟ್ರೆಂಡಿಂಗ್ ಫಾರ್ಮ ಅನ್ನು ಸ್ಥಾಪನೆ ಮಾಡಿದಳು.ರೈತರು ಮತ್ತು ವ್ಯಾಪಾರಸ್ಥರ ನಂಬಿಕೆ ಗಳಿಸಿದ ದೀಪಾಲಿ ಬರೀ ಒಂದೇ ವರ್ಷದಲ್ಲಿ 60 ಕೋಟಿ ರೂಪಾಯಿ ವ್ಯಪಾರ ಮಾಡಿ ಎಲ್ಲರಿಗೂ ಅಚ್ಚರಿಯಾಗುವಂತೆ ಮಾಡಿದಳು.

ಹಾಗೆ ಪೂರ್ತಿ ಸಮಯ ಟ್ರೆಂಡಿಂಗ್ ಗೆಂದು ಮೀಸಲಿಟ್ಟ ಭಾರತದ ಪ್ರಥಮ ಮಹಿಳೆ ಎನ್ನುವ ಬಿರುದಿಗೆ ಪಾತ್ರಳಾಗಿದ್ದಾಳೆ. ನಮ್ಮ ಸುತ್ತ ಮುತ್ತ ಸಿಗುವ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು ಅದೆಷ್ಟು ಏತ್ತರಕ್ಕಾದರೂ ಬೆಳೆಯಬಹುದೆಂದು ತೋರಿಸಿಕೊಟ್ಟಿದ್ದು ಈ ದೀಪಾಲಿ.ಇದನ್ನೂ ಓದಿ Seva Sindhu: ಬಾಡಿಗೆದಾರರು ಅಥವಾ ಮಾಲೀಕರು ಉಚಿತ ವಿದ್ಯುತ್ ಪಡೆಯಲು ಅರ್ಜಿಯ ಲಿಂಕ್ ಓಪನ್ ಆಗಿದೆ, ಅರ್ಜಿಹಾಕುವ ಸುಲಭ ವಿಧಾನ ಇಲ್ಲಿದೆ

Leave a Reply

Your email address will not be published. Required fields are marked *