ನಮ್ಮ ದೇಹದಲ್ಲಿ ನಾಭಿ ಮುಖ್ಯ, ಆಯುರ್ವೇದದಲ್ಲಿ ನಾಭಿ ಚಿಕಿತ್ಸೆ ಮುಖ್ಯವಾಗಿದೆ. ನಾಭಿ ಸ್ಥಾನ ಪಲ್ಲಟವಾದರೆ ಯಾವೆಲ್ಲಾ ಸಮಸ್ಯೆ ಬರುತ್ತದೆ. ಪುರಾಣಗಳಲ್ಲಿಯೂ ಸಹ ನಾಭಿಯ ಮಹತ್ವವಿದೆ ಅದರ ಬಗ್ಗೆ ಹಾಗೂ ನಾಭಿ ಚಿಕಿತ್ಸೆಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸೌರವ್ಯೂಹಕ್ಕೆ ಮಾನವನ ದೇಹಕ್ಕೆ ಸಂಬಂಧವಿದೆ. ಮಾನವನ ದೇಹ ಸೌರವ್ಯೂಹದ ಒಂದು ಭಾಗ. ನಮ್ಮ ದೇಹದಲ್ಲಿ ಮಧ್ಯದಲ್ಲಿರುವ ನಾಭಿ ಮುಖ್ಯಪಾತ್ರವಹಿಸುತ್ತದೆ ನಾಭಿ ಸೂರ್ಯ ಇದ್ದಹಾಗೆ ನಾಭಿಯ ಸುತ್ತ ಲಿವರ್, ಕರುಳು ಮೊದಲಾದ ಭಾಗಗಳಿವೆ. ಸೌರವ್ಯೂಹದಲ್ಲಿ ಸೂರ್ಯನ ಸ್ಥಾನ ಪಲ್ಲಟಗೊಂಡರೆ ಉಳಿದ ಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ದೇಹದಲ್ಲಿ ನಾಭಿ ಸ್ಥಾನಪಲ್ಲಟಗೊಂಡರೆ ಉಳಿದ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ನಾಭಿ ಸಮಸ್ಯೆಯಿಂದ ಕರುಳು, ಕಿಡ್ನಿ, ಗರ್ಭಾಶಯ ಸಮಸ್ಯೆ ಉಂಟಾಗುತ್ತದೆ. ಸರಿಯಾದ ಸಮಯಕ್ಕೆ ಊಟ ಮಾಡಿದರೂ, ಖಾರ ತಿನ್ನದೆ ಇದ್ದರೂ, ಯಾವುದೇ ಕೆಟ್ಟ ಛಟಗಳು ಇಲ್ಲದೇ ಇದ್ದರೂ ಅಸಿಡಿಟಿ, ಗ್ಯಾಸ್ಟ್ರಿಕ್ ಬರುತ್ತದೆ. ನಾಭಿ ಜಾರಿದರೆ ಜಠರದಲ್ಲಿ ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆಗೆ ಯಾವುದೇ ಔಷಧಿ ತೆಗೆದುಕೊಂಡರೆ ಪರಿಹಾರವಾಗುವುದಿಲ್ಲ. ಸ್ಥಾನ ಪಲ್ಲಟವಾದ ನಾಭಿಯನ್ನು ಅದರ ಸ್ಥಾನಕ್ಕೆ ತಂದಾಗ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ. ದೇಹದಲ್ಲಿ ನಾಭಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ ಅವನು ಅನಾರೋಗ್ಯದಿಂದ ಇದ್ದಾನೆ ಎಂದೇ ಅರ್ಥ.

ರಾಮನಿಗೂ ರಾವಣನಿಗೆ ಯುದ್ಧ ನಡೆಯುತ್ತದೆ. ರಾಮನಿಂದ ರಾವಣನನ್ನು ಸೋಲಿಸಲು ಸಾಧ್ಯವಾಗುವುದಿಲ್ಲ. ಆಗ ರಾಮನಿಗೆ ಗುರುಗಳು ರಾವಣನ ನಾಭಿಗೆ ಗುರಿ ಇಟ್ಟು ಬಾಣ ಬಿಡುವಂತೆ ಹೇಳುತ್ತಾರೆ. ಆಗ ರಾಮನು ಹಾಗೆ ಮಾಡುತ್ತಾನೆ ಆಗ ರಾವಣ ಕುಸಿದುಬೀಳುತ್ತಾನೆ. ತಾಯಿಯ ಗರ್ಭದಲ್ಲಿ ಮೊದಲು ಮಗುವಿನ ನಾಭಿ ಸೃಷ್ಟಿಯಾಗುತ್ತದೆ ತಾಯಿ ಸೇವಿಸಿದ ಆಹಾರ ನಾಭಿಯ ಮೂಲಕ ಮಗು ತೆಗೆದುಕೊಳ್ಳುತ್ತದೆ. ನಾಭಿ ಚಿಕಿತ್ಸೆ ಮಾಡಿಸಿಕೊಂಡರೆ ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಮೊದಲಿನ ಜನರು ಭಟ್ಟಿ ಸರಿದಿದೆ ಎಂದು ಹೇಳುತ್ತಿದ್ದರು ಅದೆ ನಾಭಿಯ ಸಮಸ್ಯೆ. ನಾಭಿ ಚಿಕಿತ್ಸೆಯನ್ನು ಮನೆಯಲ್ಲಿ ಮಾಡಿಕೊಳ್ಳಲು ಬರುವುದಿಲ್ಲ. ತಜ್ನರ ಬಳಿ ಹೋದಾಗ ಅವರು ಪರಿಶೀಲಿಸಿ ನಾಭಿ ಚಿಕಿತ್ಸೆಯನ್ನು ಮಾಡುತ್ತಾರೆ. ಈ ಮಾಹಿತಿಯನ್ನು ತಪ್ಪದೇ ತಿಳಿಸಿ ನಾಭಿ ಚಿಕಿತ್ಸೆಯನ್ನು ಮಾಡಿಸಿಕೊಂಡು ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!