ಉದ್ಯೋಗದ ನಿರೀಕ್ಷೆಯಲ್ಲಿ ಇರುವಂತ ಯುವಕರಿಗೆ ಒಂದೊಳ್ಳೆ ಸುದ್ದಿಯಾಗಿದೆ ಈ ವಿಚಾರವನ್ನು ನಿಮ್ಮ ಆತ್ಮೀಯರಿಗೂ ತಿಳಿಸಿ ಭಾರತೀಯ ದಕ್ಷಿಣ ರೈಲ್ವೆ ಇಲಾಖೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಇದಕ್ಕೆ ವಿದ್ಯಾರ್ಹತೆ ಏನು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಅನ್ನೋದನ್ನ ಮುಂದೆ ನೋಡಿ.
ಒಟ್ಟು ಹುದ್ದೆಗಳು 667 ಹುದ್ದೆಗಳು, ಯಾವುವು ಅನ್ನೋದನ್ನ ಹೇಳುವುದಾದರೆ ಫಿಟ್ಟರ್ಗಳು, ವೆಲ್ಡರ್ಗಳು, ಎಲೆಕ್ಟ್ರಿಷಿಯನ್ಗಳು, ಮೆಕ್ಯಾನಿಕ್ಸ್ ಹುದ್ದೆಗಳಿವೆ. ಅರ್ಜಿಸಲ್ಲಿಸಲು ಅರ್ಜಿ ಶುಲ್ಕ100 ರೂಪಾಯಿಗಳು ಆಗಿವೆ. ಇನ್ನು ಅರ್ಜಿಸಲ್ಲಿಸಲು ಅಭ್ಯರ್ಥಿಗಳು ಇದೆ ತಿಂಗಳ 31 ಡಿಸೆಂಬರ್ ಒಳಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿ ಪಾಸ್ ಆಗಿರಬೇಕು ಹಾಗೂ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು ಅಷ್ಟೇ ಅಲಲ್ದೆ ಇದರಲ್ಲಿ ಇನ್ನು ಕೆಲಾವು ಹುದ್ದೆಗಳಿಗೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಪಾಸ್ ಆಗಿರಬೇಕು.
ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ ವಯಸ್ಸು 15 ವರ್ಷಗಳು ಮತ್ತು ಗರಿಷ್ಠ ವಯಸ್ಸು 23 ವರ್ಷಗಳಾಗಿರಬೇಕು, ಮಿಲಸಲಾತಿಯ ಆಧಾರದ ಮೇಲೆ ವಯಸ್ಸಿನ ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ 10ನೇ ತರಗತಿ ಮತ್ತು ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಮಾಡಲಾಗುತ್ತದೆ. ಯಾವುದೇ ಪರೀಕ್ಷೆಇರೋದಿಲ್ಲ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ srindianrailways.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.