Ultimate magazine theme for WordPress.

ಪ್ರಧಾನಿ ಮೋದಿಯ ದೇವಸ್ಥಾನ ಕಟ್ಟಿದ ರೈತ ಈ ದೇವಾಲಯ ಎಲ್ಲಿದೆ ಗೊತ್ತಾ

0 1

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೇವಾಲಯ ಕಟ್ಟಿ ಪ್ರತಿದಿನ ಪೂಜೆ ಮಾಡುತ್ತಿರುವ ರೈತ. ಅಷ್ಟಕ್ಕೂ ಈ ರೈತ ಮೋದಿಯವರ ದೇವಾಲಯ ಕಟ್ಟಲು ಕಾರಣವೇನು ಹಾಗೂ ಈ ದೇವಾಲಯದ ವಿಶೇಷತೆ ಏನು ಈ ದೇವಾಲಯ ಕಟ್ಟಲು ಖರ್ಚಾದ ಹಣವೆಷ್ಟು, ಅಷ್ಟೇ ಅಲ್ಲದೆ ಈ ದೇವಾಲಯ ಎಲ್ಲಿದೆ ಅನ್ನೋದನ್ನ ತಿಳಿಯುವುದಾದರೆ. ಈ ದೇವಾಲಯ ಇರುವುದು ತಮಿಳುನಾಡಿನ ಎರ್ಕುಡಿ ಗ್ರಾಮದಲ್ಲಿ.

ರೈತ ತನ್ನ ಸ್ವಂತ ಜಮೀನಿನಲ್ಲಿ ಮೋದಿಯವರ ದೇವಾಲಯವನ್ನು ನಿರ್ಮಿಸಿದ್ದಾನೆ. ಇದಕ್ಕೆ ಖರ್ಚಾಗಿರುವ ಹಣದ ಮೊತ್ತ ಒಂದು ಲಕ್ಷದ 12 ಸಾವಿರ ರೂಗಳು ಎಂಬುದಾಗಿ ಹೇಳಿದ್ದಾರೆ. ಮೋದಿಯವರ ದೇವಾಲಯ ಕಟ್ಟಲು ಕಾರಣ? ಭಾರತದ ಪ್ರಧಾನ ಮಂತ್ರಿ ಆಗಿರುವಂತ ಮೋದಿಯವರು ರೈತರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅಂತಹ ಯೋಜನೆಗಳಲ್ಲಿ ಈ ರೈತ ಫಲಾನುಭವಿಯಾಗಿ ಇದರ ಪ್ರಯೋಜವನ್ನು ಪಡೆದುಕೊಂಡಿದ್ದಾರೆ ಇದರಿಂದ ರೈತನಿಗೆ ತುಂಬಾನೇ ಒಳ್ಳೆಯದಾಗಿದೆ.

50 ವರ್ಷದ ಈ ರೈತನ ಹೆಸರು ಪಿ ಶಂಕರ್ ಎಂಬುದಾಗಿ ಈತ ಮೋದಿಯವರ ಯೋಜನೆಗಳಾದ ಕಿಸಾನ್‌ ಸಮ್ಮಾನ್‌ ನಿಧಿ, ಉಜ್ವಲಾ ಯೋಜನೆ, ಶೌಚಾಲಯ ಯೋಜನೆಗಳನ್ನು ಪಡೆದುಕೊಂಡಿದ್ದಾರೆ, ಅಷ್ಟೇ ಅಲ್ದೆ ಮೋದಿಯವರ ಅಭಿಮಾನಿ ಕೂಡ ಎಂಬುದಾಗಿ ಹೇಳುತ್ತಾರೆ. ಈ ಎಲ್ಲ ಯೋಜನೆಗಳ ಅಡಿಯಲ್ಲಿ ಅನುಕೂಲ ಮಾಡಿಕೊಟ್ಟ ಕಾರಣಕ್ಕೆ ಮೋದಿಯವರ ದೇವಾಲಯವನ್ನು ಕಟ್ಟಿ ಪ್ರತಿದಿನ ಆರತಿ ಬೆಳಗಿ ಪೂಜೆ ಮಾಡುತ್ತವೆ ಅನ್ನೋದನ್ನ ಈ ರೈತ ಹೇಳುತ್ತಾರೆ.

Leave A Reply

Your email address will not be published.