Sridevi Boni Kapoor: ಭಾರತ ಚಿತ್ರರಂಗದ ಎವರ್ ಗ್ರೀನ್ ನಟಿಯರ ಸಾಲಿಗೆ ಸೇರುವ ಹೀರೋಯಿನ್ ಗಳಲ್ಲಿ ಒಬ್ಬರು ಶ್ರೀದೇವಿ. ದಶಕಗಳ ಕಾಲ ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್ ಎರಡು ಕಡೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ, ತಮಗಾಗಿ ಒಂದು ಸ್ಥಾನ ಸೃಷ್ಟಿಸಿಕೊಂಡರು. ಇಂದು ಶ್ರೀದೇವಿ ಅವರು ಈ ಪ್ರಪಂಚದಲ್ಲಿ ಇಲ್ಲದೆ ಹೋದರು ಕೂಡ ಅವರ ಜನರು ನೆನಪು ಮಾಡಿಕೊಳ್ಳುವುದು ಮರೆತಿಲ್ಲ. ಶ್ರೀದೇವಿ ಅವರ ಬಗ್ಗೆ ಕೆಲವು ವಿಷಯಗಳು ಕೂಡ ಸುದ್ದಿಯಾಗುತ್ತಾ ಇರುತ್ತದೆ.
ಶ್ರೀದೇವಿ ಅವರು ಮೂಲತಃ ದಕ್ಷಿಣ ಭಾರತದ ಕಲಾವಿದೆ, ಇಲ್ಲಿಯೇ ಹುಟ್ಟಿ ಬೆಳೆದು ಮೊದಲು ತಮಿಳು, ತೆಲುಗು ಭಾಷೆಗಳಲ್ಲಿಯೇ ಹೆಚ್ಚು ನಟಿಸಿದರು. ಬಾಲನಟಿಯಾಗಿ ಕನ್ನಡದಲ್ಲಿ ಕೂಡ ನಟಿಸಿದ್ದಾರೆ. ಆದರೆ ನಾಯಕಿಯಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಹೆಚ್ಚಾಗಿ ನಟಿಸಿದ್ದಾ ಶ್ರೀದೇವಿ ಅವರು ಮುಂದಿನ ದಿನಗಳಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಟ್ಟರು.
ಅಲ್ಲಿಯೂ ತಮ್ಮ ಅಭಿನಯ, ಡ್ಯಾನ್ಸ್ ಇದೆಲ್ಲದರ ಮೂಲಕ ಸಿನಿಮಾ ತಯಾರಕರ ಮತ್ತು ಅಭಿಮಾನಿಗಳ ಗಮನ ಸೆಳೆದರು. ಶ್ರೀದೇವಿ ಅವರು ಸೂಪರ್ ಸ್ಟಾರ್ ಹೀರೋಯಿನ್ ಎಂದರೆ ತಪ್ಪಲ್ಲ. ಆಗಿನ ಸ್ಟಾರ್ ಹೀರೋ ಗಳಾದ ಕಮಲ್ ಹಾಸನ್, ರಜನಿಕಾಂತ್, ಅನಿಲ್ ಕಪೂರ್ ಸೇರಿದಂತೆ ಎಲ್ಲಾ ಹೀರೋಗಳ ಜೊತೆಗೂ ಸಿನಿಮಾ ಮಾಡಿದರು. ಒಂದು ಸಮಯದಲ್ಲಿ ಶ್ರೀದೇವಿ ಅವರ ಮೇಲಿನ ಕ್ರೇಜ್ ಹೇಗಿತ್ತು ಅಂದ್ರೆ ಅವರನ್ನು ನೋಡುವ ಸಲುವಾಗಿಯೇ ಅಭಿಮಾನಿಗಳು ಸಿನಿಮಾ ಥಿಯೇಟರ್ ಗೆ ಬರುತ್ತಿದ್ದರು..
ಹೀಗೆ ಸಿನಿಮಾ ರಂಗದಲ್ಲಿ ಸ್ಟಾರ್ ಆಗಿರುವಾಗಲೇ ಶ್ರೀದೇವಿ ಅವರು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ಬೋನಿ ಕಪೂರ್ ಅವರೊಡನೆ ಮದುವೆಯಾದರು. ಈ ದಂಪತಿಗೆ ಇಬ್ಬರು ಮಕ್ಕಳು ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್. ಆದರೆ ಶ್ರೀದೇವಿ ಅವರು ಮದುವೆಗಿಂತ ಮೊದಲೇ ಗರ್ಭಿಣಿ ಆಗಿದ್ದರು ಎನ್ನುವ ಒಂದು ವಿಷಯ ಕೂಡ ಸದ್ದು ಮಾಡಿತ್ತು. ಈ ವಿಚಾರಕ್ಕೆ ಈಗ ಶ್ರೀದೇವಿ ಅವರ ಪತಿ ಬೋನಿ ಕಪೂತ್ ಅವರು ಉತ್ತರ ನೀಡಿದ್ದಾರೆ.
ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ಬೋನಿ ಕಪೂರ್ ಅವರು, ಮದುವೆ ವಿಚಾರ ಮತ್ತು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಬೋನಿ ಕಪೂರ್ ಹಾಗೂ ಶ್ರೀದೇವಿ ಅವರ ಮದುವೆ ಆಗಿದ್ದು 1996ರ ಜೂನ್ 2ರಂದು.. ಮದುವೆಯಾಗಿ ಹಲವು ತಿಂಗಳುಗಳ ನಂತರ ಅವರಿಬ್ಬರು ಜೊತೆಯಾಗಿ ಮಾಧ್ಯಮದ ಎದುರು ಬಂದಾಗ ಶ್ರೀದೇವಿ ಅವರನ್ನು ನೋಡಿದವರು ಗರ್ಭಿಣಿ ಆಗಿರಬಹುದು ಎಂದು ಸುದ್ದಿ ಹಬ್ಬಿಸಿದ್ದರು.
ಆದರೆ ಮದುವೆಗಿಂತ ಮೊದಲೇ ಶ್ರೀದೇವಿ ಅವರು ಗರ್ಭಿಣಿ ಆಗಿರಲಿಲ್ಲ. ಆ ವೇಳೆಗೆ ಅವರು ಮದುವೆಯಾಗಿ ಒಂದು ವರ್ಷವಾಗಿತ್ತು. ಜಾನ್ವಿ ಕಪೂರ್ ಅವರು ಜನಿಸಿದ್ದು 1997ರ ಮಾರ್ಚ್ ನಲ್ಲಿ ಎಂದು ಬೋನಿ ಕಪೂರ್ ಅವರು ತಿಳಿಸಿದ್ದಾರೆ. ಈ ಮೂಲಕ ಆ ಗಾಸಿಪ್ ಗೆ ತೆರೆ ಎಳೆದಿದ್ದಾರೆ. ಹಾಗೆಯೇ ಶ್ರೀದೇಬಿ ಅವರದ್ದು ಸಹಜ ಸಾವು ಅಲ್ಲ, ಆಕಸ್ಮಿಕವಾದ ಸಾವು ಎಂದು ಕೂಡ ಹೇಳಿದ್ದಾರೆ.